ಆ.6. ರಂದು ಕೊಂಡೆವೂರಲ್ಲಿ ‘ಲಕ್ಷ್ಮೀ .ವಿ. ಭಟ್ ಅವರ ‘ವನಸುಮ’ ಹಾಗೂ ‘ಕಾವ್ಯ ಮೃಷ್ಟಾನ್ನ’ ಕೃತಿಬಿಡುಗಡೆ ಹಾಗೂ ಗೀತಾಭಿಯಾನ ಉದ್ಘಾಟನೆ

         
            ಉಪ್ಪಳ :  ಕೊಂಡೆವೂರು ಶ್ರೀ ಮಠದಲ್ಲಿ ಕವಿಯತ್ರಿ  ‘ಲಕ್ಷ್ಮೀ .ವಿ. ಭಟ್ ಅವರ ‘ವನಸುಮ’ ಹಾಗೂ ‘ಕಾವ್ಯ ಮೃಷ್ಟಾನ್ನ’ ಸ್ವರಚಿತ ಕವನ ಸಂಕಲನಗಳ  ಕೃತಿಬಿಡುಗಡೆ ಸಮಾರಂಭ ಹಾಗೂ ಗೀತಾಭಿಯಾನ ಉದ್ಘಾಟನೆ ಆ.  6ರಂದು ಶನಿವಾರ  ಸಂಜೆ ಗಂಟೆ 5ರಿಂದ ನಡೆಯಲಿದೆ.
         ಕಲಾಕುಂಚ ಗಡಿನಾಡ ಘಟಕ ಕೇರಳ ಶಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ವನಸುಮ ಕೃತಿ ಬಿಡುಗಡೆ ಗೈದು ಆಶೀರ್ವಚನ ನೀಡುವರು. ಕೃತಿಕರ್ತೆ, ಮಂಗಳೂರು ಕೆನರಾ ಪ್ರೌಢ ಶಾಲಾ ಶಿಕ್ಷಕಿ ಲಕ್ಷ್ಮೀ .ವಿ. ಭಟ್ ತಲಂಜೇರಿ ಆಶಯನುಡಿಗಳನ್ನಾಡುವರು.  ಕವಿ ಸಾಹಿತಿ ವಿ ಬಿ ಕುಳಮರ್ವ ಅಧ್ಯಕ್ಷತೆ ವಹಿಸಲಿದ್ದು ಕಾವ್ಯಮೃμÁ್ಟನ್ನ ಕೃತಿ ಬಿಡುಗಡೆಗೊಳಿಸಿ ಕೃತಿ ಅವಲೋಕನ ನಡೆಸಲಿದ್ದಾರೆ.
         ಕವಿ ಸಾಹಿತಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ವನಸುಮ ಕೃತಿ ಅವಲೋಕನ ಗೈಯಲಿದ್ದಾರೆ. ಸಾಹಿತಿ ನಿವೃತ್ತ ಬ್ಯಾಂಕ್ ಅಧಿಕಾರಿ ಡಾ.ಕೊಳಚಪ್ಪೆ ಗೋವಿಂದ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಕ್ಯಾಂಪೆÇ್ಕೀ ನಿರ್ದೇಶಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿರುವರು. ಕಲಾಕುಂಚ ಕೇರಳ ಶಾಖೆಯ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ ಶುಭಾಶಂಸನೆ ಗೈಯ್ಯುವರು.   
         ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಗಣಪತಿ ಭಟ್ ಪೆರ್ಮುಖ, ದಿವಾಕರ ಬಲ್ಲಾಳ್, ಪ್ರಸನ್ನಾ ಸಿ ಎಸ್ ಭಟ್ ಕಾಕುಂಜೆ, ದಿವ್ಯಾ ಚಂದನ್ ಕಾರಂತ, ರಾಧಾಮಣಿ ಆರ್ ರಾವ್  ಭಾವ ಗಾಯನ ನಡೆಸಲಿದ್ದಾರೆ.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries