HEALTH TIPS

ಪುಸ್ತಕಗಳ ಓದಿನಿಂದ ಮನಸ್ಸಿನ ಇಂದ್ರಿಯಗಳು ಚೇತನೊಳ್ಳುತ್ತದೆ: ಸಿವಿ ಬಾಲಕೃಷ್ಣನ್

                 ಕಾಸರಗೋಡು: ಪುಸ್ತಕದ ಓದುವಿಕೆಯಿಂದ ಮನಸ್ಸಿನ ಕ್ಷೋಭೆಗಳು ಮಾಯವಾಗುತ್ತದೆ ಎಂದು  ಬರಹಗಾರ ಸಿ.ವಿ.ಬಾಲಕೃಷ್ಣನ್ ಹೇಳಿದರು. 

               ರಾಷ್ಟ್ರೀಯ ವಾಚನ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಸಂಘಟನಾ ಸಮಿತಿ ಆಯೋಜಿಸಿದ್ದ ರಾಷ್ಟ್ರೀಯ ವಾಚನ ಮಾಸ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

            ಪ್ರತಿ ಬಾರಿ ಪುಸ್ತಕಗಳನ್ನು ಓದಿದಾಗ ನಮ್ಮ ಮನಸ್ಸಿನ ವ್ಯಾಪ್ತಿ ಹೆಚ್ಚುತ್ತಿದೆ. ಓದಿನ ಮೂಲಕ ಮಾಡಿದ ಮಾನಸಿಕ ಪಯಣ ಅವರ ಬರವಣಿಗೆಗೆ ಪ್ರೇರಣೆ ನೀಡಿ ಮನಸ್ಸು ವಿಕಾಸನಗೊಳಿಸುತ್ತದೆ ಎಂದರು. ಜಿಲ್ಲಾ ಮಟ್ಟದ ಸಂಘಟನಾ ಸಮಿತಿಯ ನೇತೃತ್ವದಲ್ಲಿ 26ನೇ ವರ್ಷದ ಪಿ.ಎನ್.ಪಣಿಕ್ಕರ್ ರಾಷ್ಟ್ರೀಯ ವಾಚನ ದಿನಾಚರಣೆ ಹಾಗೂ ರಾಷ್ಟ್ರೀಯ ವಾಚನ ಮಾಸ ಆಚರಣೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


               ಪ್ರತಿ ಬಾರಿ ಪುಸ್ತಕವನ್ನು ಓದಿದಾಗಲೂ ಒಂದು ಸಂವೇದನೆ ಇರುತ್ತದೆ. ಪುಸ್ತಕಗಳು ಒಂದಂನ್ನೊಂದು ಬೆಸೆಯುತ್ತಾ ಸಾಗುವ ಪ್ರಕ್ರಿಯೆಯಾಗಿದೆ. ಪುಸ್ತಕಗಳು ಲೌಕಿಕ ಜೀವನದ ಸಂಕೇತಗಳಾಗಿವೆ. ಪುಸ್ತಕವನ್ನು ಓದುವುದರಿಂದ ನಮಗೆ ಪರಿಚಯವಿಲ್ಲದ ಸ್ಥಳದ ಪರಿಚಯವಾಗುತ್ತದೆ. ಓದುವುದು ಎಂದಿಗೂ ನಿಲ್ಲಿಸಲಾಗದ ವಿಷಯ ಎಂದ ಅವರು, ಪುಸ್ತಕಗಳನ್ನು ಓದದೇ ಇರುವುದೇ ದೊಡ್ಡ ಕ್ರೌರ್ಯ ಎಂದರು. ದೋಸ್ಟೋವ್ಸ್ಕಿ ಮತ್ತು ವಿಲಿಯಂ ಷೇಕ್ಸ್ಪಿಯರ್ ಅವರಂತಹ ಲೇಖಕರ ಬರಹಗಳನ್ನು ಒಳಗೊಂಡಂತೆ ಅವರು ತಮ್ಮ ಪುಸ್ತಕ ಓದುವ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.

              ಜಿಲ್ಲಾ ಸಂಘಟನಾ ಸಮಿತಿ, ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ವಾರ್ತಾ ಕಚೇರಿ, ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಸಾಹಿತ್ಯ ವೇದಿಕೆ ಹಾಗೂ ಪಿ.ಎನ್.ಪಣಿಕ್ಕರ್ ಪ್ರತಿಷ್ಠಾನದ ಆಶ್ರಯದಲ್ಲಿ ಪಟನ್ನಕ್ಕಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲ ಡಾ.ಕೆ.ವಿ.ಮುರಳಿ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ವಿಶ್ವವಿದ್ಯಾಲಯದ ಮಾಜಿ ಪರೀಕ್ಷಾ ನಿಯಂತ್ರಕರು ಹಾಗೂ ಪಿ.ಎನ್.ಪಣಿಕ್ಕರ್ ಫೌಂಡೇಶನ್ ಜಿಲ್ಲಾಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂಧನ್ ರಾಷ್ಟ್ರೀಯ ವಾಚನ ಮಾಸವನ್ನು ಅವಲೋಕನ ನಡೆಸಿದರು. ಪಿ.ಎನ್.ಪಣಿಕ್ಕರ್ ಪ್ರತಿಷ್ಠಾನದ ಉಪಾಧ್ಯಕ್ಷ ಕೆ. ವಿ ರಾಘವನ್ ಪಿ ಎನ್ ಪಣಿಕ್ಕರ್ ಸ್ಮರಣೋತ್ಸವ ನಡೆಸಿಕೊಟ್ಟರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ವಿ.ವಿಜಯಕುಮಾರ್, ಪಿ.ಎನ್.ಪಣಿಕ್ಕರ್ ಫೌಂಡೇಶನ್ ಜಿಲ್ಲಾ ಖಜಾಂಚಿ ಕವುಂಗಲ್ ನಾರಾಯಣನ್, ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಅಧ್ಯಕ್ಷ ಪಿ.ಪಿ.ಅನಂತು ಮಾತನಾಡಿದರು. ಸಾಹಿತ್ಯ ವೇದಿಕೆ ಅಧ್ಯಕ್ಷೆ ಡಾ.ಕೆ.ಪಿ.ಶೀಜಾ ಸ್ವಾಗತಿಸಿ, ಪಿ.ಎನ್.ಪಣಿಕ್ಕರ್ ಪ್ರತಿಷ್ಠಾನದ ಜಿಲ್ಲಾ ಕಾರ್ಯದರ್ಶಿ ಸಿ. ಸುಕುಮಾರನ್ ವಂದಿಸಿದರು. 

             ಇದೇ ಸಂದರ್ಭದಲ್ಲಿ ರಾಜ್ಯ ಯುವಜನ ಕಲ್ಯಾಣ ಮಂಡಳಿ ಕಾಸರಗೋಡು ಜಿಲ್ಲಾ ಯುವ ಕೇಂದ್ರದ ವತಿಯಿಂದ ನಡೆದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಸಿನಾಶಾ ಹಾಗೂ ದ್ವಿತೀಯ ಬಹುಮಾನ ಪಡೆದ ಅಜೇಶ್ ಅವರಿಗೆ ಬರಹಗಾರ ಸಿ.ವಿ.ಬಾಲಕೃಷ್ಣನ್ ಬಹುಮಾನ ವಿತರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries