HEALTH TIPS

ಭಾರತಕ್ಕೆ ಆರ್ಥಿಕ ಹಿಂಜರಿತದ ಅಪಾಯವಿಲ್ಲ; ಏಷ್ಯಾದ ಅನೇಕ ದೇಶಗಳಲ್ಲಿ ಹಣಕಾಸು ದುಸ್ಥಿತಿ ಸಾಧ್ಯತೆ

 

          ನವದೆಹಲಿ: ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಕೇಂದ್ರೀಯ ಬ್ಯಾಂಕ್​ಗಳು ಹಣದುಬ್ಬರ ತಡೆಯುವ ಉದ್ದೇಶದಿಂದ ಬಡ್ಡಿ ದರಗಳನ್ನು ಭಾರಿ ಪ್ರಮಾಣದಲ್ಲಿ ಏರಿಸುತ್ತಿರುವುದರಿಂದ ಏಷ್ಯಾದ ಅನೇಕ ದೇಶಗಳು ಆರ್ಥಿಕ ಹಿಂಜರಿತಕ್ಕೆ (ರಿಸೆಶನ್) ಒಳಗಾಗುವ ಸಾಧ್ಯತೆ ಬಲವಾಗಿದೆ.

ಆದರೆ, ಭಾರತ ಬಿಕ್ಕಟ್ಟಿನ ಹಂತಕ್ಕೆ ಹೋಗುವ ಅಪಾಯ ಶೂನ್ಯವಾಗಿದೆ ಎಂದು ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ.

           ಈಗಾಗಲೇ ತೀವ್ರ ಹಣಕಾಸು ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ ಮುಂದಿನ ವರ್ಷ ರಿಸೆಶನ್​ಗೆ ಒಳಗಾಗುವುದು ಶೇಕಡ 85ರಷ್ಟು ಸಾಧ್ಯತೆಯಿದೆ. ಹಿಂದಿನ ಸಮೀಕ್ಷೆಯಲ್ಲಿ ಈ ಸಾಧ್ಯತೆ ಶೇಕಡ 33 ಇತ್ತು. ನ್ಯೂಜಿಲೆಂಡ್ (33%), ತೈವಾನ್ (20%), ಆಸ್ಟ್ರೇಲಿಯಾ (20%) ಮತ್ತು ಫಿಲಿಪ್ಪೀನ್ಸ್ (8%) ಕೂಡ ಆರ್ಥಿಕ ಹಿಂಜರಿತ ಎದುರಿಸುವ ಅಪಾಯವಿದೆ ಎಂದೂ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಚೀನಾದ ಅವಕಾಶ ಶೇಕಡ 25ರಷ್ಟಿದ್ದು ದಕ್ಷಿಣ ಕೊರಿಯಾ ಮತ್ತು ಜಪಾನ್ ರಿಸೆಶನ್​ಗೆ ಜಾರುವ ಸಾಧ್ಯತೆ ಶೇಕಡ 20ರಷ್ಟಿದೆ ಎಂದು ಮೂಡೀಸ್ ಅನಾಲಿಟಿಕ್ಸ್ ಇನ್​ಕಾರ್ಪೆರೇಶನ್​ನ ಪ್ರಧಾನ ಏಷ್ಯಾ ಪೆಸಿಫಿಕ್ ಆರ್ಥಿಕತಜ್ಞ ಸ್ಟೀವನ್ ಕೊಷಾರ್​ನೆ ಹೇಳಿದ್ದಾರೆ. ಅಮೆರಿಕ (ಶೇ. 40) ಮತ್ತು ಯುರೋಪ್ ದೇಶಗಳಿಗೆ (ಶೇ. 50-55) ಹೋಲಿಸಿದರೆ ಏಷ್ಯಾದ ಆರ್ಥಿಕತೆಗಳು ಹೆಚ್ಚಿನ ತಾಳಿಕೆ ಸಾಮರ್ಥ್ಯ ಹೊಂದಿವೆ.

                   ಸೆನ್ಸೆಕ್ಸ್, ನಿಫ್ಟಿ ಶೇ. 1 ಕುಸಿತ: ಎಫ್​ಡಿಐ ಹಿಂತೆಗೆತ ಹಾಗೂ ಮಿಶ್ರ ಜಾಗತಿಕ ಪ್ರವೃತ್ತಿಯ ಹಿನ್ನೆಲೆಯಲ್ಲಿ ಬಿಎಸ್​ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಷೇರುಗಳ ಮೌಲ್ಯದಲ್ಲಿ ಮಂಗಳವಾರ ಶೇಕಡ 1ರಷ್ಟು ಕುಸಿತವಾಗಿದೆ. ಬಿಎಸ್​ಇಯಲ್ಲಿ 497.73 ಅಂಕ ಇಳಿಕೆಯಾಗಿ 55,268.49ರಲ್ಲಿ ಮುಕ್ತಾಯವಾಯಿತು. ನಿಫ್ಟಿಯಲ್ಲಿ 147.15 ಅಂಕ ಕುಸಿತವಾಗಿ ದಿನದ ವ್ಯವಹಾರ 16,483.85ರಲ್ಲಿ ನಿಂತಿದೆ. ವಿನಿ ಮಯ ದರ ಡಾಲರ್​ಗೆ 79.78 ರೂ. ಇತ್ತು.

                  ವಿದೇಶಿ ಪ್ರವಾಸಿಗರಿಗೆ ಜಿಎಸ್​ಟಿ ವಾಪಸ್: ವಿದೇಶಿ ಪ್ರವಾಸಿಗರು ಭಾರತದಲ್ಲಿ ಸ್ಥಳೀಯವಾಗಿ ಸಂಚಾರ ಮತ್ತು ಖರೀದಿಗೆ ಪಾವತಿ ಸಿದ್ದ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) ಹಿಂದಿರುಗಿಸಲು (ರೀಫಂಡ್) ಸರ್ಕಾರ ಚಿಂತನೆ ನಡೆಸಿದೆ. ಭಾರತದ ನಿವಾಸಿಯಲ್ಲದ ಹಾಗೂ ಆರು ತಿಂಗಳಿಗಿಂತ ಹೆಚ್ಚು ಅವಧಿಗೆ ಭಾರತದಲ್ಲಿ ನೆಲೆಸದ ವಲಸೆಯೇತರ ಉದ್ದೇಶಕ್ಕೆ ಬಂದಿದ್ದ ವಲಸಿಗರು ಮಾಡಿದ ಖರೀದಿಯ ಮೇಲಿನ ಜಿಎಸ್​ಟಿಯನ್ನು ರೀಫಂಡ್ ಮಾಡಲು 5 ವರ್ಷದ ಹಿಂದೆ ಜಾರಿ ಮಾಡಿದ ಸಮಗ್ರ ಜಿಎಸ್​ಟಿ ಕಾನೂನಿನಲ್ಲಿ ಅವಕಾಶವಿದೆ.

                   ಅರ್ಧದಷ್ಟು ಐಟಿ ವ್ಯವಹಾರ ಬಾಚಿಕೊಂಡ ಭಾರತ: 2020ರಿಂದೀಚೆಗೆ ನಡೆದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಜಾಗತಿಕ ವ್ಯವಹಾರಗಳಲ್ಲಿ ಅಗ್ರ ಅರ್ಧದಷ್ಟನ್ನು ಭಾರತೀಯ ಐಟಿ ಕಂಪನಿಗಳು ಬಾಚಿಕೊಂಡಿವೆ ಎಂದು ಎಚ್​ಎಫ್​ಎಸ್ ರೀಸರ್ಚ್ ಸಂಸ್ಥೆಯ ಅಂಕಿಅಂಶ ತಿಳಿಸಿದೆ. ಡೇಮ್ಲರ್​ನಿಂದ ಇನ್ಪೋಸಿಸ್ 25 ಸಾವಿರ ಕೋಟಿ ರೂಪಾಯಿ (3.2 ಬಿಲಿಯನ್ ಡಾಲರ್) ಹಾಗೂ ವ್ಯಾನ್​ಗಾರ್ಡ್​ನಿಂದ 12 ಸಾವಿರ ಕೋಟಿ ರೂಪಾಯಿ (1.5 ಬಿಲಿಯನ್ ಡಾಲರ್) ಮೊತ್ತದ ವ್ಯವಹಾರವನ್ನು ಪಡೆದುಕೊಂಡಿದೆ. ಅಮೆರಿಕದ ದಿಗ್ಗಜ ಔಷಧ ಕಂಪನಿ ವಾಲ್​ಗ್ರೀನ್ಸ್ ಬೂಟ್ಸ್ ಅಲಯನ್ಸ್​ನಿಂದ (ಡಬ್ಲ್ಯುಬಿಎ) 12 ಸಾವಿರ ಕೋಟಿ ರೂಪಾಯಿ (1.5 ಬಿಲಿಯನ್ ಡಾಲರ್) ಹಾಗೂ ಅಮೆರಿಕದ ಗ್ರಾಹಕ ಸಂಶೋಧನಾ ಸಂಸ್ಥೆ ನೀಲ್​ಸೆನ್​ನಿಂದ 18 ಸಾವಿರ ಕೋಟಿ ರೂಪಾಯಿ (2.3 ಬಿಲಿಯನ್ ಡಾಲರ್) ವ್ಯವಹಾರವನ್ನು ಟಿಸಿಎಸ್ ಕಂಪನಿ ಬುಟ್ಟಿಗೆ ಹಾಕಿಕೊಂಡಿದೆ. ವಿಪ್ರೊ ಕಂಪನಿಯು ಜರ್ಮನಿಯ ಸಗಟು ವ್ಯವಹಾರ ಸಂಸ್ಥೆ ಮೆಟ್ರೊದಿಂದ 5,500 ಕೋಟಿ ರೂಪಾಯಿ (700 ಮಿಲಿಯನ್ ಡಾಲರ್) ವ್ಯವಹಾರದ ಗುತ್ತಿಗೆ ಪಡೆದುಕೊಂಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries