HEALTH TIPS

ನಿರ್ಣಾಯಕ ಹಂತದಲ್ಲಿ ಕೈಕಳಕೊಂಡರು: ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದಕರಿಂದ ಕೈಕತ್ತರಿಸಲ್ಪಟ್ಟ ಆತ್ಮಕಥೆಗೆ ಪ್ರಶಸ್ತಿ; ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಪ್ರೊ.ಟಿ.ಜೆ.ಜೋಸೆಫ್


            ತ್ರಿಶೂರ್: ಧರ್ಮನಿಂದನೆ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಭಯೋತ್ಪಾದಕರಿಂದ ಕೈಕತ್ತರಿಸಲ್ಪಟ್ಟ  ತೊಡುಪುಳ ನ್ಯೂಮನ್ ಕಾಲೇಜಿನ ಮಾಜಿ ಶಿಕ್ಷಕ ಟಿ.ಜೆ.ಜೋಸೆಫ್ ಅವರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
          ಅಧ್ಯಾಪಕ ಟಿ.ಜೆ.ಜೋಸೆಫ್ ಅವರ ಆತ್ಮಕಥನ ‘ಆತುಪೆÇೀಕಥಾ ಒರ್ಮಗಳು’ ಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿ ನಗದು, ಪ್ರಮಾಣಪತ್ರ ಮತ್ತು ಫಲಕವನ್ನು ಹೊಂದಿದೆ. ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ ಸಚ್ಚಿದಾನಂದ ಅವರು ಪ್ರಶಸ್ತಿಗಳನ್ನು ಪ್ರಕಟಿಸಿದರು.
        ಜುಲೈ 4, 2010 ರಂದು, ಪಾಪ್ಯುಲರ್ ಫ್ರಂಟ್-ಎಸ್‍ಡಿಪಿಐ ಭಯೋತ್ಪಾದಕರು ಮುವಾಟ್ಟುಪುಳದ ನಿರ್ಮಲಾ ಕಾಲೇಜು ಬಳಿಯ ತೊಡುಪುಳ ನ್ಯೂಮನ್ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ಪ್ರ್ರೊಫೆಸರ್ ಟಿಜೆ ಜೋಸೆಫ್ ಅವರ ಬಲಗೈಯನ್ನು ಧರ್ಮನಿಂದೆಯ ಆರೋಪದಲ್ಲಿ ಕತ್ತರಿಸಿ ಹಾಕಿದ್ದÀರು. ಪ್ರಾಧ್ಯಾಪಕರು ಸಿದ್ಧಪಡಿಸಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಧರ್ಮನಿಂದನೆ ಇದೆ ಎಂದು ಆರೋಪಿಸಿ ದಾಳಿ ನಡೆದಿತ್ತು.
          ಘಟನೆಯ ನಂತರ, ಕಾಲೇಜು ಅಧಿಕಾರಿಗಳು, ಚರ್ಚ್ ಮತ್ತು ಸರ್ಕಾರವು ಪ್ರೊಫೆಸರ್ ಟಿಜೆ ಜೋಸೆಫ್ ಅವರನ್ನು ಕೈಬಿಟ್ಟಿತು. 2010 ರಲ್ಲಿ ನಡೆದ ಘಟನೆ ತನ್ನ ಕುಟುಂಬವನ್ನು ಎಲ್ಲ ರೀತಿಯಲ್ಲೂ ಧ್ವಂಸಗೊಳಿಸಿದೆ ಎಂದು ಪ್ರೊಫೆಸರ್ ಟಿಜೆ ಜೋಸೆಫ್ ನಂತರ ಹೇಳಿದ್ದರು. ದಾಳಿಯ ಯೋಜನೆ ರೂಪಿಸಿದ ಆರೋಪಿ ಕುಂಜುನ್ನಿಕರ ಎಂ.ಕೆ.ನಾಸರ್, ಗ್ಯಾಂಗ್ ನೇತೃತ್ವ ವಹಿಸಿದ್ದ ಆಶಾಮಣ್ಣೂರು ಸವಾದ್ ಹಾಗೂ ವಿದೇಶದಲ್ಲಿರುವ ನಾಸರ್ ಅವರನ್ನು ಪೋಲೀಸರು ಬಂಧಿಸಿಲ್ಲ. ನಂತರ ಎನ್‍ಐಎ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.
          ಟಿಜೆ ಜೋಸೆಫ್ ಕೇರಳದಲ್ಲಿ ತಾಲಿಬಾನಿಸಂಗೆ ಬಲಿಯಾದ ದುರ್ದೈವಿ. ಘಟನೆಯ ನಂತರ ಪೋಲೀಸರು ಟಿಜೆ ಜೋಸೆಫ್ ವಿರುದ್ಧ ಧರ್ಮನಿಂದನೆ ಪ್ರಕರಣ ದಾಖಲಿಸಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ಟಿ.ಜೆ.ಜೋಸೆಫ್ ಯಾವುದೇ ಧರ್ಮನಿಂದನೆ ಮಾಡಿಲ್ಲ ಎಂದು ನ್ಯಾಯಾಲಯ ಕಂಡುಹಿಡಿದು ಅವರನ್ನು ಖುಲಾಸೆಗೊಳಿಸಿತ್ತು.
           ಪೆÇ್ರಫೆಸರ್ ಜೋಸೆಫ್ ಅವರ ಜೀವನವನ್ನು ಬದಲಿಸಿದ ಪರೀಕ್ಷೆಯು ಮಾರ್ಚ್ 23, 2010 ರಂದು ನಡೆಯಿತು. ಎಂ.ಜಿ ಯೂನಿವರ್ಸಿಟಿ ಎಂ.ಎ/ಬಿ.ಎ ಮಲಯಾಳಂ ಕೋರ್ಸ್‍ಗಳಿಗೆ ಉಲ್ಲೇಖ ಪುಸ್ತಕವಾಗಿದ್ದ ಮೆಥಡಾಲಜಿ ಆಫ್ ಸ್ಕ್ರೀನ್ ರೈಟಿಂಗ್ ಎಂಬ ಪುಸ್ತಕದಿಂದ ಕೇಳಿದ ಪ್ರಶ್ನೆಗಳಿಗೆ ಇಂತಹ ಅಮಾನುಷತೆಗೆ ಬಲಿಯಾಗಬೇಕಾಯಿತು.  ಕೆಲವರು ಮುಹಮ್ಮದ್ ಎಂಬ ಹುಚ್ಚನ ಹೆಸರನ್ನು ಧರ್ಮನಿಂದೆಯೆಂದು ವ್ಯಾಖ್ಯಾನಿಸಿದರು. ಪ್ರಶ್ನೆಯು ಪಿಟಿ ಕುಂಜು ಮುಹಮ್ಮದ್ ಅವರ ಸ್ಕ್ರಿಪ್ಟ್ ಅನ್ನು ಆಧರಿಸಿದೆ.
       ಘಟನೆಯ ನಂತರ ಕಾಲೇಜು ಆಡಳಿತ ಮಂಡಳಿ ಟಿಜೆ ಜೋಸೆಫ್ ಅವರನ್ನು ಕೆಲಸದಿಂದ ವಜಾಗೊಳಿಸಿದೆ. ಆಗ ಶಿಕ್ಷಣ ಸಚಿವರಾಗಿದ್ದ ಸಿಪಿಎಂ ಮುಖಂಡ ಎಂ.ಎ.ಬೇಬಿ ಅವರು ಪ್ರಾಧ್ಯಾಪಕರನ್ನು ಮಥಾಯನ್ ಎಂದು ಕರೆದಿದ್ದರು. ಈ ಎರಡು ಘಟನೆಗಳು ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಹೆಚ್ಚು ಶಕ್ತಿ ತುಂಬಿದವು ಎಂದು ನಂತರ ಸೂಚಿಸಲಾಯಿತು. ನ್ಯಾಯಾಲಯದ ತೀರ್ಪಿನ ನಂತರವೂ ಸಿಪಿಎಂ ಪ್ರಾಧ್ಯಾಪಕರ ವಿರುದ್ಧ ತನ್ನ ನಿಲುವಿನಲ್ಲಿ ಅಚಲವಾಗಿತ್ತು.
            ಜುಲೈ 4 ರಂದು ಚರ್ಚ್‍ನಿಂದ ಹಿಂತಿರುಗುತ್ತಿದ್ದಾಗ, ಪೆÇ್ರಫೆಸರ್ ಟಿಜೆ ಜೋಸೆಫ್ ಅವರ ಕಾರನ್ನು ನಿಲ್ಲಿಸಿದ  ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದರು. ಅವರು ಕೊಡಲಿಯಿಂದ ಬಲ ಅಂಗೈಯನ್ನು ಕತ್ತರಿಸಿದರು. ದಾಳಿಕೋರರು ತುಂಡರಿಸಲ್ಪಟ್ಟ ಅವರ ಅಂಗೈ ಯನ್ನು ನಂತರ ಹೊಲಿಗೆ ಹಾಕದಂತೆ ಟಾರು ರಸ್ತೆಗೆ ಉಜ್ಜಿ ಎಸೆದಿದ್ದಾರೆ.  ಎಡಗಾಲು ಮತ್ತು ಎಡಗೈಗೆ ಹಲ್ಲೆ ನಡೆಸಿ ನಂತರ ದಾಳಿಕೋರರು ಬಾಂಬ್ ಸ್ಫೋಟಿಸಿ ಸ್ಥಳದಿಂದ ತೆರಳಿದ್ದಾರೆ. ತಡೆಯಲು ಬಂದ  ಸನ್ಯಾಸಿನಿ ಸಹೋದರಿಯ ಮೇಲೂ ದುಷ್ಕರ್ಮಿಗಳು ಥಳಿಸಿದ್ದರು.
            ನ್ಯಾಯಾಲಯವು ಈ ಪ್ರಕರಣದಲ್ಲಿ ಪ್ರಾಧ್ಯಾಪಕರನ್ನು ದೋಷಮುಕ್ತಗೊಳಿಸಿತು, ಆದರೆ ಚರ್ಚ್ ನಾಯಕತ್ವವು ಅವರನ್ನು ಮರು ಸೇರಿಸಲು ನಿರಾಕರಿಸಿತು. ಚರ್ಚ್ ನಾಯಕತ್ವವು ಪ್ರಾಧ್ಯಾಪಕರಿಗೆ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಅನುಮತಿ ನಿರಾಕರಿಸಿತು. ನಂತರ ಅವರ ಪತ್ನಿ ಸಲೋಮಿ ಆತ್ಮಹತ್ಯೆ ಮಾಡಿಕೊಂಡಿದ್ದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries