ವಿಶ್ವ ಹೆಪಟೈಟಿಸ್ ದಿನ: ಲಿವರ್‌ ಆರೋಗ್ಯ ಕಾಪಾಡಲು ಈ ಆಹಾರಗಳ ಬೆಸ್ಟ್

 

ಜುಲೈ 28 ವಿಶ್ವ ಹೆಪಟೈಟಿಸ್ ದಿನ. ಲಿವರ್‌ನ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಪ್ರೊಟೀನ್‌ಗಳನ್ನು ಹೀರಿಕೊಳ್ಳಲು, ವಿಟಮಿನ್ಸ್‌ ಹಾಗೂ ಖನಿಜಾಂಶಗಳನ್ನು ಸಂಗ್ರಹಿಸಿಡಲು, ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕಲು ಲಿವರ್‌ನ ಆರೋಗ್ಯ ತುಂಬಾ ಮುಖ್ಯ.

ಲಿವರ್‌ ಆರೋಗ್ಯವಾಗಿಲ್ಲದಿದ್ದರೆ ದೇಹದ ಒಂದೊಂದು ಭಾಗವೇ ಹಾಳಾಗುವುದು, ಆದ್ದರಿಂದ ಲಿವರ್‌ನ ಆರೋಗ್ಯದ ಕಡೆ ತುಂಬಾನೇ ಗಮನ ನೀಡಬೇಕು. ಲಿವರ್‌ನ ಉರಿಯೂತ ಲಿವರ್‌ ಸಮಸ್ಯೆ ಹಾಗೂ ಲಿವರ್‌ ಕ್ಯಾನ್ಸರ್ ಉಂಟು ಮಾಡುತ್ತೆ.

ಆದ್ದರಿಂದ ಲಿವರ್‌ನ ಆರೋಗ್ಯದ ಕಡೆ ನಾವು ತುಂಬಾ ಗಮನ ಹರಿಸಬೇಕು.

ನಾವಿಲ್ಲ ಲಿವರ್‌ನ ಆರೋಗ್ಯಕ್ಕಾಗಿ ಬೆಸ್ಟ್‌ ಡಯಟ್ ಹೇಗಿರಬೇಕು ಎಂದು ಹೇಳಿದ್ದೇವೆ ನೋಡಿ:

ಗ್ರೇಪ್‌ಫ್ರೂಟ್:

ಗ್ರೇಪ್‌ಫ್ರೂಟ್‌ನಲ್ಲಿರುವ ನರಿಂಗೆನಿನ್ ಮತ್ತುಆ್ಯಂಟಿಆಕ್ಸಿಡೆಂಟ್‌ ಅಂಶವಿದ್ದು ಇದು ಉರಿಯೂತ ಕಡಿಮೆ ಮಾಡಿ ಜೀವಕಣಗಳನ್ನು ರಕ್ಷಣೆ ಮಾಡುತ್ತೆ.

* ಈ ಆ್ಯಂಟಿಆಕ್ಸಿಡೆಂಟ್‌ ಹೆಪಾಟಿಕ್ ಫೈಬ್ರೋಸಿಸ್ ಮತ್ತು ಫ್ಯಾಟಿ ಲಿವರ್‌ ತಡೆಗಟ್ಟುತ್ತೆ.

ಕಾಫಿ

* ಕಾಫಿ ಕುಡಿಯುವ ಅಭ್ಯಾಸ ಲಿವರ್‌ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದು ಲಿವರ್‌ನಲ್ಲಿ ಅಸಹಜ ಕಿಣ್ಣಗಳ ಉತ್ಪತ್ತಿಯನ್ನು ತಡೆಗಟ್ಟುತ್ತೆ

* ಕಾಫಿ ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗುವುದನ್ನು ತತಡೆಗಟ್ಟುತ್ತೆ.

ಕ್ಯಾಬೇಜ್‌, ಹೂಕೋಸು, ಬ್ರೊಕೋಲಿ

* ಈ ಬಗೆಯ ತರಕಾರಿ ಸೇವನೆ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು.

* ಯಕೃತ್ತಿನ ಕಿಣ್ವಗಳಲ್ಲಿ ರಕ್ತಸಂಚಾರ ಉತ್ತಮವಾಗಿಸುತ್ತೆ

ನಟ್ಸ್‌

ನಟ್ಸ್‌ನಲ್ಲಿ ಒಳ್ಳೆಯ ಕೊಬ್ಬಿನಂಶ, ವಿಟಮಿನ್ ಇ ಇರುವುದರಿಂದ ಮದ್ಯಪಾನಿಗಳಲ್ಲದವರಿಗೆ ಕಾಡುವ ಫ್ಯಾಟಿ ಲಿವರ್‌ ಸಮಸ್ಯೆ ಕಡಿಮೆಯಾಗುವುದು. ಯಾರು ದಿನಾ ಸ್ವಲ್ಪ ನಟ್ಸ್‌ ತಿನ್ನುತ್ತಾತೋ ಅವರಿಗೆ ಲಿವರ್‌ ಸಂಬಂಧಿತ ಸಮಸ್ಯೆ ಕಡಿಮೆಯಾಗುವುದು.

ಮೀನು

ಮೀನು ಸೇವನೆ ಕೂಡ ಲಿವರ್‌ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಂಶ ಲಿವರ್‌ನ ಉರಿಯೂತದ ಸಮಸ್ಯೆ ಕಡಿಮೆ ಮಾಡುವುದು. ಲಿವರ್‌ನಲ್ಲಿ ಒಮೆಗಾ 6 ಹೆಚ್ಚಾದರೆ ಲಿವರ್‌ ಸಮಸ್ಯೆ ಉಂಟಾಗುವುದು. ಒಮೆಗಾ 3 ಲಿವರ್‌ನಲ್ಲಿರುವ ಒಮೆಗಾ 6 ಪ್ರಮಾಣವನ್ನು ತಗ್ಗಿಸುವಲ್ಲಿ ಸಹಕಾರಿಯಾಗಿದೆ.

ಆಲೀವ್‌ ಎಣ್ಣೆ

ಲಿವರ್‌ನ ಆರೋಗ್ಯಕ್ಕೆ ಆಲೀವ್‌ ಎಣ್ಣೆ ಕೂಡ ತುಂಬಾ ಒಳ್ಳೆಯದು, ಇದು ದೇಹದಲ್ಲಿ ಚಯಪಚಯ ಕ್ರಿಯೆಗೆ ಸಹಕಾರಿಯಾಗಿದೆ. ಲಿವರ್‌ನಲ್ಲಿ ಕೊಬ್ಬಿನಂಶ ಕಡಿಮೆಯಾಗುವುದರಿಂದ ಲಿವರ್‌ನಲ್ಲಿ ರಕ್ತ ಸಂಚಾರ ಉತ್ತಮವಾಗುವುದು.


 

 

 

 

 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries