ಯುವ ಕಾಂಗ್ರೆಸ್ಸ್ ನಿಂದ ಕುಂಬಳೆಯಲ್ಲಿ ಪ್ರತಿಭಟನೆ


            ಕುಂಬಳೆ: ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತದ ವಿರುದ್ಧ ಮತ್ತು ದ್ವೇಷ ರಾಜಕಾರಣಕ್ಕೆ ಕೇಂದ್ರ ಸರ್ಕಾರ ಸೋನಿಯಾ ಗಾಂಧಿ ವಿರುದ್ಧ ಇಡಿ ಬಳಸುತ್ತಿರುವುದನ್ನು ವಿರೋಧಿಸಿ ಯುವ ಕಾಂಗ್ರೆಸ್ ಮಂಜೇಶ್ವರ ವಿಧಾನ ಸಭಾ ಸಮಿತಿ ಕುಂಬಳೆಲ್ಲಿ ಪ್ರತಿಭಟನೆ ನಡೆಸಿತು.
              ಮಂಜೇಶ್ವರ ವಿಧಾನಸಭಾ ಮಂಡಲದ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜುನೈದ್ ಉರ್ಮಿ ಅಧ್ಯಕ್ಷತೆ ವಹಿಸಿದ್ದರು.               ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಕ್ಷ್ಮಣ ಪ್ರಭು ಕುಂಬಳೆ, ನಾಸರ್ ಮೊಗ್ರಾಲ್, ಶಾನಿದ್ ಕಯ್ಯಂಕುಡೇಲ್,  ರವಿ ಪೂಜಾರಿ ಮುಂತಾದ ನೇತಾರರು ಕೇಂದ್ರ ಏಜೆನ್ಸಿಗಳನ್ನು ಬಳಸಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಕಿರುಕುಳ ಕೊಡುವುದನ್ನು ಖಂಡಿಸಿದರು. ಜೊತೆಗೆ ಕೇಂದ್ರ  ಸರ್ಕಾರದ ವೈಫಲ್ಯಗಳು ಪಕ್ಕದ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಇಬ್ಬರು ಯುವಕರ ಹತ್ಯೆಯನ್ನು ಖಂಡಿಸಿ, ಆತ್ಮ ಶಾಂತಿಗಾಗಿ ಪ್ರಾರ್ಥಿಸಲಾಯಿತು. ಸುಲೈಮಾನ್ ಊಜಂಪದವ್, ಶೆರಿಲ್ ಕೆ, ಕಮ್ಮುರುದ್ದೀನ್ ಪಾತಾಳ, ಲೋಕನಾಥ ಶೆಟ್ಟಿ, ಸಲೀಂ ಪುತ್ತಿಗೆ, ಕೇಶವ ಎಸ್.ಆರ್., ಇμರ್Áದ್ ಮಂಜೇಶ್ವರ, ಹನೀಫ್ ಮಂಜೇಶ್ವರ, ದಯಾನಂದ ಬಾಡೂರು, ಮೊಹಮ್ಮದ್ ಎ.ಕೆ., ರಾಮ ಕಾರ್ಲೆ, ಥಾಮಸ್ ರೋಡಿಗ್ರಾಸ್, ಉಮರ್ ಫಾರೂಕ್, ಜಮಾಲ್ ಭಾಗವಹಿಸಿದರು, ರಫೀಕ್ ಕಂದಲ್ ಸ್ವಾಗತಿಸಿ, ಪೃಥ್ವಿರಾಜ್ ಶೆಟ್ಟಿ ವಂದಿಸಿದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries