HEALTH TIPS

ಯುಎಪಿಎ: 4,690 ಬಂಧಿತರಲ್ಲಿ 149 ಮಂದಿ ಮಾತ್ರ ಅಪರಾಧಿಗಳು

 

            ನವದೆಹಲಿ: 'ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ 2018ರಿಂದ 2022ರ ಅವಧಿಯಲ್ಲಿ ಒಟ್ಟು 4,690 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಕೇವಲ 149 ಮಂದಿಯ ವಿರುದ್ಧ ಮಾತ್ರ ಆರೋಪಗಳು ಸಾಬೀತಾಗಿವೆ' ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಬುಧವಾರ ಹೇಳಿದರು.

                'ಈ ಕಾಯ್ದೆ ಅಡಿ 2020ರಲ್ಲಿ 1,321 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ 80 ಮಂದಿಯ ವಿರುದ್ಧ ಆರೋಪಗಳು ಸಾಬೀತಾಗಿವೆ. ಅಂತೆಯೇ, 2019ರಲ್ಲಿ 1,948 ಬಂಧಿತರಲ್ಲಿ 34 ಹಾಗೂ 2018ರಲ್ಲಿ ಬಂಧಿಸಲಾದ 1,421 ಮಂದಿಯಲ್ಲಿ 35 ವ್ಯಕ್ತಿಗಳ ಮೇಲಿನ ಆರೋಪಗಳು ಸಾಬೀತಾಗಿವೆ' ಎಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

                'ಈ ಮೂರು ವರ್ಷದ ಅವಧಿಯಲ್ಲಿ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಮಂದಿಯನ್ನು (1,338) ಬಂಧಿಸಲಾಗಿದೆ. ನಂತರದ ಸ್ಥಾನದಲ್ಲಿ ಮಣಿಪುರ (943) ಮತ್ತು ಮೂರನೇ ಸ್ಥಾನದಲ್ಲಿ ಜಮ್ಮು ಮತ್ತು ಕಾಶ್ಮೀರ (750) ಇದೆ. ಒಟ್ಟು ಬಂಧಿತರಲ್ಲಿ 2,488 ಮಂದಿ 18-30 ವಯೋಮಾನಕ್ಕೆ ಸೇರಿದವರು. 1,850 ಮಂದಿ 30-45 ವಯೋಮಾನದವರಾಗಿದ್ದಾರೆ' ಎಂದು ಮಾಹಿತಿ ನೀಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries