HEALTH TIPS

ಪ್ರೀಮಿಯಂ ರೈಲು: ಊಟ, ತಿನಿಸು ದರದಲ್ಲೇ ಸೇವಾ ಶುಲ್ಕ ಸೇರ್ಪಡೆ

         ನವದೆಹಲಿಪ್ರೀಮಿಯಂ ರೈಲುಗಳಲ್ಲಿ ಮೊದಲೇ ಆರ್ಡರ್‌ ಮಾಡದಿರುವ ಊಟ ಮತ್ತು ಪಾನೀಯಗಳ ಮೇಲಿನ ಸೇವಾ ಶುಲ್ಕವನ್ನು ರೈಲ್ವೆಯು ತೆಗೆದುಹಾಕಿದೆ. ಆದರೆ, ತಿನಿಸುಗಳು, ಊಟಗಳ ದರಗಳಿಗೆ ₹ 50 ಸೇವಾ ಶುಲ್ಕವನ್ನು ಸೇರಿಸಲಾಗಿದೆ.

           ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಹಿಂದಿನ ನಿಯಮಗಳ ಪ್ರಕಾರ, ಪ್ರಯಾಣಿಕರು ತಮ್ಮ ಟಿಕೆಟ್‌ನೊಂದಿಗೆ ಊಟವನ್ನು ಕಾಯ್ದಿರಿಸದಿದ್ದರೆ ಪ್ರಯಾಣದ ವೇಳೆ ಅವರು ಆರ್ಡರ್‌ ಮಾಡುವಾಗ ಹೆಚ್ಚುವರಿಯಾಗಿ ₹50 ಪಾವತಿಸಬೇಕಾಗಿತ್ತು.

₹20 ಬೆಲೆಯ ಚಹಾ ಅಥವಾ ಕಾಫಿಗೂ ಈ ಶುಲ್ಕ ಅನ್ವಯವಾಗುತ್ತಿತ್ತು.

             ಈಗ ರಾಜಧಾನಿ, ದುರಂತೋ ಅಥವಾ ಶತಾಬ್ದಿಯಂತಹ ವಿಶೇಷ ರೈಲುಗಳಲ್ಲಿ ತಮ್ಮ ಊಟವನ್ನು ಮುಂಚಿತವಾಗಿ ಕಾಯ್ದಿರಿಸದ ಪ್ರಯಾಣಿಕರು ಚಹಾ ಮತ್ತು ಕಾಫಿಗೆ ₹ 20 ಪಾವತಿಸಿದರೆ ಸಾಕು. ಈ ಹಿಂದೆ ಮುಂಗಡ ಕಾಯ್ದಿರಿಸದ ಚಹಾ/ಕಾಫಿಗೆ ಸೇವಾ ಶುಲ್ಕ ಸೇರಿ ₹70 ಪಾವತಿಸಬೇಕಾಗಿತ್ತು.

ಈ ಹಿಂದೆ ಉಪಾಹಾರ, ಮಧ್ಯಾಹ್ನದ ಊಟ ಮತ್ತು ತಿನಿಸುಗಳ ದರ ಕ್ರಮವಾಗಿ ₹105, ₹185 ಮತ್ತು ₹90 ಆಗಿತ್ತು. ಪ್ರತಿ ಊಟಕ್ಕೆ ₹ 50 ಸೇವಾಶುಲ್ಕವನ್ನು ವಿಧಿಸಲಾಗುತ್ತಿತ್ತು. ಆದರೆ, ಈ ಶುಲ್ಕವನ್ನು ಉಪಾಹಾರ/ಊಟಗಳ ದರಕ್ಕೆ ಸೇರಿಸಲಾಗಿದೆ. ಹಾಗಾಗಿ, ಪ್ರಯಾಣಿಕರು ಈಗ ಇವುಗಳಿಗೆ ಕ್ರಮವಾಗಿ ₹155, ₹235 ಮತ್ತು ₹140 ಪಾವತಿಸಬೇಕಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries