HEALTH TIPS

ಸಿಬ್ಬಂದಿ ಕೊರತೆಯಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವಿಳಂಬ: ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಮಾಹಿತಿ

         ನವದೆಹಲಿ: ಸಿಬ್ಬಂದಿ ಕೊರತೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಾಟ ನಡೆಸುವ ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನಾಗರೀಕ ವಿಮಾನಯಾನ ಸಚಿವಾಲಯ ತಿಳಿಸಿದೆ.

          ಪ್ರಮುಖವಾಗಿ ಗಲ್ಫ್​ ರಾಷ್ಟ್ರಗಳಿಗೆ ತೆರಳುವ ವಿಮಾನಗಳಿಗೆ ಇದು ಅನ್ವಯವಾಗಲಿದ್ದು, ಭಾರತದಿಂದ ಯುಎಇಗೆ ತೆರಳುವ ವಿಮಾನವನ್ನು ಆಗಸ್ಟ್​ 24 ರವರೆಗೆ ಸ್ಥಗಿತಗೊಳಿಸಲಾಗಿದ್ದು, ಭುವನೇಶ್ವರದಿಂದ ದುಬೈ ಹಾರಾಟವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದೆ.

             ಸದ್ಯ ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ತಿಳಿಸಿದ್ದು, ಕಾರ್ಯಾಚರಣೆ ಪುನರಾರಂಭಿಸಿದ ಬಳಿಕ ಮರುಪಾವತಿ ಅಥವಾ ಇತರ ವಿಮಾನಗಳಲ್ಲಿ ವಸತಿ ಸೌಕರ್ಯದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದೆ.

               ಯುಎಇ ಖಾಯಂ ನಿವಾಸಿಗಳಿಗೆ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ನಿರ್ಗಮನದ 48 ಗಂಟೆಗಳ ಮೊದಲಿ ಆರ್​ಟಿಪಿಸಿಆರ್​ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಮತ್ತು ವಿಮಾನ ಹಾರಾಟಕ್ಕೆ ಕೆಲವು ಗಂಟೆಗಳ ಮೊದಲು ವಿಮಾನ ನಿಲ್ದಾಣದಲ್ಲಿ ಮತ್ತೊಂದು ಕ್ಷಿಪ್ರ-ಪಿಸಿಆರ್​​ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

          ಸದ್ಯ ಇಂಡಿಗೋ ವಿಮಾನದ ಪ್ರಯಾಣಿಕರಿಗೆ ಪಿಸಿಆರ್​ ಪರೀಕ್ಷೆ, ಪ್ರಯಾಣಿಕರನ್ನು ಸ್ವೀಕರಿಸುವ ಮೊದಲು ಪರೀಕ್ಷಾ ವರದಿಗಳನ್ನು ಪರಿಶೀಲಿಸಲು ವಿಮಾನ ನಿಲ್ದಾಣದಲ್ಲಿ ಚೆಕ್​​ ಇನ್​ ಸಿಬ್ಬಂದಿ ಕೊರತೆ ಇದೆ ಎಂದು ಸಂಸ್ಥೆ ಹೇಳಿಕೊಂಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries