ಏಮ್ಸ್ ಗಾಗಿ ಸೆಕ್ರೆಟೇರಿಯೆಟ್‍ನಲ್ಲಿ ನಿರಾಹಾರ ಸತ್ಯಾಗ್ರಹ: ಕಾಸರಗೋಡಿನಲ್ಲಿ ವಾಹನಪ್ರಚಾರ ಜಾಥಾ

                  ಕಾಸರಗೋಡು: ಏಮ್ಸ್ ಪ್ರಸ್ತಾವನೆಯಲ್ಲಿ ಕಾಸರಗೋಡಿನ ಹೆಸರನ್ನು ಸೇರಿಸುವುದು ಸಏರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ದಯಾಭಾಯಿ ಅವರು ಸೆಕ್ರೆಟರಿಯೇಟ್ ಎದುರು ಆಗಸ್ಟ್ 6ರ ಹಿರೋಶಿಮಾ ದಿನದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಉಪವಾಸ ಮುಷ್ಕರದ ಪ್ರಚಾರಾರ್ಥ ವಾಹನ ಪ್ರಚಾರ ಜಾಥಾ ಶನಿವಾರ ಕಾಸರಗೋಡಿನಿಂದ ಆರಂಭಗೊಂಡಿತು.  

              ನಿರಾಹಾರ ಮುಷ್ಕರ ಸಮಿತಿಯ ನೇತೃತ್ವದಲ್ಲಿ ಜಾಥಾ ನಡೆಯಲಿರುವುದು.   ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು ವಾಹನ ಪ್ರಚಾರ ಜಾಥಾ ಉದ್ಘಾಟಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ ಅಂಬಲತ್ತರ ಕುಞÂಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.  ದಯಾಬಾಯಿ, ಪ್ರಧಾನ ಸಂಚಾಲಕ ಕರೀಂ ಚೌಕಿ ಉಪಾಧ್ಯಕ್ಷ ಸುಬೈರ್ ಪಡ್ಪು,  ಪ್ರಮೀಳಾ ಮಜಲ್, ಸೂರ್ಯ ನಾರಾಯಣ ಭಟ್, ಕೋಶಾಧಿಕಾರಿ ಶಾಫಿ ಕಲ್ಲುವಲಪ್ಪ, ಅಬ್ದುಲ್ ರಹಮಾನ್ ಬಂದ್ಯೋಡು.  ಶಿನಿ ಜೇಸನ್, ಚಂದ್ರ ಶೇಖರನ್ ನಾಯರ್, ಮುರಳಿ ಮಾನಡ್ಕ,  ಶುಕೂರ್ ಕಾಣಾಜೆ, ಹಮೀದ್ ಚೇರಂಗೈ, ಮುನೀರ್ ಕೊವ್ವಲ್‍ಪಳ್ಳಿ, ಸೀದಿಹಾಜಿ ಉಪಸ್ಥಿತರಿದ್ದರು.

              ಏಮ್ಸ್ ಪ್ರಸ್ತಾವನೆಯಲ್ಲಿ ಕಾಸರಗೋಡಿನ ಹೆಸರನ್ನು ಸೇರಿಸಬೇಕು,  ಉಕ್ಕಿನಡಕದ ವೈದ್ಯಕೀಯ ಕಾಲೇಜು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಜನರಲ್ ಆಸ್ಪತ್ರೆ, ಟಾಟಾ ಆಸ್ಪತ್ರೆ, ಅಮ್ಮ-ಮಗು ಆಸ್ಪತ್ರೆಗಳಲ್ಲಿ ತಜ್ಞ ಚಿಕಿತ್ಸಾ ಸೌಕರ್ಯ ಒದಗಿಸಬೇಕು,  ಹಾಸಿಗೆ ಹಿಡಿದವರು ಹಾಗೂ ಮಾನಸಿಕ ಅಸ್ವಸ್ಥರಿಗೆ ಎಲ್ಲ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹಗಲು ಮನೆ ನಿರ್ಮಿಸಬೇಕು, ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸಲು ಪ್ರತ್ಯೇಕ ವೈದ್ಯಕೀಯ ಶಿಬಿರ ಆಯೋಜಿಸಬೇಕು ಮುಂತಾದ ಬೇಡಿಕೆಗಳೊಂದಿಗೆ ದಯಾಬಾಯಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries