ದೇವತಾರಾಧನೆ ಸಂಸ್ಕಾರಯಕ್ತವಾದರೆ ದೈವರಾಧನೆಯ ಸಂಸ್ಕøತಿಯ ಪ್ರತೀಕ: ಎಡನೀರುಶ್ರೀ: ಕನ್ನೆಪ್ಪಾಡಿಯಲ್ಲಿ ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿ ಅಭಿವೃದ್ಧಿಯ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಅಭಿಮತ: ನಿಧಿ ಸಂಚಯನಕ್ಕೆ ಚಾಲನೆ ನೀಡಿದ ಕೊಂಡೆವೂರು ಸ್ವಾಮೀಜಿ

                                  

                  ಬದಿಯಡ್ಕ: ಕನ್ನೆಪ್ಪಾಡಿಯಲ್ಲಿ ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿ ಸಾನಿಧ್ಯ ಶಕ್ತಿ ಅಭಿವೃದ್ಧಿ ಕಾರ್ಯದಂಗವಾಗಿ ವಿಜಾÐಪನ ಪತ್ರ ಬಿಡುಗಡೆ ಹಾಗೂ ನಿಧಿ ಸಂಚಯನ ಕಾರ್ಯಕ್ರಮ ಜರಗಿತು. 

                   ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ, ತುಳುನಾಡಿನ ಇತಿಹಾಸಕ್ಕೆ ಸೇರಿದ ಅವಿಭಕ್ತ ಕುಟುಂಬವೊಂದರ ಸಾನಿಧ್ಯ ಶಕ್ತಿಕೇಂದ್ರವೊಂದು ಇದೀಗ ನಾಡಿನ ಭಕ್ತರ ಅಭೀಷ್ಠೆಗಳನ್ನು ಈಡೇರಿಸುತ್ತಾ ಅಭಿವೃದ್ಧಿ ಕಾಣುತ್ತಿರುವುದು ಅಭಿಮಾನಕರ ಎಂದರು. ಸನಾತನ ಧರ್ಮದಲ್ಲಿ ದೇವತಾರಾಧನೆ ಸಂಸ್ಕಾರ ಉಳಿಸಿ ಬೆಳೆಸುವ ಹಾದಿಯಾದರೆ,  ದೈವರಾಧನೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಆದ್ದರಿಂದ ಇವೆರಡನ್ನು ಕಾಯ್ದುಕೊಂಡರೆ ಅಂತಹ ಸಾನಿಧ್ಯ ಶಕ್ತಿಗಳು ನಮ್ಮನ್ನು ಕಾಪಾಡುತ್ತದೆ ಎಂದು ನುಡಿದರು.


             ಸಭೆಯಲ್ಲಿ ನಿಧಿ ಸಂಚಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನಗೈದು, ನಾವು ಪ್ರಕೃತಿಪರವಾಗಿಯೂ, ದೈಹಿಕ ಪರವಾಗಿಯೂ ಪಡೆದುಕೊಂಡ ಸಂಪತ್ತಿನಿಂದ ಒಂದಂಶವನ್ನು ದೈವಿಕ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಿದರೆ ಪ್ರತಿಯೊಬ್ಬರ ಬದುಕು ಹಸನಾಗಲು ಹಾದಿಯಾಗಬಲ್ಲುದು ಎಂದರು.


                ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿ ಅಭಿವೃದ್ಧಿ ಸಮಿತಿ ಆಧ್ಯಕ್ಷ ಐ.ಲಕ್ಷ್ನಣ ಪೆರಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಜಯದೇವ ಖಂಡಿಗೆ, ಬದಿಯಡ್ಕ ಗ್ರಾಮ ಪಂ.ಸದಸ್ಯರಾದ ಜಯಶ್ರೀ, ಶಂಕರ ಡಿ, ಅರಿಯಪ್ಪಾಡಿ ಇರ್ವೆರ್ ಉಳ್ಳಾಕ್ಲು ಮಾಡದ ಅಧ್ಯಕ್ಷ ಚಿದಾನಂದ ಆಳ್ವ ಮಂಜಕೊಟ್ಟಿಗೆ, ಪೆರಡಾಲ ಕ್ಷೇತ್ರ ಅಧ್ಯಕ್ಷ ನ್ಯಾಯವಾದಿ ವೆಂಕಟ್ರಮಣ ಭಟ್, ಧ.ಗ್ರಾ.ಯೋಜನೆಯ ಮೇಲ್ವಿಚಾರಕ ದಿನೇಶ್ ಕೊಕ್ಕಡ, ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಸ್ವಾಮಿಕೃಪಾ ತರವಾಡಿನ ಮಾತೃಶ್ರೀ ಮದರು ಕನ್ನೆಪ್ಪಾಡಿ, ಚಂದ್ರಹಾಸ ರೈ ಪೆರಡಾಲ ಗುತ್ತು, ಧ.ಗ್ರಾ.ಯೋಜನೆಯ ಸೇವಾ ಪ್ರತಿನಿಧಿ ಬೇಬಿ.ಜೆ,ನೀರ್ಚಾಲು ಶ್ರೀಧರ್ಮಶಾಸ್ತಾ ಭಜನಾ ಮಂದಿರದ ಅಧ್ಯಕ್ಷ ಉದಯ ಮೈಕುರಿ, ನೀರ್ಚಾಲು ಶ್ರೀಕುಮಾರ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್, ಚುಕ್ಕಿನಡ್ಕ ಶ್ರೀಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಮಹೇಶ್ ಭಟ್ ವಳಕುಂಜ, ವಿಶ್ವ ತುಳುವೆರೆ ಆಯನೋದ ರೂವಾರಿ ಡಾ,ರಾಜೇಶ್ ಆಳ್ವ ಬದಿಯಡ್ಕ, ಅಭಿವೃದ್ಧಿ ಸಮಿತಿ ಪದಾಧಿಕಾರಿಗಳಾದ ಎಂ.ಮದನ, ಬಾಲಕೃಷ್ಣ ಸಿ.ಐ, ಎಸ್.ನಾರಾಯಣ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ರಕ್ಷಾಧಿಕಾರಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಪ್ರಸ್ತಾವಿಕವಾಗಿ ಮಾತನಾಡಿದರು. ಆಶೋಕ್ ಎಂ.ಅರಿಯಪ್ಪಾಡಿ ಪ್ರಾರ್ಥಿಸಿದರು.ಶಂಕರ ಮಾಡತ್ತಡ್ಕ ಸ್ವಾಗತಿಸಿ ಕಿಶೋರ್ ಕೆ. ವಂದಿಸಿದರು.ಜಯ ಮಣಿಯಂಪಾರೆ ನಿರೂಪಿಸಿದರು. Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries