ಮಳೆಯ ದುರಂತ ಎದುರಿಸಲು ಜಿಲ್ಲೆ ಸಂಪೂರ್ಣ ಸಜ್ಜು: ಜಿಲ್ಲಾಧಿಕಾರಿ


              ಕಾಸರಗೋಡು: ಜಿಲ್ಲಾ ತುರ್ತುಪರಿಸ್ಥಿತಿ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು,  ತುರ್ತು ಪರಿಸ್ಥಿತಿ  ಕೇಂದ್ರಗಳು 24 ಗಂಟೆ ಕಾರ್ಯಾಚರಿಸಲಿದೆ.
                  ಕಾಸರಗೋಡು ಜಿಲ್ಲೆಯಲ್ಲಿ ಆಗಸ್ಟ್ 2,3 ಮತ್ತು 5ರಂದು ಆರೆಂಜ್ ಅಲರ್ಟ್ ಹಾಗೂ ಆಗಸ್ಟ್ 4 ರಂದು  ರೆಡ್ ಅಲರ್ಟ್ ಹೊರಡಿಸಿರುವ ಹಿನ್ನಲೆಯಲ್ಲಿ ಪ್ರಕೃತಿ ದುರಂತ ನಿವಾರಣೆಗಾಗಿ,  ಮಳೆಯದುರಂತವನ್ನು ಎದುರಿಸಲು ಜಿಲ್ಲೆಯಲ್ಲಿ ಸಂಪೂರ್ಣ ಸಜ್ಜೀಕರಣಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಹೇಳಿದರು. ಮಳೆಯ ದುರಂತದ ಕುರಿತು ಜಿಲ್ಲೆಯ ವಿವಿಧ ಇಲಾಖೆಗಳ ಗಣ್ಯರನ್ನು ಸೇರಿಸಿ ನಡೆಸಿದ ಆನ್ ಲೈನ್ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಮಾತನಾಡುತ್ತಿದ್ದರು. ಜಿಲ್ಲಾ ತುರ್ತು ನಿಗಮನ ಕೇಂದ್ರ ಹಾಗೂ ತಾಲೂಕು ತುರ್ತು ನಿಗಮನ ಕೇಂದ್ರವು 24 ಗಂಟೆ ಕಾರ್ಯಾಚರಿಸುವುದು. ಪೂಲ್ಲೂರ್ ಪೆರಿಯ, ಮಧೂರು ಪಂಚಾಯತುಗಳಲ್ಲಿರುವ ಸೈಕ್ಲೋನ್ ಶೆಡ್ ಗಳನ್ನೂ ಪುನರ್ ವಸತಿ ಕೇಂದ್ರಗಳಾಗಿ ಉಪಯೋಗಿಸಲಾಗುವುದು. ಪ್ರಕೃತಿ ದುರಂತಗಳು ಉಂಟಾದರೆ ಆ ಪ್ರದೇಶದ ಜನರನ್ನು ಸುರಕ್ಷಿತವಾಗಿಡಲು ಪುನರ್ ವಸತಿ ಕೇಂದ್ರಗಳಿಗಿರುವ ಸ್ಥಳಗಳಿಗೆ ಕರೆತರಲಾಗುವುದು  ಎಂಬುದಾಗಿ ಸ್ಥಳಿಯಾಡಳಿತ ಖಾತೆಯ ಸಹ ನಿರ್ದೇಶಕರು ತಿಳಿಸಿದ್ದಾರೆ.
           ಯಾವ ಸಮಯ / ಸಂದರ್ಭ ಗಳಲ್ಲಿಯೂ ದುರಂತ ನಿವಾರಣಾ ಕಾರ್ಯಗಳಿಗೆ ಅಗ್ನಿ ಶಾಮಕದಳ, ಪೆÇಲೀಸ್ ಮತ್ತು ಇತರ ಇಲಾಖೆಯ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.
         ಮುಂಜಾಗ್ರತೆಯನ್ನು ಪಾಲಿಸದೆ ಮೀನುಗಾರಿಕೆಗಾಗಿ ಕಡಲಿಗೆ ಇಳಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಹೇಳಿದರು. ಈ ರೀತಿಯ ಕಾರ್ಯಗಳನ್ನು ತಡೆಯಲು ಕರಾವಳಿ (ಕೋಸ್ಟಲ್) ಪೆÇಲೀಸರಿಗೆ ಸೂಚನೆಗಳನ್ನು ನೀಡಲಾಯಿತು. ಮಲೆನಾಡು ಪ್ರದೇಶಗಳಲ್ಲಿ ಮರ ಬೀಳುವ , ಗುಡ್ಡ ಕುಸಿತ ಉಂಟಾಗುವ ಸಾದ್ಯತೆ ಇರುವುದರಿಂದ ಜಾಗ್ರತೆವಹಿಸಬೇಕಾಗಿ ರೆವೆನ್ಯೂ ಪೆÇಲೀಸ್ ಸಲಹೆ ನೀಡಿದರು. ರಕ್ಷಣಾ ಕಾರ್ಯಗಳಿಗೆ ಉಪಯುಕ್ತ ವಾದ ಫೈಬರ್ ಬೋಟ್ ಗಳನ್ನು ಸಜ್ಜೀಕರಿಸಲಾಗಿದೆ. ಮಳೆಯ ತೀವ್ರತೆ ಹೆಚ್ಚಾದರೆ ಗಣಿಗಾರಿಕೆ ಕಾರ್ಯಗಳನ್ನು ನಿಲ್ಲಿಸಲು ಜಿಯೋಲೊಜಿಸ್ಟ್ ಸೂಚನೆ ನೀಡಿದರು. ಕೊಡಂ ಬೆಳ್ಳೂರು ಪಂಚಾಯತಿನಲ್ಲಿ ದಡಮೀರಿ ಹರಿಯುತ್ತಿದ್ದ ತೋಡಿನ ದಿಕ್ಕನ್ನು ಸರಿಯಾದ ದಿಕ್ಕಿನಲ್ಲಿ ಹರಿಯ ಬಿಡಲು ಅಗತ್ಯ ಕ್ರಮಗಳನ್ನು ಸ್ವೀಕರಿಸಲು ಮೈನರ್ ಇರಿಗೇಶನ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಲಹೆ ನೀಡಿದರು. ಆರೋಗ್ಯ ಸೇವೆಗಳಿಗಾಗಿ ಬ್ಲಾಕ್ ಮಟ್ಟದಲ್ಲಿ ಅಗತ್ಯ ವಿರುವ ಔಷಧಿಗಳು ಲಭಿಸುವಂತೆ ಆರೋಗ್ಯ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಡಿ ಎಂ ಒ (ಆರೋಗ್ಯ ಇಲಾಖೆ) ಎ ವಿ ರಾಮ್ ದಾಸ್ ಹೇಳಿದರು.
                ಕಳೆದ 5 ವರ್ಷಗಳ ಅನುಭವದ ಆಧಾರದಲ್ಲಿ ಪ್ರತಿಕೂಲ ಪರಿಸ್ಥಿತಿ ಯಲ್ಲಿ ಶಿಬಿರಗಳಿಗೆ ವಾಸ ಬದಲಾಯಿಸಲಿರುವ ಕುಟುಂಬಗಳ ಮತ್ತು ಕುಟುಂಬ ಸದಸ್ಯರ ವಿವರಗಳನ್ನು ತಯಾರಿಸಲಾಗಿದೆ. ರಕ್ಷಣಾ ಕಾರ್ಯದ ಸಂದರ್ಭದಲ್ಲಿ ಈ ಸ್ಥಳಗಳಲ್ಲಿರುವ ಎಲ್ಲರನ್ನು ವಾಸ ಬದಲಾಯಿಸಲು ತೀರ್ಮಾನಿಸಲಾಯಿತು. ಸ್ಥಳೀಯಾಡಳಿತ ಸಂಸ್ಥೆಗಳ ಅಧೀನದಲ್ಲಿರುವ ಗುಡ್ಡಗಳ ಸುರಕ್ಷಿತ ವಾದ ಕೇಂದ್ರಗಳಿಗೆ ವಾಸ ಬದಲಾಯಿಸಿ ಸುರಕ್ಷಿತವಾಗಿರಲು ಸೌರ್ಯಗಳನ್ನು ಒದಗಿಸಲು ಆಯಾ ಪಂಚಾಯತುಗಳ ಸೆಕ್ರೆಟರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ರಸ್ತೆ ಗಳಲ್ಲಿ ಸಾರಿಗೆ ಸಂಪರ್ಕ ಇಲ್ಲದಂತೆ ನೀರು ಕಟ್ಟಿ ನಿಂತಿದ್ದರೆ ಅದನ್ನು ನೀಗಿಸಲು ಕ್ರಮ ಕೈಗೊಳ್ಳ ಲಾಗಿದೆ. ತುರ್ತು ಪರಿಸ್ಥಿತಿಗಳನ್ನು  ಎದುರಿಸಲು ಜಾಗ್ರತೆಯಿಂದ ಕಾರ್ಯ ನಿರ್ವಹಿಸುವಂತೆ ತಹಶೀಲ್ದಾರ್ ಗೆ ಸೂಚನೆಗಳನ್ನು ನೀಡಲಾಯಿತು.
           ಸಭೆಯಲ್ಲಿ ಎ ಡಿ ಎಂ ಎ ಕೆ ರಮೆಂದ್ರನ್, ಉಪಜಿಲ್ಲಾಧಿಕಾರಿ ಡಿ ಆರ್ ಮೇಘ ಶ್ರೀ , ಅಡಿಷನಲ್ ಎಸ್ ಪಿ, ಪಿ ಕೆ ರಾಜು, ಆರ್ ಟಿ ಒ ಅತುಲ್ ಸ್ವಾಮಿನಾಥನ್, ಫಿಷರೀಸ್ ಡೆಪ್ಯೂಟಿ ಡೈರೆಕ್ಟರ್ ಪಿ ವಿ ಸತೀಶನ್ ಅಗ್ನಿ ಶಾಮಕ ದಳದ ಜಿಲ್ಲಾ ಆಫೀಸರ್ ಸಿ ಹರಿದಾಸನ್ ವಿವಿಧ ಇಲಾಖೆಯ ಗಣ್ಯರು ಹಾಜರಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries