HEALTH TIPS

ಜಿಲ್ಲೆಯಲ್ಲಿ ಉಚಿತ ಬೂಸ್ಟರ್ ಡೋಸ್ ವಿತರಣೆ ಆರಂಭ

            ಕಾಸರಗೋಡು: ಜಿಲ್ಲೆಯಲ್ಲಿ 18 ರಿಂದ 59 ವರ್ಷ ವಯಸ್ಸಿನವರಿಗೆ ಉಚಿತ ಬೂಸ್ಟರ್ (ಬೂಸ್ಟರ್) ಡೋಸ್ ಲಸಿಕೆ ವಿತರಣೆ ಆರಂಭವಾಗಿದೆ. ಈ ಹಿಂದೆ ಲಸಿಕೆ ಪಡೆದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಲಭ್ಯವಿರುತ್ತದೆ. ಎರಡನೇ ಡೋಸ್ ಪಡೆದ 6 ತಿಂಗಳ ನಂತರ ಪ್ರಸ್ತುತ ಮೀಸಲು ಪ್ರಮಾಣ ಪಡೆಯಲು ಅರ್ಹರಾಗಿರುತ್ತರೆ. ಲಸಿಕೆಗಳ ಲಭ್ಯತೆಯನ್ನು ಕೋವಿನ್ ಪೆÇೀರ್ಟಲ್ ಮೂಲಕ ತಿಳಿಯಬಹುದಾಗಿದ್ದು,  ಕೋವಿಶೀಲ್ಡ್ ಲಸಿಕೆ ಪಡೆಯಲು  ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬಹುದು.

               ಜಿಲ್ಲೆಯಲ್ಲಿ ಎರಡು ಡೋಸ್ ಲಸಿಕೆ ಪಡೆದ ಎಲ್ಲರಿಗೂ ಲಸಿಕೆ ತಲುಪಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ 18 ವರ್ಷಕ್ಕಿಂತ ಮೇಲ್ಪಟ್ಟವರು 10,24729 ಜನರು ಮೊದಲ ಡೋಸ್  ಮತ್ತು 8,65769 ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ.  12-14 ವರ್ಷದೊಳಗಿನ 27,995 ಜನರು ಮೊದಲ ಡೋಸ್ ಮತ್ತು 11,460 ಜನರು ಎರಡನೇ ಡೋಸ್ ಪಡೆದಿದ್ದರೆ, 15-17 ವರ್ಷದೊಳಗಿನ 52,380 ಜನರು ಮೊದಲ ಡೋಸ್  ಮತ್ತು 35,415 ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಕೋವಿಡ್ ಫ್ರಂಟ್ ಫೈಟರ್ಸ್ ಸೇರಿದಂತೆ 60 ವರ್ಷಕ್ಕಿಂತ ಮೇಲ್ಪಟ್ಟ 821 ಮಂದಿ ಇದುವರೆಗೆ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ. ಜು. 16ರಿಂದ 75 ದಿನಗಳವರೆಗೆ ಮಾತ್ರ ಉಚಿತ ವಿತರಣೆ ಇರುತ್ತದೆ. ಬೂಸ್ಟರ್ ಡೋಸ್ ಪಡೆದುಕೊಳ್ಳುವುದರಿಂದ  ರೋಗ ಪ್ರತಿರೋಧ ಶಕ್ತಿ ಹೆಚ್ಚಲು ಕಾರಣವಾಗುತ್ತಿದ್ದು, ಇದರಿಂದ ±ಪ್ರತಿಯೊಬ್ಬ ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಮನವಿ ಮಾಡಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries