HEALTH TIPS

ಮಾಜಿ ಮುಖ್ಯಮಂತ್ರಿ ಇ.ಕೆ.ನಾಯನಾರ್ ಅವರ ಪತ್ನಿಯನ್ನು ಭೇಟಿಯಾದ ಸುರೇಶ್ ಗೋಪಿ


              ಕಣ್ಣೂರು: ಮಾಜಿ ಮುಖ್ಯಮಂತ್ರಿ ದಿವಂಗತ ಇ.ಕೆ.ನಾಯನಾರ್ ಅವರ ಪತ್ನಿ ಶಾರದಾ ಟೀಚರ್ ಅವರನ್ನು ಸುರೇಶ್ ಗೋಪಿ ಭೇಟಿ ಮಾಡಿದರು. ಕಲ್ಯಾಸ್ಸೆರಿಯಲ್ಲಿರುವ ನಾಯನಾರ್ ಅವರ ನಿವಾಸದಲ್ಲಿ ನಟ ಶಾರದಾ ಟೀಚರ್ ಅವರನ್ನು ಭೇಟಿಯಾದರು.
                 ಈ ಮಾಹಿತಿಯನ್ನು ಸ್ವತಃ ಸುರೇಶ್ ಗೋಪಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.
             ಇ.ಕೆ.ಯವರ ಪ್ರೀತಿಯ ಪತ್ನಿ ಶಾರದಾ ಟೀಚರ್ ಅವರೊಂದಿಗೆ ತಾನು ಕಲ್ಯಾಸ್ಸೆರಿಯಲ್ಲಿರುವ ನಾಯನಾರ್ ಸರ್ ಮನೆಯಲ್ಲಿ ಎಂದು ಸಾಮಾಜಿಕ ಜಾಲತಾಣದಲಲಿ ಪೋಟೋ ಹಂಚಿಕೊಂಡಿದ್ದಾರೆ.  ಅವರು ಕಲ್ಯಾಸ್ಸೆರಿಯ ಶಾರದಸ್‍ಗೆ ಬಂದು ಶಾರದಾ ಟೀಚರ್ ಜೊತೆಗೆ ಅಲ್ಪಹೊತ್ತು ಮಾತುಕತೆ ನಡೆಸಿ ತಿಂಡಿ ತಿಂದು ಹಿಂತಿರುಗಿದರು. ಬೆಳಗ್ಗೆ ಪರಶಿನಿಕಡವ್ ಮುತ್ತಪ್ಪನ ದೇವಸ್ಥಾನಕ್ಕೂ ಭೇಟಿ ನೀಡಿದರು.
           ಸುರೇಶ್ ಗೋಪಿ ಪಾಪ್ಪಾನ್ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಸುರೇಶ್ ಗೋಪಿ ಮತ್ತು ನಿರ್ದೇಶಕ ಜೋಶಿ ಸ್ವಲ್ಪ ಬಿಡುವಿನ ನಂತರ ಜೊತೆಯಾಗಿರುವ ಚಿತ್ರ ಪಾಪ್ಪಾನ್. ಚಿತ್ರದಲ್ಲಿ ಅಬ್ರಹಾಂ ಮ್ಯಾಥ್ಯೂ, ಮತ್ತಾನ್ ಪಾತ್ರದಲ್ಲಿ ಸುರೇಶ್ ಗೋಪಿ ನಟಿಸಿದ್ದಾರೆ ಮತ್ತು ಅವರ ಮಗ ಗೋಕುಲ್ ಸುರೇಶ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಜುಲೈ 29 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries