ಕೇಂದ್ರ ಸರಕಾರದ ಉದ್ಯೋಗಗಳಿಗೆ ನೇಮಕವಾಗುವ ನಿವೃತ್ತ ಯೋಧರ ಸಂಖ್ಯೆಯಲ್ಲಿ ಗಣನೀಯ ಕುಸಿತ

             ನವದೆಹಲಿ : ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕೇಂದ್ರ ಸರಕಾರದ ಉದ್ಯೋಗಗಳಿಗೆ ನಿಯೋಜಿತರಾದ ಸೇನಾಯೋಧರ ಸಂಖ್ಯೆಯು 2015ರಲ್ಲಿ 10,982ರಷ್ಟಿದ್ದುದು 2021ರಲ್ಲಿ 2983ಕ್ಕೆ ಇಳಿದಿದೆಯೆಂದು ಕೇಂದ್ರ ಸರಕಾರವು ಶುಕ್ರವಾರ ಲೋಕಸಭೆಗೆ ತಿಳಿಸಿದೆ.

               14 ಮಂದಿ ಪ್ರತಿಪಕ್ಷ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಸಹಾಯಕ ರಕ್ಷಣಾ ಸಚಿವ ಅಜಯ್ ಭಟ್ ಈ ಅಂಕಿಅಂಶಗಳನ್ನು ಮಂಡಿಸಿದ್ದಾರೆ. 2014ರಲ್ಲಿ 2322 ಮಂದಿ ಮಾಜಿ ಯೋಧರು ಕೇಂದ್ರ ಸರಕಾರದ ನೌಕರಿಗಳಿಗೆ ನೇಮಕಗೊಂಡಿದ್ದರು. ಆದರೆ 2015ರಲ್ಲಿ ಈ ಸಂಖ್ಯೆಯ ಗಣನೀಯ ಏರಿಕೆಯಾಗಿದ್ದು 10,982ಕ್ಕೆ ತಲುಪಿದೆ. ಆದರೆ ಮುಂದಿನ ಐದು ವರ್ಷಗಳಲ್ಲಿ ಅದು ಒಂದೇ ಸಮನೆ ಇಳಿಯತೊಡಗಿತ್ತು.

                  ಕೇಂದ್ರ ಸರಕಾರದ ಉದ್ಯೋಗಗಳಿಗೆ ನೇಮಕಗೊಂಡ ಸಶಸ್ತ್ರಪಡೆಗಳ ನಿವೃತ್ತ ಅಧಿಕಾರಿಗಳ ಸಂಖ್ಯೆ 2016ರಲ್ಲಿ 9086, 2017ರಲ್ಲಿ 5638, 2018ರಲ್ಲಿ 4175, 2019ರಲ್ಲಿ2968 ಹಾಗೂ 2020ರಲ್ಲಿ 2584 ಆಗಿದೆಯೆಂದು ಕೇಂದ್ರ ಸರಕಾರದ ಅಂಕಿಅಂಶಗಳು ಬಹಿರಂಗಪಡಿಸಿವೆ. ಆದರೆ 2021ರಲ್ಲಿ ಈ ಸಂಖ್ಯೆಯು 2983ಕ್ಕೇರಿದ್ದು, ತುಸು ಹೆಚ್ಚಳವನ್ನು ಕಂಡಿದೆ.

                     ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ ಪೂರ್ಣಾವಧಿಗೆ ನಿಯೋಜಿತರಾಗದೆ ಅಲ್ಪಾವಧಿಯ ಸೇವೆಯ ಬಳಿಕ ನಿವೃತ್ತರಾದಲ್ಲಿ ಅವರಿಗೆ ಉದ್ಯೋಗಗಳನ್ನು ನೀಡುವುದಾಗಿ ಕೇಂದ್ರ ಹಾಗೂ ವಿವಿಧ ರಾಜ್ಯ ಸರಕಾರಗಳು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಈ ಅಂಕಿಅಂಶಗಳು ಹೆಚ್ಚಿ ಮಹತ್ವವನ್ನು ಪಡೆದಿವೆ.
                 ಅಗ್ನಿಪಥ ಯೋಜನೆಯಜಿ ಹದಿನೇಳೂವರೆ ವರ್ಷಗಳು ಹಾಗೂ 21 ವರ್ಷಗಳ ನಡುವಿನ ವಯಸ್ಸಿನವರು ಸೇನೆಯಲ್ಲಿ ನಾಲ್ಕು ವರ್ಷಗಳ ಅವಧಿಯ ಸೇವಯನ್ನು ಸಲ್ಲಿಸಲು ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ. ನಾಲ್ಕು ವರ್ಷಗಳ ಸೇವಾವಧಿಯನ್ನು ಪೂರ್ಣಾಗೊಳಿಸಿದ ಬಳಿಕ ಅವರಲ್ಲಿ ಕೇವಲ ಶೇ.25 ಮಂದಿಯನ್ನು ಮಾತ್ರವೇ ಸೇನೆಯಲ್ಲಿ ಪೂರ್ಣಾವಧಿಗೆ ನೇಮಕಗೊಳಿಸಲಾಗುತ್ತದೆ.

              ಅಗ್ನಿಪಥ ಯೋಜನೆಯಡಿ ಸಶಸ್ತ್ರಪಡೆಗಳಿಗೆ ನೇಮಕಗೊಂಡು, ಪೂರ್ಣಾವಧಿಯ ನೇಮಕಾತಿಗೆ ಆಯ್ಕೆಯಗದವರಿಗೆ ಕೇಂದ್ರ ಗೃಹ ಹಾಗೂ ರಕ್ಷಣಾ ಸಚಿವಾಲಯಗಳು ತಮ್ಮ ಇಲಾಖೆಗಳಲ್ಲಿ ಶೇ.10ರಷ್ಟು ಉದ್ಯೋಗ ಮೀಸಲಾತಿಯನ್ನು ಘೋಷಿಸಿವೆ.
                  ಅಲ್ಪಾವಧಿಯ ಅಗ್ನಿಪಥ ಸೇನಾ ನೇಮಕಾತಿ ಯೋಜನೆಯನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದ ಬಳಿಕ ಕೇಂದ್ರ ಸರಕಾರವು ಈ ನಿರ್ಧಾರವನ್ನು ಕೈಗೊಂಡಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries