'ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದೆ ಕೇರಳದ ಜಿಹಾದಿಗಳು, ಶಿಕ್ಷೆಯಾಗದೆಂಬ ಭಯ ರಹಿತತೆ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಉತ್ತೇಜನ ನೀಡುತ್ತಿದೆ': ಎನ್ಐಎ ತನಿಖೆಗೆ ಕೇಂದ್ರ ಸಚಿವ ಅಮಿತ್ ಶಾಗೆ ಪತ್ರ


         ಬೆಂಗಳೂರು: ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್ಐಎಗೆ ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಗೃಹ ಸಚಿವರಿಗೆ ಪತ್ರ ರವಾನಿಸಿದ್ದಾರೆ. ಕೊಲೆಯ ಹಿಂದಿನ ಕೇರಳ ಸಂಬಂಧವನ್ನು ಪತ್ರದಲ್ಲಿ ಸ್ಪಷ್ಟವಾಗಿ ಎತ್ತಿ ತೋರಿಸಲಾಗಿದೆ.
          ದೇವ-ದೇವತೆಗಳ ನಾಡು ದಕ್ಷಿಣ ಕನ್ನಡ ಭಾಗದಲ್ಲಿ ಧಾರ್ಮಿಕ ಉಗ್ರಗಾಮಿ ಶಕ್ತಿಗಳು ದಾಳಿ ನಡೆಸುತ್ತಿವೆ. ಪ್ರವೀಣ್ ನೆಟ್ಟಾರು ಹತ್ಯೆಯ ದುಷ್ಕರ್ಮಿಗಳು ಬಳಸಿದ್ದ ಬೈಕ್ ಕೇರಳ ನೋಂದಣಿ ಹೊಂದಿದೆ ಎಂಬ ಸಾಕ್ಷಿ ಹೇಳಿಕೆ ಇದೆ. ಇದು ಘಟನೆಯ ಹಿಂದಿನ ಕೇರಳ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.
           ಘಟನೆಯ ಹಿಂದೆ ಪಾಪ್ಯುಲರ್ ಫ್ರಂಟ್-ಎಸ್ ಡಿಪಿಐ ಭಯೋತ್ಪಾದಕರ ಕೈವಾಡ ಇರುವುದು ಸ್ಪಷ್ಟವಾಗಿದೆ. ಇದರ ಹಿಂದಿರುವ ಷಡ್ಯಂತ್ರದ ತನಿಖೆಯಾಗಬೇಕು. ಕರ್ನಾಟಕದ ನೆರೆಯ ಕೇರಳದಲ್ಲಿ ಜಿಹಾದಿ ಶಕ್ತಿಗಳು ಪ್ರಬಲವಾಗಿವೆ ಎಂದು ಶೋಭಾ ವಿವರಿಸಿದ್ದಾರೆ.
           ಈ ಹಿಂದೆಯೂ ಜಿಲ್ಲೆಯಲ್ಲಿ ಇಂತಹ ಘಟನೆಗಳು ನಡೆದಿದ್ದವು. ಶಿಕ್ಷೆಯಾಗುವುದಿಲ್ಲ ಎಂಬ ಭಯವೇ ಅಪರಾಧವನ್ನು ಪುನರಾವರ್ತಿಸಲು ಅವರನ್ನು ಪೆÇ್ರೀತ್ಸಾಹಿಸುತ್ತದೆ. ಈ ವೇಳೆ ಕೇಂದ್ರ ಗೃಹ ಸಚಿವಾಲಯ ಘಟನೆಯಲ್ಲಿ ಗಂಭೀರವಾಗಿ ಮಧ್ಯಪ್ರವೇಶಿಸಿ ಪ್ರಕರಣವನ್ನು ಎನ್ ಐಎಗೆ ಒಪ್ಪಿಸುವಂತೆ ಪತ್ರದಲ್ಲಿ ಕೋರಲಾಗಿದೆ.
           ಹತ್ಯೆ ಮಾಡಿದ ನಂತರ ದಾಳಿಕೋರರು ಸುರಕ್ಷಿತವಾಗಿ ಕೇರಳ ಪ್ರವೇಶಿಸಿದ್ದಾರೆ ಎಂದು ಭಾವಿಸಬೇಕು. ಇಂತಹ ಘಟನೆಗಳ ಹಿಂದಿರುವ ಅಂತಾರಾಷ್ಟ್ರೀಯ ಷಡ್ಯಂತ್ರವನ್ನೂ ತನಿಖೆಗೆ ಒಳಪಡಿಸಿ ಪ್ರವೀಣ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಅಮಿತ್ ಶಾಗೆ ಕಳುಹಿಸಿರುವ ಪತ್ರದಲ್ಲಿ ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries