HEALTH TIPS

ಸೇನಾ ಮಾತುಕತೆ: ಮಹತ್ವದ ಸಮಸ್ಯೆಗಳ ಇತ್ಯರ್ಥಕ್ಕೆ ಮೂಡದ ಒಮ್ಮತ

          ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಉದ್ಭವಿಸಿರುವ ಗಡಿ ಬಿಕ್ಕಟ್ಟು ಶಮನ ಸಂಬಂಧ ಭಾರತ ಮತ್ತು ಚೀನಾ ನಡುವೆ ಸೇನಾ ಹಂತದಲ್ಲಿ ನಡೆದ 16ನೇ ಸುತ್ತಿನ ಮಾತುಕತೆಯಲ್ಲಿ ಮಹತ್ವದ ಸಮಸ್ಯೆಗಳ ಇತ್ಯರ್ಥಕ್ಕೆ ಒಮ್ಮತ ಮೂಡಿಲ್ಲ.

            'ಪರಸ್ಪರ ಒಪ್ಪಿದ ನಿರ್ಣಯ ಕೈಗೊಳ್ಳಲು ಹಾಗೂ ಆದಷ್ಟು ಶೀಘ್ರ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ನಿಕಟ ಬಾಂಧವ್ಯ ಹೊಂದಲು ಉಭಯ ದೇಶಗಳು ಸಮ್ಮತಿಸಿವೆ' ಎಂದು ಜಂಟಿ ಪ್ರಕಟಣೆ ತಿಳಿಸಿದೆ.

              'ಉಭಯ ದೇಶಗಳ ಸೇನಾ ಅಧಿಕಾರಿಗಳ ನಡುವೆ ಭಾನುವಾರ ಸುಮಾರು 12 ಗಂಟೆಗಳ ಸುದೀರ್ಘ ಮಾತುಕತೆ ನಡೆದಿತ್ತು. ಈ ವೇಳೆ ಕೆಲ ವಿಚಾರಗಳ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಬಹುದು ಎಂದು ಊಹಿಸಲಾಗಿತ್ತು. ಆ ನಿರೀಕ್ಷೆ ತಲೆಕೆಳಗಾಗಿದೆ' ಎಂದು ಸೇನಾ ಮೂಲಗಳು ತಿಳಿಸಿವೆ.

                                       ಎಂಎಸ್‌ಪಿ ಜಾರಿ ಸಂಬಂಧ ಸಮಿತಿ

          ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಸಂಬಂಧ ಕೇಂದ್ರ ಸರ್ಕಾರವು ಸೋಮವಾರ ಸಮಿತಿಯೊಂದನ್ನು ರಚಿಸಿದೆ.

           ಕೇಂದ್ರ ಕೃಷಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಸಂಜಯ್‌ ಅಗರವಾಲ್‌ ನೇತೃತ್ವದ ಸಮಿತಿಯಲ್ಲಿ ಸಂಯುಕ್ತ ಕಿಶಾನ್‌ ಮೋರ್ಚಾದ ಮೂವರು ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗಿದೆ.

              ನೀತಿ ಆಯೋಗದ ಸದಸ್ಯ ರಮೇಶ್‌ ಚಾಂದ್‌, ಕೃಷಿ ವಿಜ್ಞಾನಿ ಸಿಎಸ್‌ಸಿ ಶೇಖರ್‌, ಐಐಎಂ-ಅಹಮದಾಬಾದ್‌ನ ಸುಖ್‌ಪಾಲ್‌ ಸಿಂಗ್‌, ಸಿಎಸಿಪಿ ಸದಸ್ಯ ನವೀನ್‌ ಪಿ.ಸಿಂಗ್‌, ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕ ಭರತ್‌ ಭೂಷಣ್‌ ತ್ಯಾಗಿ ಹಾಗೂ ಇತರ ರೈತ ಸಂಘಟನೆಗಳಿಗೆ ಸೇರಿದ ಐವರು ಸದಸ್ಯರನ್ನೂ ಸಮಿತಿ ಒಳಗೊಂಡಿರಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries