HEALTH TIPS

ನಟಿ ಮೇಲಿನ ಹಲ್ಲೆ ಪ್ರಕರಣ: ಅಂತಿಮ ವರದಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಿದ ಹೈಕೋರ್ಟ್

                ಕೊಚ್ಚಿ: ನಟಿ ಮೇಲಿನ ಹಲ್ಲೆ ಪ್ರಕರಣದ ಮುಂದಿನ ತನಿಖೆಯ ಅಂತಿಮ ವರದಿ ಸಲ್ಲಿಸಲು ಹೈಕೋರ್ಟ್ ಈ ತಿಂಗಳ 22ರವರೆಗೆ ಕಾಲಾವಕಾಶ ನೀಡಿದೆ. ಮೂರು ವಾರಗಳ ಕಾಲಾವಕಾಶದ ಪ್ರಾಸಿಕ್ಯೂಷನ್ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು. ಮೆಮೊರಿ ಕಾರ್ಡ್‍ನ ನಿಖರವಾದ ಪ್ರತಿ (ಕ್ಲೋನ್ಡ್ ಕಾಪಿ) ಮತ್ತು ಮಿರರ್ ಇಮೇಜ್ ಮತ್ತು ಅಂತಿಮ ವರದಿಯನ್ನು ಸಲ್ಲಿಸಲು ನ್ಯಾಯಾಲಯವು ಸಮಯವನ್ನು ನೀಡಿತು. ನ್ಯಾಯಮೂರ್ತಿ ಕೌಸರ್ ಎಡಪಗಂ ಆದೇಶ ನೀಡಿದ್ದಾರೆ.

              ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿರುವ ಮೆಮೊರಿ ಕಾರ್ಡ್ ನ ವಿಧಿವಿಜ್ಞಾನ ಪರೀಕ್ಷೆಯ ವರದಿಯಲ್ಲಿ ಮೂರು ಬಾರಿ ಕಾರ್ಡ್ ತೆರೆದಿರುವುದು ಬೆಳಕಿಗೆ ಬಂದಿರುವ ಸ್ಪಷ್ಟ ಸನ್ನಿವೇಶದಲ್ಲಿ ಪ್ರಾಸಿಕ್ಯೂಷನ್ ತನಿಖೆಗೆ ಹೆಚ್ಚಿನ ಕಾಲಾವಕಾಶ ಕೋರಿತ್ತು. ಈ ಹಿಂದೆ ಸಮಯಾವಕಾಶ ಕೋರಿದಾಗ ಇನ್ನು ಮುಂದೆ ಕಾಲಾವಕಾಶ ನೀಡುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿ ಇದೇ 15ರವರೆಗೆ ಕಾಲಾವಕಾಶ ವಿಸ್ತರಿಸಿತ್ತು. ನಿನ್ನೆ  ಮೂರನೇ ಬಾರಿಗೆ ಹೈಕೋರ್ಟ್ ಅವಧಿಯನ್ನು ವಿಸ್ತರಿಸಿದೆ.

                ಮುಂದಿನ ತನಿಖೆಗೆ ಕಾಲಾವಕಾಶ ವಿಸ್ತರಿಸಬೇಕು ಮತ್ತು ಮಾಜಿ ಡಿಜಿಪಿ ಶ್ರೀಲೇಖಾ ಅವರ ನೀಡಿರುವ ಹೇಳಿಕೆ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಸಂತ್ರಸ್ಥೆ ಒತ್ತಾಯಿಸಿದ್ದರು.

             ವಿಚಾರಣೆಯಲ್ಲಿರುವ 10 ಜನರಲ್ಲಿ ನ್ಯಾಯಾಲಯದ ಅಧಿಕಾರಿಗಳು, ತನಿಖಾ ತಂಡದ ಸದಸ್ಯರು, ವಕೀಲರು ಮತ್ತು ಪ್ರಾಸಿಕ್ಯೂಷನ್ ತಂಡದ ಸದಸ್ಯರು ಮೆಮೊರಿ ಕಾರ್ಡ್ ನ್ನು ಪರೀಕ್ಷಿಸಲು ಜವಾಬ್ದಾರಿ ನೀಡಲಾಗಿದೆ. ಸಿಡಿಆರ್ ಜೊತೆಗೆ, ಅಪರಾಧ ವಿಭಾಗವು ನ್ಯಾಯಾಲಯ ಮತ್ತು ಸುತ್ತಮುತ್ತಲಿನ ಕಣ್ಗಾವಲು ಕ್ಯಾಮೆರಾಗಳ ದೃಶ್ಯಗಳನ್ನು ಸಹ ಪರಿಶೀಲಿಸುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries