ಇಡುಕ್ಕಿಯಲ್ಲಿ ಸೆಕೆಂಡ್ ಅಂತರದಲ್ಲಿ ಎರಡು ಭೂಕಂಪನ                  ಇಡುಕ್ಕಿ: ಇಡುಕ್ಕಿ ಜಿಲ್ಲೆಯಲ್ಲಿ ಕಡಿಮೆ ತೀವ್ರತೆಯ ಭೂಕಂಪನ ಉಂಟಾಗಿದೆ.  ರಿಕ್ಟರ್ ಮಾಪಕದಲ್ಲಿ 3.1 ಮತ್ತು 2.95ರಷ್ಟು ಭೂಕಂಪಗಳು ಸಂಭವಿಸಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಹಾನಿಯಾಗಿಲ್ಲ.
              ಇಂದು ಮುಂಜಾನೆ 1.45ರ ಸುಮಾರಿಗೆ ಈ ಘಟನೆ ನಡೆದಿದೆ. ಸೆಕೆಂಡುಗಳ ಅಂತರದಲ್ಲಿ ¨ಎರಡು ಭೂಕಂಪಗಳು ಸಂಭವಿಸಿವೆ. ಎರ್ನಾಕುಳಂ ಮತ್ತು ಕೊಟ್ಟಾಯಂ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂದು ವರದಿಗಳಿವೆ. ಅಧಿಕಾರಿಗಳು ಮೂರು ಅನಲಾಗ್ ಮೀಟರ್‍ಗಳಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ.
          ಜಿಲ್ಲೆಯಲ್ಲಿ ಈ ಹಿಂದೆಯೂ ಇದೇ ರೀತಿಯಲ್ಲಿ ಸೆಕೆಂಡ್‍ಗಳ ವ್ಯತ್ಯಾಸದಲ್ಲಿ ಭೂಕಂಪನದ ಅನುಭವವಾಗಿತ್ತು. ನಿರಂತರ ಭೂಕಂಪಗಳು ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತೆಯ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಭೂಮಿ ಕಂಪಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ.
Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries