HEALTH TIPS

ಪಿಒಕೆ ಭಾರತದ ಅವಿಭಾಜ್ಯ ಅಂಗ: ರಾಜನಾಥ್‌ ಸಿಂಗ್‌

 

       ಶ್ರೀನಗರ: ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು 1994ರ ಸಂಸತ್ತಿನ ನಿರ್ಣಯವನ್ನು ಉಲ್ಲೇಖಿಸುತ್ತಾ, ಪಾಕ್‌ ಆಕ್ರಮಿತ ಕಾಶ್ಮೀರವು ಭಾರತದ ಭಾಗ. ಮತ್ತು ಇದು ಹೀಗೆಯೇ ಮುಂದುವರಿಯಲಿದೆ ಎಂದು ಹೇಳಿದರು.

        ಒಂದು ದಿನದ ಭೇಟಿಗಾಗಿ ಜಮ್ಮುವಿಗೆ ಬಂದಿರುವ ರಾಜನಾಥ್‌ ಸಿಂಗ್‌, ಜಮ್ಮುವಿನಲ್ಲಿ ಹತ್ಯೆಯಾದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್‌ ಅಧಿಕಾರಿಯ ಕುಟುಂಬದವರನ್ನು ಭೇಟಿಯಾದ ಬಳಿಕ, ಕಾರ್ಗಿಲ್‌ ವಿಜಯ್‌ ದಿವಸ್‌ ಸ್ಮರಣಾರ್ಥದ ಸಭೆಯೊಂದರಲ್ಲಿ ಭಾಗವಹಿಸಿ, 'ಪಿಒಕೆಯನ್ನು ಪ್ರಸ್ತುತ ಪಾಕಿಸ್ತಾನ ವಶಪಡಿಸಿಕೊಂಡಿದೆ' ಎಂದರು.

            'ಅಲ್ಲಿನ ಜನರು ಭಾರತದ ಅಭಿವೃದ್ದಿಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಪಿಒಕೆಯ ನಿರಾಶ್ರಿತರಿಗೆ ಸಂಪೂರ್ಣ ನ್ಯಾಯ ದೊರಕಬೇಕು. ಅದಕ್ಕಾಗಿ ಅವರು ಈಗ ಭಾರತದತ್ತ ನೋಡುತ್ತಿದ್ದಾರೆ' ಎಂದರು.

           'ನಾನು ಪಾಕಿಸ್ತಾನಕ್ಕೆ ಬುದ್ದಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ನೆರೆಯ ರಾಷ್ಟ್ರಕ್ಕೆ ನಮ್ಮ ಸಾಮರ್ಥ್ಯದ ಬಗ್ಗೆ ಈಗಾಗಲೇ ಗೊತ್ತಾಗಿದೆ. ಫೆಬ್ರವರಿ 1994ರ ಸಂಸತ್ತಿನ ನಿರ್ಣಯವು, ಆಕ್ರಮಣದ ಮೂಲಕ ವಶಪಡಿಸಿಕೊಳ್ಳಲಾದ ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳನ್ನು ಪಾಕಿಸ್ತಾನವು ತೆರವು ಮಾಡಬೇಕು ಎಂದು ಒತ್ತಾಯಿಸಿತು. ಹಾಗೆಯೇ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ದೃಢವಾಗಿ ಎದುರಿಸಲಾಯಿತು' ಎಂದು ರಾಜನಾಥ್‌ ಹೇಳಿದರು.

               'ಭಾರತವು ಪಾಕಿಸ್ತಾನದೊಂದಿಗೆ ಸ್ನೇಹವನ್ನು ಬಯಸುತ್ತದೆ. ಆದರೆ ನೆರೆಯ ದೇಶವು ಇದಕ್ಕೆ ವಿಭಿನ್ನವಾಗಿ ವರ್ತಿಸುತ್ತಿದೆ' ಎಂದು ಅವರು ವಿಷಾದ ವ್ಯಕ್ತಪಡಿಸಿದರು.

             'ಸ್ವಾತಂತ್ರ್ಯದ ನಂತರ, ಜಮ್ಮು ಮತ್ತು ಕಾಶ್ಮೀರ ರಣರಂಗವಾಯಿತು. ಆದರೆ ಸೈನಿಕರು ಮತ್ತು ಇತರ ಭದ್ರತಾ ಪಡೆಗಳ ಅತ್ಯುನ್ನತ ತ್ಯಾಗದಿಂದಾಗಿ, ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಹಾನಿ ಮಾಡುವ ಗುರಿಯನ್ನು ಹೊಂದಿರುವ ಎಲ್ಲಾ ಪ್ರಯತ್ನಗಳು ವಿಫಲವಾದವು. 1962ರಲ್ಲಿ ಪಂಡಿತ್ ನೆಹರು ಅವರ ಆಳ್ವಿಕೆ ಅವಧಿಯಲ್ಲಿ ಚೀನಾ ಲಡಾಖ್‌ನಲ್ಲಿ ನಮ್ಮ ಪ್ರದೇಶವನ್ನು ವಶಪಡಿಸಿಕೊಂಡಿತು. ನೆಹರು ಅವರ ಉದ್ದೇಶವನ್ನು ನಾನು ಪ್ರಶ್ನಿಸುವುದಿಲ್ಲ. ಉದ್ದೇಶಗಳು ಒಳ್ಳೆಯದಾಗಿರಬಹುದು, ಆದರೆ ನೀತಿಗಳಿಗೆ ಅವು ಅನ್ವಯಿಸುವುದಿಲ್ಲ. ಆದರೆ, ಇಂದಿನ ಭಾರತ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ' ಎಂದು ಅವರು ಪ್ರತಿಪಾದಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries