ಗೋವಾದಲ್ಲಿ ಸ್ಮೃತಿ ಇರಾನಿ ಪುತ್ರಿಯಿಂದ 'ಅಕ್ರಮ ಬಾರ್ ವ್ಯವಹಾರ': ಕಾಂಗ್ರೆಸ್ ಆರೋಪ

            ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಅಕ್ರಮವಾಗಿ ಬಾರ್ ವೊಂದನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಒತ್ತಾಯಿಸಿದೆ. ಆದರೆ, ಈ ಆರೋಪನ್ನು ಆಕೆ ಅಲ್ಲಗಳೆದಿದ್ದಾರೆ.

              ತನ್ನ ಕಕ್ಷಿದಾರರು ಗೋವಾದಲ್ಲಿ ಸಿಲ್ಲಿ ಸೊಲ್ಸ್ ಎಂದು ಕರೆಯಲಾಗುವ ರೆಸ್ಟೋರೆಂಟ್ ಮಾಲೀಕರಾಗಲಿ ಅಥವಾ ಅದರ ಕಾರ್ಯನಿರ್ವಾಹಕರಲ್ಲ, ಕಾಂಗ್ರೆಸ್ ಆರೋಪ ಮಾಡುತ್ತಿರುವಂತೆಯೇ ಸಂಬಂಧಿಸಿದ ಆಡಳಿತದಿಂದ ಯಾವುದೇ ಶೋಕಾಸ್ ನೋಟಿಸ್ ಬಂದಿಲ್ಲ ಎಂದು ಸ್ಮೃತಿ ಇರಾನಿ ಪುತ್ರಿ ಪರ ವಕೀಲ ಕಿರಾತ್ ನಗ್ರಾ ಹೇಳಿದ್ದಾರೆ. ದುರುದ್ದೇಶದಿಂದ ಇಂತಹ ಆರೋಪ ಮಾಡಲಾಗುತ್ತಿದೆ ಎಂದಿರುವ ವಕೀಲರು, ಯಾವುದೇ ವಾಸ್ತವಾಂಶ ಇಲ್ಲದೆ ತಪ್ಪಾಗಿ ಪ್ರಚಾರ ಮಾಡುತ್ತಿರುವುದು ದುರದೃಷ್ಟಕರವಾಗಿದೆ. ಆರೋಪದ ಹಿಂದೆ ಸ್ಮೃತಿ ಇರಾನಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಇರುವುದಾಗಿ ಅವರು ತಿಳಿಸಿದ್ದಾರೆ.

                 ಬಾರ್ ಗೆ ನೀಡಲಾಗಿರುವ ಶೋಕಾಸ್ ನೋಟಿಸ್ ಪ್ರತಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್, ಇದೊಂದು ಗಂಭೀರ ವಿಷಯವಾಗಿದೆ. ಆಡಳಿತದಿಂದ ಒತ್ತಡ ಬಂದ ನಂತರ ಅಬಕಾರಿ ಅಧಿಕಾರಿಗಳು ನೋಟಿಸ್ ನೀಡಿರುವುದಾಗಿ ವರದಿಯಾಗಿದೆ ಎಂದು ಹೇಳಿದೆ. ಸ್ಮೃತಿ ಕುಟುಂಬದ ವಿರುದ್ಧ ಗಂಭೀರವಾದ ಭ್ರಷ್ಟಾಚಾರದ ಆರೋಪವಿದೆ. ಆಕೆಯ ಪುತ್ರಿ ಗೋವಾದಲ್ಲಿ ಅಕ್ರಮವಾಗಿ ರೆಸ್ಟೋರೆಂಟ್ ವೊಂದನ್ನು ನಡೆಸುತ್ತಿದ್ದಾರೆ. ನಕಲಿ ಅನುಮತಿಯೊಂದಿಗೆ ಆ ಬಾರ್ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

            ಮೇ 2021ರಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಸ್ಮೃತಿ ಇರಾನಿ ಪುತ್ರಿ ಅನುಮತಿ ಪಡೆದಿದ್ದಾರೆ. ಗೋವಾದಲ್ಲಿ ಜೂನ್ 2022 ರಲ್ಲಿ ಲೈಸೆನ್ಸ್ ಪಡೆಯಲಾಗಿದೆ. ಆದರೆ, ಲೈಸನ್ಸ್ ಪಡೆದಿರುವ ವ್ಯಕ್ತಿ 13 ತಿಂಗಳ ಹಿಂದೆಯೇ ಮೃತಪಟ್ಟಿದ್ದಾರೆ. ಇದು ಅಕ್ರಮವಾಗಿದೆ. ಗೋವಾ ನಿಯಮ ಪ್ರಕಾರ ಒಂದು ಬಾರ್ ಗೆ ಮಾತ್ರ ಅನುಪತಿ ಪಡೆಯಬಹುದು ಆದರೆ, ಈ ರೆಸ್ಟೋರೆಂಟ್ ಎರಡು ಬಾರ್ ಲೈಸೆನ್ಸ್ ಪಡೆದಿದೆ .ಸ್ಮೃತಿ ಇರಾನಿ ಅವರನ್ನು ಕೂಡಲೇ ಕೇಂದ್ರ ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. 

              ಬಾರ್ ಹತ್ತಿರ ಮಾಧ್ಯಮದವರು ಸುಳಿದಾಡದಂತೆ ತಡೆಗಟ್ಟಲು ರೆಸ್ಟೋರೆಂಟ್ ಸುತ್ತಲೂ ಖಾಸಗಿ ಭದ್ರತಾ ಏಜೆನ್ಸಿಯ ಬೌನ್ಸರ್ ಗಳನ್ನು ನಿಯೋಜಿಸಲಾಗಿದೆ. ನಿಮ್ಮ ಅಧೀನದಲ್ಲಿ ಯಾರ ಪ್ರಭಾವದಿಂದ ಈ ರೀತಿ ಮಾಡಲಾಗುತ್ತಿದೆ. ಈ ಅಕ್ರಮ ಕೆಲಸದ ಹಿಂದೆ ಯಾರಿದ್ದಾರೆ ಎಂಬುದು ನಮಗೆ ಗೊತ್ತಾಗಬೇಕಾಗಿದೆ ಎಂದು ಪವನ್ ಖೇರ್ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries