ಸಮರಸ ಚಿತ್ರಸುದ್ದಿ: ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಉನ್ನತ ಪ್ರೌಢಶಾಲೆಯಲ್ಲಿ ಯು. ಪಿ ವಿಭಾಗದ ವಿಜ್ಞಾನ ಮತ್ತು ಸಮಾಜ ಕ್ಲಬ್ ಗಳ ಆಶ್ರಯದಲ್ಲಿ ನಿನ್ನೆ ಚಾಂದ್ರದಿನವನ್ನು ಆಚರಿಸಲಾಯಿತು. ಮುಖ್ಯಶಿಕ್ಷಕ ಇಬ್ರಾಹಿಂ. ಬಿ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು, ಅಧ್ಯಾಪಕರು ಹಾಗೂ ಶಾಲಾ ಕ್ಲಬ್ಬಿನ ಸದಸ್ಯರು ಹಾಜರಿದ್ದರು. ಪ್ರಜಿತ್ ಚಂದ್ರನಲ್ಲಿ ಇಳಿದ ಮೊದಲ ಮಾನವ ನೀಲ್ ಆರ್ಮ್ ಸ್ಟ್ರಾಂಗ್ ನ ಪಾತ್ರವನ್ನು ನಿರ್ವಹಿಸಿದನು.