HEALTH TIPS

ಗೌಪ್ಯಗಳ ಗೂಡಾದ ನ್ಯೂ ಜನರೇಶನ್!: "ಅವಳಿಗೆ ಚಾಕಲೇಟ್ ಕೊಟ್ಟ ನಂತರವೂ ಮಾತನಾಡುವುದಿಲ್ಲ; ನನ್ನ ತಲೆ ಸಿಡಿದಂತಾಗುತ್ತಿದೆ, ತಲೆ ತಿರುಗುತ್ತಿದೆ"; ಪುಟಾಣಿ ಮಗು ತನ್ನ ತಾಯಿಗೆ ನೀಡಿದ ದೂರು ವೈರಲ್

                                      

                      ಶಾಲೆಯಲ್ಲಿ ತನ್ನ ಸ್ನೇಹಿತೆ ತನ್ನಲ್ಲಿ ಮಾತನಾಡುತ್ತಿಲ್ಲವೆಂದು ತಾಯಿಯೊಂದಿಗೆ ಭಾರೀ ದೂರು ಹೇಳುವ ಮಗುವೊಂದರ ವಿಶಿಷ್ಟ ವೀಡಿಯಿ ವಿಡಿಯೋ ವೈರಲ್ ಆಗಿ ಅಚ್ಚರಿ ಮೂಡಿಸಿದೆÉ. ಶಾಲೆಯ ತರಗತಿಯಲ್ಲಿ ಮಗು ತನ್ನ ಆಪ್ತ ಸ್ನೇಹಿತೆ ತನ್ನೊಡನೆ  ಮಾತನಾಡುತ್ತಿಲ್ಲ ಎಂದು ತನ್ನ ತಾಯಿಗೆ ದೂರು ನೀಡುತ್ತಿರುವುದು ಮತ್ತು ಭಾರೀ  ಚಿಂತೆಗೊಳಗಾಗಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ. 

              ತರಗತಿಯಲ್ಲಿ  ಆಮಿ ಎಂಬ ಮಗು ಇದೆಯೆಂದೂ ಅವಳು ತನಗೆ ತುಂಬಾ ತೊಂದರೆ ನೀಡುತ್ತಾಳೆ ಎಂದು ಮಗು ಹೇಳುತ್ತದೆ. ಚಾಕಲೇಟ್, ಸಿಹಿ ತಿಂಡಿ ಕೊಟ್ಟರೂ ಆಕೆ ತನ್ನಲ್ಲಿ ಸ್ನೇಹ ಬೆಳೆಸುವುದಿಲ್ಲ. ಅವಳು ಇತರ ಮಕ್ಕಳೊಂದಿಗೆ ಸುತ್ತಾಡುತ್ತಿದ್ದಾಳೆ ಎಂದು ಈ ಪುಟಾಣಿ ಚಿಂತಿತಳಾಗಿ ತನ್ನ ತಾಯಿಯಲ್ಲಿ ಅವಲತ್ತುಕೊಂಡಿದೆ.   ಅವಳು ಏನೇ ಆದರೂ ತನ್ನಲ್ಲಿ ಮಾತನಾಡಲು ಬರುವುದಿಲ್ಲ ಎಂದು ಅಂತರಂಗದ ಕಸಿವಿಸಿಯ ನೋವಲ್ಲಿ ದೂರಿಕೊಂಡಿದೆ. 


                   

           ಅವಳು ಗಟ್ಟಿ ದನಿಯಲ್ಲಿ ಪೆÇೀಡಿ(ಹೋಗೆ)  ಎಂದು ಬೈಯ್ಯುತ್ತಾಳೆ. ನಾನಾಕೆಯನ್ನು ಪುಟ್ಟ ಸ್ವರದಲ್ಲಷ್ಟೇ ಕರೆದಿರುವುದು. ಗೆಳತಿ ಮಾತನಾಡದ ಕಾರಣ ನನ್ನ ತಲೆ ಹಾಳಾಗಿದೆಯೆಂದೂ, ಹುಚ್ಚಳಂತಾಗುತ್ತದೆಯೆಂದೂ ಪುಟ್ಟ ಬಾಲಕಿ ತಾಯಿಯೊಡನೆ ಹೇಳುವ ಮಾತು ಒಂದು ಕ್ಷಣ ನಗುಬರಿಸಿದರೂ ಕಣ್ಣು ತೇವಗೊಳಿಸುವುದೂ ಹೌದು. 

              ನಾನು ಸ್ವಾರಿ ಹೇಳಬೇಕು, ಹೊರತು ಅವಳಲ್ಲ ಎಂದೂ ಮಗು ಹೇಳುತ್ತದೆ. ವೀಡಿಯೋ ವೈರಲ್ ಆಗುತ್ತಿರುವಂತೆ  ಹಲವರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಅಂತೂ ಏನೊಂದೂ ಕಲ್ಪನೆಗಳಿಲ್ಲದ ಈಗಿನ ಮಕ್ಕಳ ಮನೋಭಾವ ಎತ್ತ ಹೇಗೆ ಸಾಗುತ್ತಿದೆ ಎಂಬುದೂ ಕುತೂಹಲಕರ ಮತ್ತು ಅಷ್ಟೇ ಮಹತ್ತರವಾದುದು..ಎಲ್ಲಾ ದೃಷ್ಟಿಯಿಂದಲೂ..

            ವೀಡಿಯೊ: വീഡിയോ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries