ಪೂರ್ವ ಸೈನಿಕ್ ಪರಿಷತ್ತಿನಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ


           ಕಾಸರಗೋಡು: ಅಖಿಲ ಭಾರತೀಯ ಪೂರ್ವ ಸೈನಿಕ  ಸೇವಾ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕದ ನೇತೃತ್ವದಲ್ಲಿ  ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಜಿಲ್ಲಾಧಿಕಾರಿ ಕಾರ್ಯಲಯ ಪರಿಸರದಲ್ಲಿ ನಡೆದ ಸಮಾರಂಭದಲ್ಲಿ ಪ್ರಭಾರ ಎಡಿಎಂ ನವೀನ್ ಕೆ ಬಾಬು ಮತ್ತು ಜಿಲ್ಲಾ ಸೈನಿಕ ಕಲ್ಯಾಣಾಧಿಕಾರಿ  ಚಂದ್ರನ್ ಕೆ.ಕೆ ಕಲೆಕ್ಟರೇಟ್ ಆವರಣದಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪುμÁ್ಪರ್ಚನೆ ಮಾಡಿದರು. ಕಲೆಕ್ಟರೇಟ್ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು, ಎಸ್.ಎಂ.ಎಸ್, ಎಬಿಪಿಎಸ್ ಎಸ್ ಪಿ ಸದಸ್ಯರುಗಳು  ಪುಷ್ಪನಮನ ಸಲ್ಲಿಸಿದರು.
        ಚಿನ್ಮಯ ಕಾಲೇಜಿನಲ್ಲಿ ಬೆಳಗ್ಗೆ 10.30ಕ್ಕೆ ನಡೆದ ಸಂಸ್ಮರಣಾ ಸಭೆಯಲ್ಲಿ ಜಿಲ್ಲಾ ಸೈನಿಕ ಅಧಿಕಾರಿ ಉದ್ಘಾಟಿಸಿದರು.  ಕಾಲೇಜು ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು, ಎಬಿಪಿಎಸ್ ಎಸ್.ಪಿ. ಸದಸ್ಯರೂ ಭಾಗವಹಿಸಿದ್ದರು.  ಅಗ್ನಿಪಥ ಸೇನಾ ನೇಮಕಾತಿ ಕ್ರಮಗಳು, ವಾಯುಸೇನಾ ನಿವೃತ್ತ ಅಧಿಕಾರಿ  ವಿನೋದ್ ಕುಮಾರ್ ಮಕ್ಕಳಿಗೆ ತರಗತಿ ನಡೆಸಿದರು.  ರಾಷ್ಟ್ರೀಯ ಭದ್ರತೆ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಸಹಿತ ಬಹುಮಾನ ನೀಡಿ ಅಭಿನಂದಿಸಲಾಯಿತು. ವಿಜಿ ಮತ್ತು ರಾಜೀವ ಪಾಲೋಟಿಲ್ ಮಾತನಾಡಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries