ಪ್ರತಿಭಟನೆಗೆ ಮಣಿದ ಸರಕಾರ : ಅಲಪ್ಪುಳ ಜಿಲ್ಲಾಧಿಕಾರಿ ವೆಂಕಿಟರಾಮನ್ ನೇಮಕ ರದ್ದು

 

                  ಆಲಪ್ಪುಳ: ಸಾರ್ವಜನಿಕರಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ವಾರ ಆಲಪ್ಪುಳದ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಿಟರಾಮನ್ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ಅದರ ಬದಲು ಅವರನ್ನು ನಾಗರಿಕ ಸೇವೆಗಳ ನಿಗಮದ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿದೆ.

                  ಶ್ರೀರಾಮ್ ಪಾನಮತ್ತರಾಗಿ ವಾಹನ ಚಲಾಯಿಸಿ ಪತ್ರಕರ್ತ ಬಶೀರ್ ಅವರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಅವರನ್ನು ಇತ್ತೀಚೆಗೆ ಸರಕಾರವು ಅಲಪ್ಪುಳ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ ಬಳಿಕ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಕೇರಳ ಮುಸ್ಲಿಂ ಜಮಾಅತ್ ನ ನಾಯಕರ ನೇತೃತ್ವದಲ್ಲಿ ಪ್ರತಿಭಟನೆಯೂ ನಡೆದಿತ್ತು.

                ಶ್ರೀರಾಮ್ ಪಾನಮತ್ತರಾಗಿ ಕಾರು ಚಲಾಯಿಸಿದ ಪರಿಣಾಮ ತಿರುವನಂತಪುರದ ಮ್ಯೂಸಿಯಂ ಜಂಕ್ಷನ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಬಷೀರ್ ಅವರು ಮೃತಪಟ್ಟಿದ್ದರು. ಈ ಅಪಘಾತದ ಕುರಿತ ತನಿಖೆಯಲ್ಲಿ ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಅನಂತರ ರಾಜ್ಯ ಸರಕಾರ ಶ್ರೀರಾಮ್ ಅವರನ್ನು ಅಮಾನತಿನಲ್ಲಿ ಇರಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries