ಕರ್ನಾಟಕದ ಈ ರಸ್ತೆ! ಫೋಟೋ ಶೇರ್​​ ಮಾಡಿ ಸಾರಿಗೆ ಸಚಿವರು ಹೇಳಿದ್ದು ಹೀಗೆ

              ನವದೆಹಲಿ: ಸದ್ಯ ದೇಶದಲ್ಲಿ ರಸ್ತೆಗಳ ಅಭಿವೃದ್ಧಿ ಕ್ಷಿಪ್ರಗತಿಯಲ್ಲಿ ಸಾಗುತ್ತಿವೆ. ಹಿಂದೆಂದೂ ಕಾಣದ ರಸ್ತೆಗಳನ್ನು ಇಂದು ಕಾಣುತ್ತಿದ್ದೇವೆ. ಇದೀಗ ತಮ್ಮ ಟ್ವಿಟ್ಟರ್​​ನಲ್ಲಿ ಸಾರಿಗೆ ಸಚಿವರು ಹಂಚಿಕೊಂಡಿರುವ ಈ ರಸ್ತೆ ವಿದೇಶದಲ್ಲ, ಬದಲಾಗಿ ನಮ್ಮ ರಾಜ್ಯದ್ದೇ ಎನ್ನುವುದು ಇನ್ನೇನು ವಿಶೇಷ.

         ರಸ್ತೆ ನಿರ್ಮಾಣದ ಹಲವು ಯೋಜನೆಗಳು ಸದ್ಯ ಜಾರಿಯಲ್ಲಿದ್ದು, ದೇಶದಲ್ಲಿರುವ ಪ್ರಗತಿ ಕಾಣುತ್ತಿರುವ ರಸ್ತೆಗಳ ಬಗ್ಗೆ ಕೇಂದ್ರ ಸಾರಿಗೆ ನಿತಿನ್​ ಗಡ್ಕರಿ ಮಾಹಿತಿ ಹಂಚಿಕೊಂಡಿದ್ದಾರೆ.


                  ನಾಲ್ಕು ಹಾಗೂ ಆರು ಪಥದ ಹುನಗುಂದ ಹಾಗೂ ಹೊಸಪೇಟೆ ಮಾರ್ಗದಲ್ಲಿ ನಿರ್ಮಾಣವಾಗಿರುವ ವಿಶೇಷವಾಗಿ ಬೆಟ್ಟದಲ್ಲೇ ಸುರಂಗ ಕೊರೆದು ಪರಿಸರಕ್ಕೆ ಹಾನಿಯಾಗದೇ ನಿರ್ಮಿಸಲಾಗಿರುವ ಈ ರಸ್ತೆಯ ಫೋಟೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.                       ನೋಡಲು ವಿದೇಶಿ ರಸ್ತೆಯಂತೆ ಕಾಣುವ ಈ ಹೆದ್ದಾರಿ ಭಾರೀ ಆಕರ್ಷಕವಾಗಿದೆ. ಇನ್ನು ಈ ರಸ್ತೆ ಕೇರಳ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ. ಇದು 97ಕಿಮೀ ಉದ್ದವಿದ್ದು, ಬರೋಬ್ಬರಿ 946ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿದೆ.

            ಈ ಹೆದ್ದಾರಿಯು ಕರಡಿಧಾಮಕ್ಕೆ ಸಂಪರ್ಕ ಒದಗಿಸುವುದರಿಂದ ಅದಕ್ಕನುಗುಣವಾಗಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದ್ದು, ಸದ್ಯ ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಈ ಎಕ್ಸ್​ಪ್ರೆಸ್​ ವೇ ಸ್ವರ್ಗವಾಗಿದೆ ಎಂದು ಬಣ್ಣಿಸಿದ್ದಾರೆ.ಹುನಗುಂದ-ಹೊಸಪೇಟೆ ಎಕ್ಸ್​​ಪ್ರೆಸ್​​ ವೇ ವಿಶ್ವದರ್ಜೆಯ ಮೂಲಸೌಕರ್ಯವನ್ನು ಹೊಂದಿದೆ. ಕರ್ನಾಟಕದ ಹುನಗುಂದ,ಇಳಕಲ್​,ಕುಷ್ಟಗಿ, ಹಿಟ್ನಾಳ್​,ಹುಲಗಿ ಮತ್ತು ಹೊಸಪೇಟೆಯನ್ನು ಸಂಪರ್ಕಿಸುತ್ತದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries