HEALTH TIPS

ನಾಪತ್ತೆಯಾದ ಮಕ್ಕಳೆಷ್ಟು: ಕಾಸರಗೋಡು ಮೂಲದ ಮಕ್ಕಳ ರಕ್ಷಣಾ ತಂಡಕ್ಕೆ ಉತ್ತರಿಸಿದ ಮಕ್ಕಳ ಹಕ್ಕು ಆಯೋಗ


                   
        ಕಾಸರಗೋಡು: ಕೇರಳದಲ್ಲಿ ನಾಪತ್ತೆಯಾಗುವ ಮಕ್ಕಳು ಬಳಿಕ ಏನಾಗುತ್ತಾರೆ ಎಂಬ ಮಕ್ಕಳ ರಕ್ಷಣಾ ತಂಡದ ದೂರಿಗೆ ಕೇರಳ ಮಕ್ಕಳ ಹಕ್ಕುಗಳ ಆಯೋಗ ಉತ್ತರ ನೀಡಿದೆ. ಸಮಾಜದಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ಮಕ್ಕಳು ನಾಪತ್ತೆಯಾಗಿದ್ದಾರೆ ಎಂಬಂತೆ ಮಕ್ಕಳ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಜನರು ಸಾಮಾನ್ಯವಾಗಿ ಸತ್ಯವನ್ನು ಅರ್ಥಮಾಡಿಕೊಳ್ಳದೆ ಹಂಚಿಕೊಳ್ಳುತ್ತಾರೆ. ಆದರೆ ಹಂಚಿಕೊಂಡ ನಂತರ, ಅನೇಕ ಜನರು ಅದರ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತಾರಾದರೂ ಮಾಹಿತಿ ಲಭಿಸುತ್ತಿಲ್ಲ. ಹಂಚಿಕೆಯಾಗುವ ಪೋಸ್ಟ್‍ಗಳ ಕಾಲವನ್ನು ದೃಢೀಕರಿಸಲು ಜನರಿಗೆ  ಯಾವುದೇ ವ್ಯವಸ್ಥೆಯು ಪ್ರಸ್ತುತ ಇಲ್ಲ. ಇದನ್ನು ಮನಗಂಡ ಚೈಲ್ಡ್ ಪೆÇ್ರಟೆಕ್ಟ್ ಟೀಮ್ ಎಂಬ ಸ್ವಯಂಸೇವಾ ಸಂಸ್ಥೆಯು ಕಳೆದ ಆರು ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳ ನಾಪತ್ತೆ ವಿಚಾರದಲ್ಲಿ ಮಧ್ಯಪ್ರವೇಶಿಸಿ ದೂರು ದಾಖಲಿಸಿದ್ದು, ಕಳೆದ 2019ರಲ್ಲಿ ಕಾಣೆಯಾದ ಒಟ್ಟು ಮಕ್ಕಳ ಸಂಖ್ಯೆಯಲ್ಲಿ ದಾಖಲೆಯು ಉತ್ತರ ನೀಡಿದೆ.
      2020-2021ರ ದಾಖಲಾದ ದೂರುಗಳಲ್ಲಿ ಕೇವಲ ಇಬ್ಬರು ಮಕ್ಕಳನ್ನು ಪತ್ತೆಹಚ್ಚಲು ಮಾತ್ರ ಉಳಿದಿದೆ. ಪಲ್ಲುರುತ್ತಿ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿರುವ ಒಂಬತ್ತು ವರ್ಷದ ಸಚಿನ್ ಚಂದ್ರಶೇಖರನ್ ತನ್ನ ತಾಯಿಯೊಂದಿಗೆ ನಾಪತ್ತೆಯಾಗಿದ್ದ ಎಂದು ಕೊಚ್ಚಿಯ ಸಹಾಯಕ ಪೋಲೀಸ್ ಆಯುಕ್ತರು ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಫರೂಕ್ ಪೋಲೀಸ್ ಠಾಣೆಯಿಂದ ಅಪರಾಧ ಸಂಖ್ಯೆ 661/2021/ ಯು/s 57 ಎಸ್ ಕೆಪಿ ಆಕ್ಟ್  ಕಾಣೆಯಾದ ಪ್ರಕರಣದಲ್ಲಿ ಅಶ್ವಿನ್ ಎಂಬ ಮಗು ಕಾಣೆಯಾಗಿದ್ದು ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೋಲೀಸರು ಮಕ್ಕಳ ಹಕ್ಕು ಆಯೋಗಕ್ಕೆ ತಿಳಿಸಿದರು. ಈ ಅವಧಿಯಲ್ಲಿ, ಕಾಣೆಯಾದ ಹೆಚ್ಚಿನ ಮಕ್ಕಳು ಪತ್ತೆಯಾಗಿದ್ದಾರೆ ಎಂದು ಮಕ್ಕಳ ರಕ್ಷಣಾ ತಂಡಕ್ಕೆ ಕೇರಳ ಮಕ್ಕಳ ಹಕ್ಕುಗಳ ಆಯೋಗದ ಉತ್ತರದಲ್ಲಿ ತಿಳಿಸಲಾಗಿದೆ. ಮಕ್ಕಳು ಕಾಣೆಯಾಗುವ ಸಾಮಾನ್ಯ ಪ್ರಕರಣಗಳಲ್ಲಿ ಒಂದಾದ ಕುಟುಂಬಗಳು ಸಾಕಷ್ಟು ಆರೈಕೆ ಮತ್ತು ರಕ್ಷಣೆಯಿಲ್ಲದೆ ಏಕಾಂಗಿಯಾಗಿರುವಂತಹ ಸಂದರ್ಭಗಳಾಗಿವೆ ಎಂದು ಪೋಲೀಸರು ಹೇಳುತ್ತಾರೆ. ಸಾಮಾಜಿಕ ಮಾಧ್ಯಮ ಮತ್ತು ವಾಟ್ಸ್ ಆಫ್, ಇಷ್ಸ್ಟ್ರಾ ಗ್ರಾಂ ನಂತಹ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ ಎರಡನೇ ಕಾರಣ.  ಹದಿಹರೆಯದ ಹುಡುಗಿಯರು ಪ್ರೇಮ ಪ್ರಕರಣಗಳು ಮತ್ತು ಪ್ರಲೋಭನೆಗಳಲ್ಲಿ ಒಳಗಾಗಿ ಮನೆ ತೊರೆದು ಹೋಗುವುದು ಮೂರನೆಯದಾದರೆ  ಅನಾಥಾಶ್ರಮಗಳಲ್ಲಿ ವಾಸಿಸುವ ಮಕ್ಕಳು ಪರಿಸ್ಥಿತಿಗೆ ಹೊಂದಿಕೊಳ್ಳಲು ಅಸಮರ್ಥರಾಗಿ ತೆರಳುವುದು ನಾಲ್ಕನೇ ಕಾರಣ ಎನ್ನಲಾಗಿದೆ.  ಮಾನಸಿಕ ಒತ್ತಡದಿಂದಾಗಿ ಅನಾಥಾಶ್ರಮದಿಂದ ಹೊರಗೆ ತೆರಳುತ್ತಾರೆ.  ಈ ರೀತಿ ತಪ್ಪಿಸಿಕೊಳ್ಳುವ ಮಕ್ಕಳು ಜೊತೆಗೆ ತಮ್ಮ ಸ್ನೇಹಿತರನ್ನು ಪ್ರೇರೇಪಿಸುತ್ತಾರೆ. 6 ಮಕ್ಕಳು ಪೆÇೀಷಕರಿಂದ ಕೈಬಿಟ್ಟವರು. ಅಧ್ಯಯನದಲ್ಲಿ ಹಿಂದುಳಿದಿರುವ ಕಾರಣ 7 ಮಕ್ಕಳು ಪರೀಕ್ಷೆ ಫಲಿತಾಂಶಕ್ಕೆ ಮುನ್ನವೇ ಮನೆ ಬಿಟ್ಟಿದ್ದಾರೆ ಎಂದು ಕೊಚ್ಚಿ ನಗರ ಪೋಲೀಸರು ಮಾಹಿತಿ ನೀಡಿದ್ದಾರೆ.ಅವರಲ್ಲಿ 8 ಮಕ್ಕಳು ಪೋಷಕರು ಪ್ರತ್ಯೇಕವಾಗಿ ವಾಸಿಸುವ ಕಾರಣ ಅನಾಥತೆ ಕಾಡಿ ಮನೆಬಿಟ್ಟವರು.
         ಪೋಲೀಸ್ ವರದಿಯ ಪ್ರಕಾರ, ಡಿಎಂಪಿಟಿಯು ಸೆಲ್ ಕೊಚ್ಚಿ ಸಿಟಿ ಬ್ರಾಂಚ್ ಎಸಿಪಿ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೊಚ್ಚಿ ನಗರ ವ್ಯಾಪ್ತಿಯಲ್ಲಿ ನಾಪತ್ತೆ ಪ್ರಕರಣದ ವರದಿ ಬಂದ ತಕ್ಷಣ, ನಾಪತ್ತೆಯಾದವರ ಪೋಟೋದೊಂದಿಗೆ ಮಕ್ಕಳನ್ನು ದಾಖಲಿಸುವ ಮೂಲಕ ಮಕ್ಕಳ ಪತ್ತೆಗೆ ಕ್ರಮಕೈಗೊಳ್ಳಲಾಗುತ್ತದೆ. ಖ.ಸಿ.ಆರ್.ಬಿ ಅಡಿಯಲ್ಲಿ ಪೋರ್ಟಲ್ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತದೆ.
          ಮಕ್ಕಳ ಸುರಕ್ಷತೆ, ಕಲ್ಯಾಣ ಮತ್ತು ಉನ್ನತಿಗಾಗಿ, ಕಾಸರಗೋಡು ಜಿಲ್ಲೆಯಲ್ಲಿ ನೋಂದಾಯಿಸಲ್ಪಟ್ಟ ಮತ್ತು ಕಳೆದ ಆರು ವರ್ಷಗಳಿಂದ ಕಾಞಂಗಾಡ್ ಕೇಂದ್ರವಾಗಿ  ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಯು ಹದಿನಾಲ್ಕು ಜಿಲ್ಲೆಗಳಲ್ಲಿ ಸಮಿತಿಗಳನ್ನು ಹೊಂದಿದೆ ಮತ್ತು ಕೇರಳದಲ್ಲಿ 16 ಸಹಾಯವಾಣಿ ಸಂಖ್ಯೆಗಳನ್ನು ಹೊಂದಿದೆ. ದೆಹಲಿ ಮತ್ತು ವಿದೇಶಗಳಲ್ಲಿ ಯುಎಇಯಲ್ಲಿ ಸಮಿತಿಗಳು ಮತ್ತು ಸಹಾಯವಾಣಿ ಸಂಖ್ಯೆಗಳಿವೆ. ಸಂಪರ್ಕ ಸಂಖ್ಯೆ 8281998415 9446652447. ಮೂಲಕ ಮಾಹಿತಿ ಪಡೆಯಲು ಸೂಚಿಸಲಾಗಿದೆ. ಪತ್ರಕರ್ತ ನಾಝರ್ ಕಾಞಂಗಾಡ್ ಇದರ ಸ್ಥಾಪಕರೂ, ಅಧ್ಯಕ್ಷರೂ ಆಗಿದ್ದಾರೆ.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries