HEALTH TIPS

ಮಗ್ಗುಲ ಬದಲಿಸಿದ ಪಿ ಜಯರಾಜನ್: ದೇವಾಲಯಗಳ ಕರ್ಕಟಕ ಉತ್ಸವಕ್ಕೆ ಆಗಿಸುವ ಭಕ್ತರಿಗೆ ನೆರವು ನೀಡಬೇಕು ಎಂದು ಹೇಳಿದ್ದು ತಪ್ಪು ಎಂದು ಕ್ಷಮಾಪಣೆ ಬರಹ



              ಕಣ್ಣೂರು: ಕರ್ಕಟಕ ಬಲಿ ಉತ್ಸವದಂದು ದೇವಾಲಯಗಳಿಗೆ ಆಗಮಿಸುವ ಭಕ್ತರಿಗೆ ಸಕಲ ನೆರವು ನೀಡಬೇಕು ಎಂದು ಹೇಳಿದ್ದು ತಪ್ಪು ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಪಿ.ಜಯರಾಜನ್ ಹೇಳಿದ್ದಾರೆ.
           ಪಕ್ಷದಿಂದ ಟೀಕೆಗೊಳಗಾಗಿ ತಪ್ಪು ಮಾಡಿದೆ ಎಂದು ಫೇಸ್ ಬುಕ್ ಮೂಲಕ ಜಯರಾಜನ್ ವಿವರಣೆ ನೀಡಿರುವರು. ಪಿತೃರ್ತರ್ಪಣ ಮಾಡಲು ಬರುವ ಭಕ್ತರ ಭಾವನೆಗಳ ಕುರಿತು ಮಾತನಾಡಿದ್ದೆ.  ಈ ಮಾರ್ಗವು ಮೂಢನಂಬಿಕೆಯನ್ನು ಉತ್ತೇಜಿಸುತ್ತದೆ ಎಂದು ಪಕ್ಷ ಮತ್ತು ಒಡನಾಡಿಗಳು ಗಮನಸೆಳೆದಿದ್ದಾರೆ ಎಂದು ಜಯರಾಜನ್ ಹೇಳಿದ್ದಾರೆ.
              ಪಕ್ಷದ ಟೀಕೆಗಳನ್ನು ಒಪ್ಪಿಕೊಳ್ಳುತ್ತೇನೆ. ತಾನು ವೈಯಕ್ತಿಕವಾಗಿ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಭಾಗವಹಿಸುವುದಿಲ್ಲ ಮತ್ತು ಮನೆಯಲ್ಲಿ ಪೂಜಾ ಕೋಣೆ ಅಥವಾ ಪೂಜೆ ನೆರವೇರಿಸುವವನಲ್ಲ ಎಂದು ಹೇಳಿದರು. ಜೀವನದಲ್ಲಿ ಚಿಕ್ಕ ವಯಸ್ಸಿನಿಂದಲೂ, ತಾನು  ಇಲ್ಲಿಯವರೆಗೆ  ಭೌತಿಕ ನೆಲೆಯಲ್ಲಿ ದೃಢವಾಗಿ ಮುಂದುವರಿದಿರುವೆ. ಭಕ್ತರ ನಡುವಿನ ಕೋಮುವಾದಿ ಶಕ್ತಿಗಳ ಸಂವಾದದಲ್ಲಿ ಎಚ್ಚರಿಕೆ ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುವೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
            ಕರ್ಕಟಕ ಬಲಿಯಲ್ಲಿ ದೇವಾಲಯಗಳಿಗೆ ತರ್ಪಣೆ ಅರ್ಪಿಸಲು ಆಗಮಿಸುವ ಭಕ್ತರಿಗೆ ಎಲ್ಲ ರೀತಿಯ ನೆರವು ನೀಡಲು ಪಕ್ಷದ ಸ್ವಯಂಸೇವಾ ಸಂಸ್ಥೆಗಳು ಮುಂದಾಗಬೇಕು ಹಾಗೂ ಉತ್ಸವಗಳಿಗೆ ಯಾವುದೇ ಧರ್ಮವಿಲ್ಲ. ಎಲ್ಲ ಧರ್ಮಗಳಲ್ಲೂ ಮೃತರನ್ನು ಸ್ಮರಿಸುವ ಆಚರಣೆಗಳು, ದಿನಗಳು ಇವೆ ಮತ್ತು ಇಸ್ಲಾಂನಲ್ಲಿ ಎರಡು ವ್ರತಗಳಿವೆ, ಅಂತಹ ಸ್ಥಳಗಳು ಭಯೋತ್ಪಾದನೆಯ ಮುಖವನ್ನು ಮರೆಮಾಚುವ ಸೇವೆಯ ಮುಖವನ್ನು ಧರಿಸುವವರಿಗೆ ಮಾತ್ರ ಬಿಡಬಾರದು ಎಂದು ಪಿ.ಜಯರಾಜನ್ ಈ ಹಿಂದೆ ಹೇಳಿದ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries