HEALTH TIPS

ವಕ್ಫ್ ಬೋರ್ಡ್ ನೇಮಕಾತಿಗಳನ್ನು ಪಿಎಸ್‍ಸಿ ವಹಿಸುವುದರಿಂದ ಹಿಂದೆ ಸರಿದ ಸರ್ಕಾರ: ಹೊಸ ವ್ಯವಸ್ಥೆ ಕಲ್ಪಿಸುವ ಭರವಸೆ: ಮುಖ್ಯಮಂತ್ರಿಯಿದ ವಿವರಣೆ

                     ತಿರುವನಂತಪುರ: ವಕ್ಫ್ ಮಂಡಳಿ ನೇಮಕಾತಿಯನ್ನು ಪಿಎಸ್‍ಸಿ ಗೆವಹಿಸುವ  ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ನಿಟ್ಟಿನಲ್ಲಿ ಸರ್ಕಾರ ತಿದ್ದುಪಡಿ ತರಲಿದೆ. ಮಂಡಳಿಯ ನೇಮಕಾತಿಗೆ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ತಿಳಿಸಿದರು. ವಿಧಾನಸಭೆಯಲ್ಲಿ ಪಿ.ಕೆ.ಕುನ್ಹಾಲಿಕುಟ್ಟಿ ಅವರ ಅಹವಾಲಿಗೆ ಮುಖ್ಯಮಂತ್ರಿ ಉತ್ತರಿಸಿದರು. ವಿಧಾನಸಭೆಯಲ್ಲಿ ಪಿ.ಕೆ.ಕುನ್ಹಾಲಿಕುಟ್ಟಿ ಅವರ ಗಮನಕ್ಕೆ ಉತ್ತರ ನೀಡುವ ಮೂಲಕ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.

                ವÀಕ್ಫ್ ನೇಮಕದ ಕುರಿತು ಸದನದಲ್ಲಿ ಈ ಹಿಂದೆ ಚರ್ಚೆ ನಡೆಸಲಾಗಿತ್ತು. ಆ ದಿನ ಕುನ್ಹಾಲಿಕುಟ್ಟಿ ಅವರು ಸಭೆಯಲ್ಲಿ ಇರಲಿಲ್ಲ. ಈಗ ಇರುವವರು ಕೆಲಸ ಕಳೆದುಕೊಳ್ಳುತ್ತಾರೆಯೇ ಎಂಬುದಷ್ಟೇ ಆಗ ಲೀಗ್ ಎತ್ತಿದ ಸಮಸ್ಯೆಯಾಗಿತ್ತು. ರಕ್ಷಣೆ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು. ಸಮಿತಿಗೆ ವಿಷಯ ತಿಳಿಸಿದಾಗಲೂ ಯಾರೂ ಚಕಾರ ಎತ್ತಲಿಲ್ಲ. ಮುಸ್ಲಿಂ ಸಂಘಟನೆಗಳೊಂದಿಗಿನ ಚರ್ಚೆಯಲ್ಲಿನ ಸಾಮಾನ್ಯ ತಿಳುವಳಿಕೆ ಆಧರಿಸಿ, ವಕ್ಫ್ ನೇಮಕಾತಿಗಳನ್ನು ಪಿಎಸ್‍ಸಿಗೆ ವಹಿಸುವ À ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುತ್ತಿದೆ. ಕಾನೂನು ತಿದ್ದುಪಡಿ ಮಾಡಲು ಪಿಎಸ್‍ಸಿ ಮೂಲಕ ನೇಮಕಾತಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಅರ್ಹರನ್ನು ನೇಮಕ ಮಾಡಲು ಶೀಘ್ರವೇ ಹೊಸ ವ್ಯವಸ್ಥೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

                 2016 ರಲ್ಲಿ, ವಕ್ಫ್ ಮಂಡಳಿಯ ಸಭೆಯು ಖಾಲಿ ಹುದ್ದೆಗಳನ್ನು ಪಿಎಸ್‍ಸಿಗೆ ವಹಿಸಲು  ನಿರ್ಧರಿಸಿತು. ಈ ಸಂಬಂಧ ಹೊರಡಿಸಿದ ಸುಗ್ರೀವಾಜ್ಞೆಗೆ ಬದಲಿ ಮಸೂದೆಯನ್ನು ಶಾಸಕಾಂಗ ಅಂಗೀಕರಿಸಿತು. ವಿಧೇಯಕವನ್ನು ವಿಷಯ ಸಮಿತಿಯ ವಿಸ್ತೃತ ಪರಿಶೀಲನೆಗೆ ಬಿಟ್ಟಾಗ ವಿಧಾನಸಭೆಯಲ್ಲಿ ಚರ್ಚೆಯಾಗಲಿ ಅಥವಾ ವಕ್ಫ್ ಮಂಡಳಿ ನೇಮಕವನ್ನು ಪಿಎಸ್‍ಸಿಗೆ ಬಿಡುವುದಾಗಲಿ ಯಾರೂ ಆಕ್ಷೇಪಿಸಲಿಲ್ಲ ಎಂಬುದು ವಾಸ್ತವ ಎಂದು ಮುಖ್ಯಮಂತ್ರಿ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries