HEALTH TIPS

ಬಲಿಷ್ಠ ಸರಕಾರ 'ಎಲ್ಲವನ್ನೂ ನಿಯಂತ್ರಿಸುತ್ತದೆ' ಎಂಬ ಅಭಿಪ್ರಾಯ ನಾವು ಬದಲಾಯಿಸಿದೆವು: ಪ್ರಧಾನಿ ಮೋದಿ

 

            ಚೆನ್ನೈ: ಬಲಿಷ್ಠ ಸರಕಾರವೆಂದರೆ ಎಲ್ಲವನ್ನೂ ಹಾಗೂ ಎಲ್ಲರನ್ನೂ ನಿಯಂತ್ರಿಸುವ ಸರಕಾರ ಎಂಬ ಸಾಮಾನ್ಯ ಅಭಿಪ್ರಾಯವನ್ನು ಕೇಂದ್ರದ ಎನ್‍ಡಿಎ ಸರಕಾರ ಬದಲಾಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

                ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವದಲ್ಲಿ ಅವರು ಇಂದು ಮಾತನಾಡುತ್ತಿದ್ದರು.

               "ಒಂದು ಬಲಿಷ್ಠ ಸರಕಾರ ಪ್ರತಿಯೊಂದು ಕ್ಷೇತ್ರಕ್ಕೆ ಸರಿಯುವುದಿಲ್ಲ. ಅದು ತನ್ನನ್ನು ಮಿತಿಗೊಳಿಸಿ ಜನರ ಪ್ರತಿಭೆಗಳಿಗೆ ಸ್ಥಾನ ಕಲ್ಪಿಸುತ್ತದೆ. ಒಂದು ಬಲಿಷ್ಠ ಸರಕಾರದ ಶಕ್ತಿಯು ತನಗೆ ಎಲ್ಲವೂ ತಿಳಿದಿರಲು ಹಾಗೂ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳುವ ವಿನಯಶೀಲತೆಯಲ್ಲಿ ಅಡಗಿದೆ. ಇದೇ ಕಾರಣಕ್ಕೆ ಎಲ್ಲಾ ಕ್ಷೇತ್ರಗಳಲ್ಲಿ ಇಂದು ಸುಧಾರಣೆ ಕಾಣುತ್ತಿದ್ದೀರಿ" ಎಂದು ಅವರು ಹೇಳಿದರು.

                ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಿದ ರೀತಿ ಅಭೂತಪೂರ್ವ ಎಂದು ಬಣ್ಣಿಸಿದ ಪ್ರಧಾನಿ ಭಾರತ ತನ್ನ ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಜನಸಾಮಾನ್ಯರಿಂದಾಗಿ ಈ ಸಾಂಕ್ರಾಮಿಕವನ್ನು ವಿಶ್ವಾಸದಿಂದ ಎದುರಿಸಿದೆ ಎಂದರು.

                  ಯುವ ಪದವೀಧರರನ್ನು ಶ್ಲಾಘಿಸಿದ ಪ್ರಧಾನಿ, ಇಂದು ಸಾಧನೆಗಳ ದಿನವಲ್ಲ ಬದಲು ಮಹತ್ವಾಕಾಂಕ್ಷೆಗಳ ದಿನವಾಗಿದೆ ಎಂದು ಹೇಳಿದರು. ಸ್ವಾಮಿ ವಿವೇಕಾನಂದರು 100 ವರ್ಷಗಳ ಹಿಂದೆ ಯುವಜನರನ್ನು ಸಮಸ್ಯೆ ಪರಿಹಾರಕರು ಎಂದು ಬಣ್ಣಿಸಿದ್ದನ್ನು ನೆನಪಿಸಿದ ಪ್ರಧಾನಿ, ಇಂದು ಇಡೀ ಜಗತ್ತು ಆಶಾವಾದದಿಂದ ಭಾರತದ ಯುವಜರನ್ನು ನೋಡುತ್ತಿದೆ, ನೀವು ದೇಶದ ಅಭಿವೃದ್ಧಿಯ ಹರಿಕಾರರು ಎಂದು ಪ್ರಧಾನಿ ಹೇಳಿದರು.

            ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.

                ಸುಮಾರು 3.68 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕ್ಷೇತ್ರದ ವಿವಿಧ ಪದವಿ ಪ್ರಮಾಣಪತ್ರಗಳನ್ನು ಇಂದು ಪಡೆದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries