ಇನ್ನು ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ ಹುದ್ದೆ ಇಲ್ಲ: ವಿದ್ಯಾರ್ಥಿಗಳಿಗೆ ಪೋನ್ ಬಳಕೆ ನಿಷೇಧ: ಲಿಂಗ ಸಮಾನತೆಯ ಸಮವಸ್ತ್ರದ ವಿಚಾರದಲ್ಲಿ ಸÀರ್ಕಾರ ಬಲವಂತಪಡಿಸದು: ಸಚಿವ ವಿ.ಶಿವಂ ಕುಟ್ಟಿ


                ತಿರುವನಂತಪುರ: ಲಿಂಗ ಸಮಾನತೆಯ ಸಮವಸ್ತ್ರದ ವಿಚಾರದಲ್ಲಿ ಸರ್ಕಾರ ಬಲವಂತದ ಯಾವುದೇ ಕ್ರಮಕ್ಕೆ ಸದ್ಯ ಮುಂದಾಗುವುದಿಲ್ಲ ಎಂದು ಶಿಕ್ಷಣ ಸಚಿವ ವಿ ಶಿವಂಕುಟ್ಟಿ ಹೇಳಿದ್ದಾರೆ.
           ಅನುμÁ್ಠನಗೊಂಡ ಯಾವುದೇ ಶಾಲೆಗಳಲ್ಲಿ ದೂರು ಬಂದಿಲ್ಲ. ಸಮವಸ್ತ್ರದ ಬಗ್ಗೆ ಆಯಾ ಶಾಲೆಗಳು ನಿರ್ಧರಿಸಬಹುದು ಎಂದು ಸಚಿವರು ಹೇಳಿದರು. ಯಾವುದೇ ನಿರ್ದಿಷ್ಟ ಏಕರೂಪ ಸಂಹಿತೆ ಹೇರುವ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
        ಪ್ರೌಢಶಾಲಾ ಮುಖ್ಯೋಪಾಧ್ಯಾಯರನ್ನು ಇನ್ನು ಮುಂದೆ ವೈಸ್ ಪ್ರಿನ್ಸಿಪಾಲ್ ಎಂದು ಕರೆಯಲಾಗುತ್ತದೆ. ಮಕ್ಕಳು ಶಾಲೆಗೆ ಮೊಬೈಲ್ ತರುವುದನ್ನು ಸಂಪೂರ್ಣವಾಗಿ ನಿμÉೀಧಿಸಲಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಅತಿಯಾದ ಫೆÇೀನ್ ಬಳಕೆ ಮಕ್ಕಳಲ್ಲಿ ವರ್ತನೆಯ ಅಸ್ವಸ್ಥತೆಗಳನ್ನು ಉಂಟುಮಾಡಬಹುದು ಎಂದು ಅವರು ತಿಳಿಸಿದರು.
          ರಾಜ್ಯದಲ್ಲಿ ಪ್ಲಸ್ ಒನ್ ಮೊದಲ ಹಂಚಿಕೆ ಆಗಸ್ಟ್ 5 ರಂದ ರಾತ್ರಿ 10 ಗಂಟೆಗೆ ಪೂರ್ಣಗೊಳ್ಳಲಿದೆ. 15ರಿಂದ 17ರವರೆಗೆ ಎರಡನೇ ಹಂತದ ಹಂಚಿಕೆ ನಡೆಯಲಿದೆ. ಅಂತಿಮ ಹಂಚಿಕೆ ಆಗಸ್ಟ್ 22 ರಂದು ನಡೆಯಲಿದೆ. ಆಗಸ್ಟ್ 24 ರಂದು ಪ್ರವೇಶ ಪೂರ್ಣಗೊಳ್ಳಲಿದೆ. ಇದೇ 25ರಂದು ತರಗತಿಗಳು ಆರಂಭವಾಗಲಿವೆ ಎಂದು ಸಚಿವರು ತಿಳಿಸಿದರು. ಶಿಕ್ಷಕರ ಸಂಘಟನೆಗಳೊಂದಿಗೆ ನಡೆಸಿದ ಸಭೆ ಆಧರಿಸಿ ಸಚಿವರು ಈ ನಿರ್ಧಾರ ಪ್ರಕಟಿಸಿದರು.
          ಜನವರಿ 3 ರಿಂದ 7 ರವರೆಗೆ ಕೋಝಿಕ್ಕೋಡ್‍ನಲ್ಲಿ ರಾಜ್ಯ ಶಾಲಾ ಕಲಾ ಉತ್ಸವ ನಡೆಯಲಿದೆ. ರಾಜ್ಯ ಕ್ರೀಡಾ ಮೇಳವು ತಿರುವನಂತಪುರದಲ್ಲಿ ನಡೆಯಲಿದ್ದು, ವಿಜ್ಞಾನ ಮೇಳ ಎರ್ನಾಕುಳಂನಲ್ಲಿ ನಡೆಯಲಿದೆ. ಖಾದರ್ ಸಮಿತಿ ವರದಿಯ ಮೊದಲ ಹಂತವನ್ನು ಈ ವರ್ಷ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries