HEALTH TIPS

ಉಧಂಪುರ, ಜಮ್ಮುವಿನಲ್ಲಿ ಸೇನೆಯಿಂದ ಕಾರ್ಗಿಲ್‌ ವಿಜಯೋತ್ಸವ ಆಚರಣೆ

 

              ಉಧಂಪುರ/ಜಮ್ಮು : ಪಾಕಿಸ್ತಾನ ವಿರುದ್ಧದ 1999ರ ಕಾರ್ಗಿಲ್‌ ಯುದ್ಧದ ವಿಜಯೋತ್ಸವ ಸ್ಮರಣಾರ್ಥ ಭಾರತೀಯ ಸೇನೆ ಮಂಗಳವಾರ 23ನೇ ಕಾರ್ಗಿಲ್‌ ವಿಜಯ ದಿವಸವನ್ನು ಆಚರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

          'ಆಪರೇಷನ್ ವಿಜಯ' ಯಶಸ್ಸಿನ ಸಂಕೇತವಾಗಿ ಉಧಂಪುರದ ಉತ್ತರ ಕಮಾಂಡ್, ಜಮ್ಮುವಿನ ಟೈಗರ್‌ ಡಿವಿಷನ್ ಮತ್ತು ರಜೌರಿ, ಪೂಂಚ್ ಮತ್ತು ದೋಡಾದಲ್ಲಿ ಆಚರಣೆ ಮಾಡಲಾಯಿತು.

ಉತ್ತರ ಕಮಾಂಡ್ ಮುಖ್ಯಕಚೇರಿಯಲ್ಲಿರುವ ಯುದ್ಧಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸೇನಾ ಅಧಿಕಾರಿಗಳು, ಯೋಧರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಟೈಗರ್‌ ಡಿವಿಷನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಸಂಖ್ಯಾತ ನಾಗರಿಕರು ಭಾಗವಹಿಸಿ ನಮನ ಸಲ್ಲಿಸಿದರು ಎಂದು ತಿಳಿಸಿದರು.

            ಕಾರ್ಗಿಲ್‌ ವಿಜಯ ದಿವಸದಂದು ಹೆಮ್ಮೆಯ, ವೀರ ಯೋಧರಿಗೆ ಇಡೀ ಭಾರತ ನಮನ ಸಲ್ಲಿಸುತ್ತದೆ. ಸಶಸ್ತ್ರ ಪಡೆಗಳ ಶೌರ್ಯ ಮತ್ತು ಅದಮ್ಯ ಇಚ್ಛಾಶಕ್ತಿ ಭಾರತದ ಇತಿಹಾಸದಲ್ಲಿ ನಿರ್ಣಾಯಕ ಕ್ಷಣವಾಗಿ ಶಾಶ್ವತವಾಗಿ ಉಳಿದಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ಅ ಟ್ವೀಟ್‌ ಮಾಡಿದ್ದಾರೆ.

                   'ದೇಶದ ಹೆಮ್ಮೆಯ ಸಂಕೇತ': ಕಾರ್ಗಿಲ್ ವಿಜಯ್‌ ದಿವಸದ ಹಿನ್ನೆಲೆಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ತಾಯ್ನಾಡಿನ ರಕ್ಷಣೆಗಾಗಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಿರುವ ಎಲ್ಲ ವೀರಯೋಧರಿಗೆ ನಮನ ಸಲ್ಲಿಸಿದರು.

               'ಕಾರ್ಗಿಲ್‌ ವಿಜಯ ದಿವಸ ಭಾರತ ಮಾತೆಯ ಹೆಮ್ಮೆಯ ಸಂಕೇತ' ಎಂದು ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries