ಮುಳ್ಳೇರಿಯ ಮಂಡಲ ಯುವ ವಿಭಾಗದ ನೇತೃತ್ವದಲ್ಲಿ ಪ್ರೇರಣಾ ವ್ಯಕ್ತಿತ್ವ ವಿಕಸನ ಕಾರ್ಯಾಗಾರ

                  ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲ ಮತ್ತು ಯವ ವಿಭಾಗದ ಆಶ್ರಯದಲ್ಲಿ `ಪ್ರೇರಣಾ' ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಭಾನುವಾರ ಜರಗಿತು. ಬೆಳಗ್ಗೆ ಗುರುವಂದನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಮಂಡಲ ಉಪಾಧ್ಯಕ್ಷೆ ಕುಸುಮ ಪೆರ್ಮುಖ ಅಧ್ಯಕ್ಷತೆ ವಹಿಸಿದ್ದರು. ಶಾಸನತಂತ್ರದ ಸಂಘಟನಾ ಕಾರ್ಯದರ್ಶಿ ಡಾ.ವೈ.ವಿ ಕೃಷ್ಣ ಮೂರ್ತಿ, ಮಾತೃತ್ವಮ್ ಪ್ರಧಾನೆ ಈಶ್ವರಿ ಬೇರ್ಕಡವು, ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಮಾತೃ ಪ್ರಧಾನೆ ಗೀತಾ ಮುಳ್ಳೇರಿಯ, ಪಳ್ಳತಡ್ಕ ವಲಯ ಅಧ್ಯಕ್ಷ ಪರಮೇಶ್ವರ ಭಟ್ ಪೆರುಮುಂಡ, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಗುಂಪೆ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಗುತ್ತಿಗಾರು ವಲಯ ಕಾರ್ಯದರ್ಶಿ ಶ್ರೀಕೃಷ್ಣ ಪೆರ್ಮುಖ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಂಚಾಲಕ ಜಯಪ್ರಕಾಶ ಪಜಿಲ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದು ಶುಭ ಹಾರೈಸಿದರು. 

          18 ವರ್ಷದ ಮೇಲ್ಪಟ್ಟು, 40 ವರ್ಷದವರಿಗಾಗಿ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಾಲಸುಬ್ರಹ್ಮಣ್ಯ ಭಟ್ ಮತ್ತು ಶ್ರೀಪ್ರಕಾಶ ಕುಕ್ಕಿಲ ತರಬೇತಿ ನಡೆಸಿಕೊಟ್ಟರು. ತರಬೇತಿಯ ಪರಿವೀಕ್ಷಕರಾಗಿ ಮತ್ತು ಸಹಾಯಕರಾಗಿ ಸೇವಾಖಂಡದ ವಿಜಯಲಕ್ಷ್ಮೀ, ಸುರೇಶ ಭಟ್ಟ ಸುರ್ಡೇಲು ಮತ್ತು ಶ್ರೀನಿಧಿ ಕುಕ್ಕಿಲ ಸಹಕರಿಸಿದರು. ಕೌಶಲ್ಯಯುಕ್ತ ಮಾತು, ವಿವಿಧ ಚಟುವಟಿಕೆ, ಆಟಗಳು, ನಾಟಕ, ಮೂಲಕ 4 ಅವಧಿಗಳ ಕಾರ್ಯಾಗಾರ ನಡೆಸಲಾಯಿತು. ಸಂಜೆ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಾರ್ಪಣೆ  ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಪ್ರಶಂಸನಾ ಪತ್ರ ನಿಡಿ ಅಭಿನಂದಿಸಲಾಯಿತು. ಮುಳ್ಳೇರಿಯ ಮಂಡಲ ಯುವ ವಿಭಾಗ ಪ್ರಧಾನ ಕೇಶವಪ್ರಕಾಶ ಮುಣ್ಚಿಕಾನ ನಿರೂಪಣೆಗೈದರು.


 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries