HEALTH TIPS

ಹೇರ್‌ ಫಿಕ್ಸಿಂಗ್ ಮಾಡಲು ಹೋಗುವುದಾದರೆ ಈ ವಿಷಯಗಳ ಬಗ್ಗೆ ತಿಳಿದಿರಲಿ

 ಕೂದಲು ಅನ್ನೋದು ಪುರುಷ ಹಾಗೂ ಮಹಿಳೆಯ ಅಂದವನ್ನು ಹೆಚ್ಚಿಸುತ್ತದೆ. ಹೆಚ್ಚು ಕೂದಲು ಇದ್ದರೆ ಯಾರಿಗೆ ತಾನೇ ಬೇಡ ಹೇಳಿ ಆದರೆ ಇದೀಗ ವಂಶಪಾರಂಪರ್ಯವಾಗಿ, ಮಾನವನ ಜೀವನ ಶೈಲಿ, ವಾಯು ಮಾಲಿನ್ಯದಂತಹ ಸಮಸ್ಯೆಗಳಿಂದ ಕೂದಲು ಉದುರುವ ಪ್ರವೃತ್ತಿ ಬೆಳೆಯುತ್ತಿದೆ. ಅದರಲ್ಲೂ ಯುವಕರಲ್ಲಿ ಕೂದಲು ಉದುರುವ ಸಮಸ್ಯೆ ಹೇರಳವಾಗುತ್ತಿದ್ದು, ಅವರನ್ನು ಅಸಮಾಧಾನಿತರಂತೆ ಮಾಡುತ್ತಿದೆ. ಇನ್ನು ಇದರಿಂದ ಕೆಲವರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.

ಹೀಗಾಗಿ ಇದೀಗ ಕೂದಲು ಕಳೆದುಕೊಂಡವರು ಕೂದಲು ಕಸಿಯ ಮೊರೆ ಹೋಗುತ್ತಿದ್ದಾರೆ. ದಿಲ್ಲಿಯಂತಹ ನಗರಗಳಲ್ಲಿ ಹೆಚ್ಚಿನ ಯುವಕರು ಕೂದಲು ಮರು ಜೋಡಣೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಹಾಗಾದರೆ ಏನಿದು ಹೇರ್ ಫಿಕ್ಸಿಂಗ್. ಕೂದಲು ಕಸಿಯಿಂದ ಮತ್ತೆ ನ್ಯಾಚುರಲ್ ರೀತಿ ಕೂದಲು ಕಾಣಿಸುತ್ತಾ?

ನೋವು, ಆರೋಗ್ಯ ಸಮಸ್ಯೆ ಇಲ್ಲದೆ ಕೂದಲು ಕಸಿ ಮಾಡಿಕೊಳ್ಳುವುದು ಹೇಗೆ? ಇದರ ಬೆಲೆ ಎಷ್ಟಿರಬಹುದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಕೂದಲು ಉದುರುವಿಕೆಗೆ ಕಾರಣಗಳು ಯಾವುವು?

ಆನುವಂಶಿಕ (ಆಂಡ್ರೊಜೆನಿಕ್ ಅಲೋಪೆಸಿಯಾ) ಅತ್ಯಂತ ಸಾಮಾನ್ಯ ವಿಧವಾಗಿದೆ. ಒತ್ತಡ, ಅನಾರೋಗ್ಯಕರ ಜೀವನ ಶೈಲಿ, ಕೂದಲಿಗೆ ಆಘಾತಹಾರ್ಮೋನುಗಳ ಅಸಮತೋಲನ, ಥೈರಾಯ್ಡ್ ಸಂಬಂಧಿತ, ಮಗುವಿನ ಜನನದ ನಂತರ ಕೂದಲು ಉದುರುವುದು. ಆಟೋಇಮ್ಯೂನ್ ಕಾಯಿಲೆ, ಕೀಮೋಥೆರಪಿ ಇತ್ಯಾದಿ ಸೇರಿದಂತೆ ಔಷಧಿ. ವಯಸ್ಸಿಗೆ ತಕ್ಕಂತೆ ಕೂದಲು ತೆಳುವಾಗುವುದು. ಇವೆಲ್ಲ ಕೂದಲು ಉದುರಲು ಕಾರಣ.

ಕೂದಲು ಇಲ್ಲದಿದ್ದರೆ ಏನು ಆಗುತ್ತದೆ?

ಅನೇಕರಿಗೆ ಕೂದಲು ಇಲ್ಲದಿದ್ದರೆ ತನಗೆ ಬೊಕ್ಕ ತಲೆ ಎಂದು ಕೊರಗಿ ಹೋಗುವುದಂಟು. ಇನ್ನು ಕೂದಲು ಇಲ್ಲದೆ ಇರುವುದರಿಂದ ಅನೇಕರ ಮದುವೆ ಪ್ರಸ್ತಾಪಗಳು ಮುರಿದುಬೀಳುವುದುಂಟು ಅನೇಕರು ಆತ್ಮ ವಿಶ್ವಾಸ ಕಳೆದುಕೊಳ್ಳುತ್ತಾರೆ. ಅನೇಕರಿಗೆ ಕೂದಲು ಇಲ್ಲದಿದ್ದರೆ ಮುಖದ ಹಾಗೂ ದೇಹದ ಅಂದವನ್ನು ಕಳೆದುಕೊಳ್ಳುತ್ತಾರೆ. ಇನ್ನು ಕೂದಲು ಇಲ್ಲದೆ ಇರುವವರಿಗೆ ಎಲ್ಲದರಲ್ಲೂ ನಿರುತ್ಸಹ ಇರುತ್ತೆ. ಕಾರ್ಯಕ್ರಮಕ್ಕೆ ಹೋಗೋದು, ಉತ್ತಮ ಡ್ರೆಸ್ ಹಾಕಲು ಹಿಂದೇಟು ಹಾಕುವುದುಂಟು. ಇನ್ನು ಕೆಲವರು ಒತ್ತಡಕ್ಕೊಳಗಾಗಿ ಮಾನಸಿಕ ಖಿನ್ನತೆಗೆ ಜಾರುವುದುಂಟು. ಆದರೆ ಕೂದಲು ಇದ್ದರೆ ಆತ್ಮವಿಶ್ವಾಸ ವೃದ್ದಿಯಾಗಲಿದೆ. ಏನೇ ಕೆಲಸ ಮಾಡುವುದಾದರೂ ಧೈರ್ಯದಿಂದ ಮಾಡುತ್ತಾರೆ. ಎಲ್ಲ ವಿಚಾರಗಳಲ್ಲಿ ಉತ್ಸಾಹ ಇರುತ್ತೆ.

ಕೂದಲು ಕಸಿ ವಿಧಾನ ಎಂದರೇನು?

ಕೂದಲು ಕಸಿ ಎಂದರೇ ಎಲ್ಲರೂ ಹೆದರುತ್ತಾರೆ. ಮುಂದೇನು ಸಮಸ್ಯೆ ಆಗುತ್ತೆ? ನೋವು ಆಗುತ್ತೋ, ಆರೋಗ್ಯ ಹಾಳಾಗುತ್ತೆ ಎಂಬ ವರಿಯಲ್ಲಿ ಇರುತ್ತಾರೆ. ಆದರೆ ಅಂತಹ ಟೆನ್ಷನ್ ಬಿಡಿ ಯಾಕೆಂದರೆ ಶಸ್ತ್ರಕ್ರಿಯೆರಹಿತ ಕೂದಲು ಕಸಿ ಚಿಕಿತ್ಸೆ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದು ವೇಳೆ, ನೀವು ಕೂದಲು ಉದುರುತ್ತಿದ್ದರೆ, ನೀವು ಶಸ್ತ್ರಕ್ರಿಯೆ ರಹಿತ ಕೂದಲು ಕಸಿ ಚಿಕಿತ್ಸೆ ಹೋಗುವುದು ಉತ್ತಮ ಆಯ್ಕೆಯಾಗಿದೆ. ಇದು ಅತ್ಯಂತ ಸುರಕ್ಷಿತ ಹಾಗೂ ನೈಸರ್ಗಿಕ ಕೂದಲು ಪಡೆಯುವ ವಿಧಾನವಾಗಿದೆ. ಒಂದೇ ದಿನದಲ್ಲಿ ಯಾವುದೇ ನೋವಿಲ್ಲದೆ ಕೂದಲನ್ನು ಹೊಂದಿಕೊಳ್ಳಬಹುದು. ಈ ಮೂಲಕ ಮತ್ತೆ ನೀವು ಹಳೇಯ ರೀತಿ ಸುಂದರವಾಗಿ ಕಾಣಬಹುದು. ಹಾಗಾದರೆ ಈ ಶಸ್ತ್ರಕ್ರಿಯೆ ರಹಿತ ಕೂದಲು ಕಸಿ ಚಿಕಿತ್ಸೆ ವಿಧಾನವನ್ನು ತಿಳಿದುಕೊಳ್ಳಲು ಮುಂದೆ ಓದಲು ಮಿಸ್ ಮಾಡಬೇಡಿ.

ಯಾವ ರೀತಿ ಕೂದಲನ್ನು ಫಿಕ್ಸ್ ಮಾಡುತ್ತಾರೆ!

ಹೇರ್ ಫಿಕ್ಸಿಂಗ್ ಅಂದರೆ ಕೂದಲು ಇಲ್ಲದ ಜಾಗಕ್ಕೆ ಕೂದಲನ್ನು ಮತ್ತೆ ಜೋಡಿಸುವ ಒಂದು ವಿಧಾನವಾಗಿರುತ್ತದೆ. ಅನೇಕರಿಗೆ ತಲೆಯ ಮುಂದೆ ಹಾಗೂ ನೆತ್ತಿಯಲ್ಲಿ ಕೂದಲು ಉದುರುವುದು ಜಾಸ್ತಿ ಹೀಗಾಗಿ ನೆತ್ತಿ, ಹಾಗೂ ತಲೆಯ ಮುಂದಿನ ಭಾಗಕ್ಕೆ ಆ ವ್ಯಕ್ತಿಯ ಕೂದಲಿಗೆ ಹೊಂದಿಕೊಳ್ಳುವ ಕೂದಲನ್ನು ಮರುಜೋಡಣೆ ಮಾಡುವುದಾಗಿದೆ. ಮೊದಲಿಗೆ ಕೂದಲು ತಜ್ಞರು ವ್ಯಕ್ತಿಯ ಕೂದಲು ಹಾಗೂ ಆತನ ನೆತ್ತಿ ಅಥವಾ ಬುರುಡೆಯ ಪರಿಶೀಲನೆ ನಡೆಸಿ. ಆತನಿಗೆ ಸರಿಹೊಂದುವ ಕೂದಲನ್ನು ರೆಡಿ ಮಾಡುತ್ತಾರೆ. ಬಳಿಕ ಕೂದಲನ್ನು ಸಿಲಿಕಾನ್ ಬಾಂಡ್(ಒಂದು ರೀತಿಯ ಗಮ್) ನಿಂದ ವ್ಯಕ್ತಿಯ ನೆತ್ತಿಗೆ ಕೂದಲನನು ಫಿಕ್ಸ್ ಮಾಡುತ್ತಾರೆ. ವೈದ್ಯರುಗಳ ಪ್ರಕಾರ ಈ ಕೂದಲು ನೈಸರ್ಗಿಕವಾಗಿ ಇರುತ್ತಂತೆ. ಅಲ್ಲದೇ ಶಸ್ತ್ರಚಿಕಿತ್ಸೆ ಇಲ್ಲದೆ ಕೂದಲು ಕಸಿ ಮಾಡುವುದರಿಂದ ಯಾವುದೇ ನೋವು ಕೂಡ ಆಗುವುದಿಲ್ಲ. ಅಲ್ಲದೇ ಅಡ್ಡ ಪರಿಣಾಮ ಕೂಡ ಇರುವುದಿಲ್ಲ. ಇನ್ನು ಈ ರೀತಿ ಫಿಕ್ಸ್ ಮಾಡಿದ ಕೂದಲನ್ನು ಶ್ಯಾಂಪೂ, ಎಣ್ಣೆ ಹಚ್ಚಿ ಸ್ನಾನ ಮಾಡಿದರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಅಲ್ಲದೇ ಯಾವ ರೀತಿಯ ಚಟುವಟಿಕೆ ಕೂಡ ನಡೆಸಬಹುದು. ಆದರೆ ಇದು ಎಷ್ಟು ಕಾಲ ಇದೇ ರೀತಿ ಇರುತ್ತದೆ ಎನ್ನುವುದನ್ನು ವೈದ್ಯರೇ ಹೇಳುತ್ತಾರೆ. ಇನ್ನು ಈ ರೀತಿಯ ಫಿಕ್ಸಿಂಗ್ ನಿಂದ ನಮಗೆ ಕೂದಲು ನ್ಯಾಚುರಲ್ ನಂತೆ ಕಾಣುತ್ತದೆ. ಅಲ್ಲದೇ ವಿಗ್ ಇಟ್ಟ ರೀತಿಯಂತ ಕಾಣುವುದಿಲ್ಲ. ಹೀಗಾಗಿ ಮತ್ತೆ ನಿಮ್ಮನ್ನು ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ.

ಶಸ್ತ್ರಕ್ರಿಯೆರಹಿತ ಕೂದಲು ಜೋಡಿಸುವುದು ಶಾಶ್ವತ ಪರಿಹಾರವೇ?

ಬೊಕ್ಕುತಲೆ ಹೊಂದುವುದಕ್ಕೆ ಕೂದಲು ಜೋಡಿಸುವುದು ಶಾಶ್ವತ ಪರಿಹಾರವಲ್ಲ. ಯಾಕೆಂದರೆ ವೈದ್ಯರುಗಳೇ ಹೇಳುವ ಶಸ್ತ್ರಚಿಕಿತ್ಸೆ ರಹಿತ ಹೇರ್ ಫಿಕ್ಸಿಂಗ್ ಅಂದರೆ ನ್ಯಾಚುರಲ್ ಹಾಗೂ ನೋವು ರಹಿತವಾಗಿದೆ. ಹೀಗಾಗಿ ಇದು 6 ರಿಂದ 7 ವಾರಗಳ ಕಾಲ ಇರುತ್ತದಂತೆ. ನೈಸರ್ಗಿಕ ಕೂದಲಿನಂತೆ ನಮಗೆ ಶ್ಯಾಂಪೂ, ಎಣ್ಣೆ ಹಾಕಿ ಸ್ನಾನ ಮಾಡಬಹುದಾಗಿದೆ. ಅಲ್ಲದೇ ಕ್ರೀಡೆಗಳಲ್ಲಿ ಭಾಗಿಯಾಗಬಹುದಾಗಿದೆ. ಶಸ್ತ್ರಚಿಕಿತ್ಸೆ ಸಹಿತ ಕೂದಲು ಜೋಡಣೆಯಾದರೆ ಶಾಶ್ವತವಾಗಿ ಇರುತ್ತದೆ ಎಂದು ಹೇಳುತ್ತಾರೆ ವೈದ್ಯರು. ಆದರೆ ನೈಸರ್ಗಿಕವಾಗಿ ಕಾಣಬೇಕು, ನೋವು ಇರಬಾರದು, ಯಾವೂದಾದರೂ ಕಾರ್ಯಕ್ರಮಕ್ಕೆ ಕೂದಲು ಇರುವಂತೆ ಆಗಬೇಕು ಎಂದರೆ ಈ ರೀತಿಯ ವಿಧಾನವನ್ನು ಅನುಸರಿಸಬಹುದು ಉತ್ತಮ ಆಯ್ಕೆ.

ಶಸ್ತ್ರಕ್ರಿಯೆರಹಿತ ಕೂದಲು ಕಸಿ ಚಿಕಿತ್ಸೆಯ ಯಾವಾಗ ಒಳ್ಳೆಯದು?

ಹೆಚ್ಚು ಬಾಲ್ಡ್‌ನೆಸ್ ಉಂಟಾಗಿ, ಕಡಿಮೆ ಡೋನರ್ ಏರಿಯಾ ಇದ್ದಲ್ಲಿ ಹಾಗೂ ಶಸ್ತ್ರಕ್ರಿಯೆ ಮಾಡಿಸಿಕೊಳ್ಳಲು ಭಯಪಟ್ಟುಕೊಳ್ಳುವವರಿಗೆ ಶಸ್ತ್ರಕ್ರಿಯೆರಹಿತ ಕೂದಲ ಮರುಜೋಡಣೆಯ ಒಳ್ಳೆಯದು. ಅಂತವರಿಗೆ ವೈದ್ಯರು ಈ ರೀತಿಯ ಸಲಹೆ ನೀಡುತ್ತಾರೆ. ನಿಮಗೆ ಕೂದಲು ಇದೆ ಎಂದಾದರೆ ಯಾವುದೇ ಹೇರ್ ಫಿಕ್ಸಿಂಗ್ ಮಾಡಬೇಕೆಂದಿಲ್ಲ.

ಎಷ್ಟು ಖರ್ಚು ಆಗಬಹುದು?

ಕೂದಲು ಫಿಕ್ಸ್ ಮಾಡುವ ವಿಧಾನಕ್ಕೆ ಇಂತಿಷ್ಟೇ ದುಡ್ಡು ಎಂದು ಇಲ್ಲ. ಯಾಕೆಂದರೆ ನಮ್ಮ ಕೂದಲು ಹೋದ ಜಾಗದ ಮೇಲೆ ಇದು ಇರ್ಧಾರವಾಗುತ್ತದೆ. ಉದಾಹರಣೆಗೆ ಕಡಿಮೆ ಹೇರ್ ಲಾಸ್ ಆಗಿದ್ದರೆ ಕಡಿಮೆ ದುಡ್ಡು, ಜಾಸ್ತಿ ಹೇರ್ ಲಾಸ್ ಆಗಿದ್ದರೆ ಜಾಸ್ತಿ ದುಡ್ಡು. ಅಲ್ಲದೇ ಹೇರ್ ಫಿಕ್ಸಿಂಗ್ ಗೆ ಬಳಕೆ ಮಾಡುವ ಗುಣಮಟ್ಟದ ವಿಧಾನದಲ್ಲೂ ಬೇರೆ ಬೇರೆ ವೆಚ್ಚವಿದೆ. ಈ ರೀತಿಯ ಶಸ್ತ್ರಚಿಕಿತ್ಸೆ ರಹಿತವಾದ ಹೇರ್ ಫಿಕ್ಸಿಂಗ್ ಪ್ರಕ್ರಿಯಯಲ್ಲಿ ಫುಲ್ ಲೇಸ್ ಅನ್ನುವ ವಿಧಾನವಿದೆ. ಇದು ಅತ್ಯಂತ ಹೆಚ್ಚಿನ ಗುಣಮಟ್ಟ ಇರುವ ಹೇರ್ ಫಿಕ್ಸಿಂಗ್ ವಿಧಾನವಾಗಿದೆ. ಈ ರೀತಿಯ ಕೂದಲು ಕಸಿ ಮಾಡಿದರೆ ನಮಗೆ ಸಂಪೂರ್ಣ ನ್ಯಾಚುರಲ್ ಕೂದಲಿನಂತೆ ಅನುಭವ ಆಗುತ್ತದೆ. ಕೂದನೊಳಗೆ ಗಾಲಿ ಕೂಡ ಹರಿದಾಡುತ್ತೆ. ಇದು ಹಲವು ತಿಂಗಳ ಕಾಲ ಉಳಿಯುತ್ತದೆ. ಇಂತಹ ವಿಧಾನಕ್ಕೆ ಬೆಲೆ ಜಾಸ್ತಿ ಹೀಗಾಗಿ ಒಬ್ಬರಿಂದ ಒಬ್ಬರಿಗೆ ಕೂದಲು ಕಸಿ ಮಾಡಲು ಬೇರೆ ಬೇರೆ ವೆಚ್ಚವನ್ನು ಭರಿಸಬೇಕಾಗುತ್ತದೆ.


 

 

 

 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries