ಹರ್ ಗರ್ ತಿರಂಗ: ಜಿಲ್ಲೆಯಲ್ಲಿ ಕುಟುಬಶ್ರೀಯಿಂದ 1,49,633 ಧ್ವಜಗಳ ನಿರ್ಮಾಣ


               ಕಾಸರಗೋಡು:  75ನೇ ಸ್ವಾತಂತ್ರ್ಯ ದಿನಾಚರಣೆ ಹರ್ ಗರ್ ತಿರಂಗದ ಭಾಗವಾಗಿ ಜಿಲ್ಲೆಯಲ್ಲಿ  ಕುಟುಂಬಶ್ರೀ ಒಕ್ಕೂಟಗಳು 1,49,633 ರಾಷ್ಟ್ರ ದ್ವಜ ನಿರ್ಮಾಣದಲ್ಲಿ ತೊಡಗಿವೆ. ಆಗಸ್ಟ್ 13ರಿಂದ 15 ರವರೆಗೆ ಮನೆಗಳಲ್ಲಿಯೂ, ವಿಧ್ಯಾಭ್ಯಾಸ ಸಂಸ್ಥೆಗಳಲ್ಲಿಯೂ, ಸÀರ್ಕಾರಿ, ಅರೆ ಸರಕಾರಿ ಸಂಸ್ಥೆಗಳಲ್ಲಿಯೂ ಈ ದ್ವಜಗಳನ್ನು ಹಾರಿಸಬಹುದು.
          152 ಕುಟುಂಬಶ್ರೀ ಯೂನಿಟ್ ಗಳು ದ್ವಜಗಳನ್ನು ತಯಾರಿಸುತ್ತಿವೆ. ದ್ವಜ ಸಂಹಿತೆ ಮಾನ ದಂಡದ ಪ್ರಕಾರ 3:2 ಎಂಬ ಅನುಪಾತದಲ್ಲಿ ರಾಷ್ಟ್ರ ದ್ವಜಗಳನ್ನು ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತದೆ. 30 ರೂಪಾಯಿ ಬೆಲೆಯನ್ನು ಈ ರಾಷ್ಟ್ರ ದ್ವಜಕ್ಕೆ ನಿಶ್ಚಯಿಸಲಾಗಿದೆ. ಶಾಲಾ ಅಧಿಕೃತರು, ವಿದ್ಯಾರ್ಥಿಗಳು ಇಲ್ಲದ ಮನೆಗಳಿಗೆ ಅಗತ್ಯವಿರುವ ದ್ವಜಗಳ ಲೆಕ್ಕವನ್ನು ಸ್ಥಳೀಯಾಡಳಿತ ಸಂಸ್ಥೆಗಳು ತಿಳಿಸುವುದಕ್ಕೆ ಅನುಸಾರವಾಗಿ ಧ್ವಜಳನ್ನು ನಿರ್ಮಿಸಲಾಗುತ್ತದೆ. ಹೆಚ್ಚು ದ್ವಜಗಳ ಅಗತ್ಯ ಬಿದ್ದಲ್ಲಿ ಅಗತ್ಯಕ್ಕೆ ಅನುಸಾರವಾಗಿ ನಿರ್ಮಿಸಿ ಕೊಡಲಾಗುವುದು ಎಂದು ಕುಟುಂಬಶ್ರೀ ಜಿಲ್ಲಾ ಮಿಷನ್ ಕೋರ್ಡಿನೇಟರ್ ಟಿ.ಟಿ.ಸುರೇಂದ್ರನ್ ಹೇಳಿದರು.
        ಪಳ್ಳಿಕ್ಕೆರೆ ಪಂಚಾಯತ್ ನ ಬ್ಲೋಸ್ಸಂ ಕುಟುಂಬಶ್ರೀ ಒಕ್ಕೂಟಕ್ಕೆ 6000 ದ್ವಜಗಳನ್ನು ನಿರ್ಮಿಸುವ ಆರ್ಡರ್ ಲಭಿಸಿದೆ. ಇಲ್ಲಿ ಒಬ್ಬರು ಸರಿಯಾದ ಅಳತೆಯಲ್ಲಿ ಬಟ್ಟೆಯನ್ನು ಕತ್ತರಿಸಿ ನೀಡುತ್ತಾರೆ. 5 ಮಂದಿ ದ್ವಜ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಒಂದು ದಿನ 600 ದ್ವಜಗಳನ್ನು ಇಲ್ಲಿ ತಯಾರಿಸಲಾಗುವುದೆಂದು ದ್ವಜಗಳನ್ನು ನಿರ್ಮಿಸಲು ತಮಗೆ ದೊರೆತ ಅವಕಾಶ ತುಂಬಾ ಸಂತೋಷವನ್ನು ನೀಡಿದೆ ಎಂದು ಪಳ್ಳಿಕ್ಕೆರೆ ಬ್ಲೋಸ್ಸಮ್ ಕುಟುಂಬಶ್ರೀ ಕಾರ್ಯದರ್ಶಿ ಎಸ್ ವಿ ಸೆಮೀರ ಹೇಳಿದರು. ರಾಷ್ಟ್ರ ದ್ವಜಕ್ಕೆ ಗೌರವವನ್ನು ನೀಡುವುದರ ಜೊತೆಗೆ ಎಲ್ಲಾ ಪೌರರಿಗೂ ದ್ವಜದ ಮೇಲೆ ಭಕ್ತಿಯನ್ನು ಮೂಡಿಸಲು ಹಾಗೂ ದೇಶ ಭಕ್ತಿಗೆ ಪ್ರೇರಣೆಯಾಗುವ ಗುರಿಯನ್ನಿಟ್ಟುಕೊಂಡು "ಹರ್ ಗರ್ ತಿರಂಗ" ವನ್ನು ದೇಶ ವ್ಯಾಪಕವಾಗಿ ಆಚರಿಸಲಾಗುವುದು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries