HEALTH TIPS

ಸಾಮಾಜಿಕ ಮಾಧ್ಯಮದ ವಿಷಯ ನಿರ್ಬಂಧಕ್ಕೆ ಕೇಂದ್ರದಿಂದ 105 ಆದೇಶಗಳನ್ನು ನೀಡಲಾಗಿದೆ: ರಾಜೀವ್ ಚಂದ್ರಶೇಖರ್

               ನವದೆಹಲಿ :ಕಳೆದ ವರ್ಷ ಪೆಬ್ರವರಿಯಿಂದ ಜಾರಿಗೆ ಬಂದ ನೂತನ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ಅಡಿಯಲ್ಲಿ ವಿಷಯಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರಕಾರ ಸಾಮಾಜಿಕ ಮಾಧ್ಯಮಗಳಿಗೆ 105 ಆದೇಶಗಳನ್ನು ನೀಡಿದೆ.

                     ವಿಷಯ ನಿರ್ಬಂಧಿಸುವಂತೆ 2021 ಡಿಸೆಂಬರ್‌ನಿಂದ 2022 ಎಪ್ರಿಲ್ ನಡುವೆ ಯು ಟ್ಯೂಬ್‌ಗೆ 94 ನಿರ್ದೇಶನಗಳನ್ನು ನೀಡಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭೆಯಲ್ಲಿ ಲಿಖಿತ ಪ್ರತಿಕ್ರಿಯೆಯಲ್ಲಿ ಮಾಹಿತಿ ನೀಡಿದರು.

                  ಈ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಟ್ವಿಟರ್‌ಗೆ ಐದು ನಿರ್ದೇಶನಗಳನ್ನು ನೀಡಿರುವುದೇ ಅಲ್ಲದೆ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂಗೆ ತಲಾ 3 ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

                      ತಮ್ಮ ಬಳಕೆದಾರರಿಗೆ ಹಾಗೂ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಮಧ್ಯವರ್ತಿಗಳನ್ನು ಉತ್ತರದಾಯಿಯನ್ನಾಗಿಸಲು ಸರಕಾರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿ ಹಾಗೂ ಡಿಜಿಟಲ್ ಮಾಧ್ಯಮ ನೀತಿ ಸಂಹಿತೆಗಳು) ನಿಯಮ 2021 (ಐಟಿ ನಿಯಮಗಳು, 2021) ಅನ್ನು 2021 ಫೆಬ್ರವರಿ 25ರಂದು ಜಾರಿಗೆ ತಂದಿದೆ ಎಂದು ಅವರು ಹೇಳಿದರು.
                       ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಉತ್ತರದಾಯಿಯನ್ನಾಗಿಸಲು ಅಗತ್ಯವಾಗಿರುವ ಕಾನೂನು ಬದಲಾವಣೆ ಹಾಗೂ ನಿಯಂತ್ರಣಗಳನ್ನು ತರಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರು ಜೂನ್‌ನಲ್ಲಿ ಭರವಸೆ ನೀಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries