HEALTH TIPS

ಕಾಡು ತೆರವಿನ ವೇಳೆ 1200 ವರ್ಷಗಳಷ್ಟು ಹಳೆಯದೆಂದು ಸಂಶಯಿಸುವ ಶಿವಲಿಂಗ ಪತ್ತೆ


           ಕಾಸರಗೋಡು: ಕಾಡು ಪೊದೆಗಳನ್ನು ಸವರುವ ವೇಳೆ ಪುರಾತನ ಶಿವಲಿಂಗವೊಂದು ಪತ್ತೆಯಾಗಿದೆ. ಕಯ್ಯೂರು ಸಮೀಪದ ಕ್ಲೈಕೋಡ್ ವೀರಭದ್ರ ದೇವಸ್ಥಾನದ ಬಳಿಯ ಗುಡ್ಡ ಪ್ರದೇಶವನ್ನು ಸವರುತ್ತಿದ್ದಾಗ ಶತಮಾನಗಳಷ್ಟು ಹಳೆಯದಾದ ಶಿವಲಿಂಗ ಪತ್ತೆಯಾಗಿದೆ. ಅದರೊಂದಿಗೆ, ಶಿವಲಿಂಗ ಪತ್ತೆಯಾದ ದಿಬ್ಬದಲ್ಲಿ ಜ್ಯಾಮಿತೀಯ ಆಕಾರದಲ್ಲಿ ಕೆತ್ತಲಾದ ಹಂಚು ಮತ್ತು ಗ್ರಾನೈಟ್ ಅವಶೇಷಗಳು ಇದ್ದವು. ಸಮೀಪದ ದೇವಸ್ಥಾನಕ್ಕೆ ಸಂಬಂಧಿಸಿದ ಸ್ವರ್ಣ ಪ್ರಶ್ನೆ ಚಿಂತನೆಯಲ್ಲಿ ಈ ಹಿಂದೆ ಶಿವನ ದೇವಸ್ಥಾನವೊಂದು ಇದ್ದಿರುವ ಬಗ್ಗೆ ಪ್ರಸ್ತಾಪವಾಗಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿಯೇ ಸಮೀಪದ ಖಾಸಗಿ ವ್ಯಕ್ತಿಯ ನಿವೇಶನದಲ್ಲಿ ಕಾಡುಪೊದೆ ಕಡಿಯಲು ನಿರ್ಧರಿಸಿ ಕ್ರಮಕ್ಕೆ ಮುಂದಾದಾಗ ಪ್ರಶ್ನೆ ಚಿಂತನೆಯಲ್ಲಿ ಹೇಳಿರುವಂತೆಯೇ ಶಿವಲಿಂಗ ಪತ್ತೆಯಾಯಿತು. ಮಣ್ಣಿನಲ್ಲಿ ಹುದುಗಿದ್ದ ರೀತಿಯಲ್ಲಿ ಶಿವಲಿಂಗ ಕಂಡು ಬಂತು ಎನ್ನುತ್ತಾರೆ ಸ್ಥಳೀಯರಾದ ಗೋಪಾಲಕೃಷ್ಣನ್.



      ಇದೇ ವೇಳೆ ಇಲ್ಲಿ ವರ್ಷಗಳ ಹಿಂದೆಯೇ ಪುರಾತನವಾದ ಮಹಾ ದೇವಾಲಯವಿತ್ತು ಎಂಬುದಕ್ಕೆ ಇದೇ ಸಾಕ್ಷಿಯಾಗಿರಬಹುದು ಎನ್ನುತ್ತಾರೆ ಐತಿಹಾಸಿಕ ಸಂಶೋಧಕರು. ಪತ್ತೆಯಾದ ಶಿವಲಿಂಗವು 1200 ವರ್ಷಗಳಷ್ಟು ಹಳೆಯದು ಎಂದು ಕಾಞಂಗಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ಶಿಕ್ಷಕ, ಸಂಶೋಧಕ ಡಾ.ನಂದಕುಮಾರ್ ಕೋರೋತ್ ಮತ್ತು ಸಿ.ಪಿ.ರಾಜೀವನ್ ಸಮರಸ ಸುದ್ದಿಗೆ ಹೇಳಿದ್ದಾರೆ. . ಜೇಡಿಮಣ್ಣಿನ ಶಿವಲಿಂಗವು 8 ನೇ ಶತಮಾನದ ಮೊದಲು ನಿರ್ಮಿಸಲಾದ ಪೂಜಾ ವಿಧಾನಗಳನ್ನು ಹೋಲುತ್ತದೆ. ಆ ಕಾಲದ ಶಿವಲಿಂಗಗಳು ಇಂದಿನ ಕಾಲಕ್ಕೆ ಹೋಲಿಸಿದರೆ ಚಿಕ್ಕದಾಗಿದ್ದವು. ಪುರಾತತ್ವ ಇಲಾಖೆಯ ಮಧ್ಯಪ್ರವೇಶದಿಂದ ಒಂದು ಪ್ರದೇಶದ ಆರಾಧನಾ ಪದ್ಧತಿಯ ಕಾಲಗಣನೆಯನ್ನು ನಿರ್ಧರಿಸಬಹುದು ಎಂಬುದು ಇತಿಹಾಸ ತಜ್ಞರ  ಅಭಿಪ್ರಾಯವಾಗಿದೆ. ಶಿವಲಿಂಗದ ಪತ್ತೆ  ವಿಷಯ ಹಬ್ಬುತ್ತಿರುವಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.  ಏನೇ ಆಗಲಿ ಶಿವಲಿಂಗವನ್ನು ಸಂರಕ್ಷಿಸಿ ಮಂದಿರ ನಿರ್ಮಾಣ ಮಾಡುವುದು ಸ್ಥಳೀಯರ ಹಾಗೂ ಭಕ್ತರ ಮುಂದಿನ ನಡೆ ಎನ್ನಲಾಗಿದ್ದು, ಸಂಕಷ್ಟಗಳು ದೂರವಾಗುವ ಭರವಸೆ ಸ್ಥಳೀಯರದ್ದು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries