ಕಾಮನ್ ವೆಲ್ತ್ ಗೇಮ್ಸ್ 2022: ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ಭಜರಂಗ್, ದೀಪಕ್ ಪೂನಿಯಾ, ಸಾಕ್ಷಿ ಮಲ್ಲಿಕ್

 

         ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ದೀಪಕ್ ಪೂನಿಯಾ ಹಾಗೂ ಸಾಕ್ಷಿ ಮಲ್ಲಿಕ್  ಚಿನ್ನದ ಪದಕವನ್ನು ಗೆದಿದ್ದಾರೆ. 

                ಭಜರಂಗ್ ಪುನಿಯಾ ಪುರುಷರ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.  ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕೆನಡಾದ ಲ್ಯಾಚ್ಲನ್ ಮೆಕ್ ನೀಲ್ ವಿರುದ್ಧ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿದ ಟೊಕಿಯೋ ಒಲಂಪಿಕ್ ಪದಕ ವಿಜೇತ ಭಜರಂಗ್ ಪೂನಿಯಾ, ಅಂತಿಮವಾಗಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.


              ಮೊದಲ ಸುತ್ತಿನಲ್ಲಿ ಪ್ರಥಮ ಮೂರು ಪಂದ್ಯಗಳನ್ನು ಗೆದ್ದ ಭಜರಂಗ್ ಪೂನಿಯಾ, ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಯಾವುದೇ ಸಮಯವನ್ನು ಭಜರಂಗ್ ಫೂನಿಯಾ ವ್ಯರ್ಥ ಮಾಡಲಿಲ್ಲ. ಆದಾಗ್ಯೂ ಎರಡು ಕಡೆಯೂ ಪ್ರಬಲ ಹೋರಾಟ ಕಂಡುಬಂದಿತು.

                   ಕುಸ್ತಿಪಟು ದೀಪಕ್ ಪುನಿಯಾ  ಪುರುಷರ 86 ಕೆಜಿ ವಿಭಾಗದ ಫೈನಲ್‌ನಲ್ಲಿ ಪಾಕಿಸ್ತಾನದ ಮುಹಮ್ಮದ್ ಇನಾಮ್ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಇನ್ನೂ ಸಾಕ್ಷಿ ಮಲ್ಲಿಕ್ 62 ಕೆಜಿ ಮಹಿಳೆಯರ ವಿಭಾಗದಲ್ಲಿ ಕೆನಡಿಯನ್ ಗೊನ್ಜಾಲೆಜ್ ವಿರುದ್ಧ ಗೆದ್ದು ಬಂಗಾರಕ್ಕೆ ಮುತ್ತಿಟ್ಟರು.

#CommonwealthGames | I always try to give my best. I want to thank people for their support. Next, I will try to win a gold medal for the country in the 2024 Olympics: Indian wrestler Bajrang Punia after winning a gold medal in men's freestyle 65 Kg weight category final
Image
Image
1.7K
Reply
Cop

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ರಾಷ್ಟ್ರಕ್ಕೆ ಚಿನ್ನದ ಪದಕ ತಂದುಕೊಟ್ಟ ಭಜರಂಗ್ ಹಾಗೂ ದೀಪಕ್ ಪೂನಿಯಾ, ಸಾಕ್ಷಿ ಮಲ್ಲಿಕ್  ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

"This time I just wanted to win gold. I gave my best and I am very happy. I got emotional when the national anthem was played after my win,” says Indian wrestler Sakshi Malik after winning a gold medal at #CommonwealthGames
Image

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries