ವಾಸಯೋಗ್ಯ ಗ್ರಹ ಸೂಪರ್​ಅರ್ಥ್ ಪತ್ತೆ!

 

             ಭೂಮಿಯನ್ನು ಹೋಲುವ ಗ್ರಹದ ಹುಡುಕಾಟದಲ್ಲಿ ತೊಡಗಿರುವ ಖಗೋಳ ಶಾಸ್ತ್ರಜ್ಞರು, ರಾಸ್ 508ಬಿ ಹೆಸರಿನ ಸೂಪರ್ ಅರ್ಥ್ ಪತ್ತೆ ಹಚ್ಚಿದ್ದಾರೆ. ಹವಾಯಿಯ ಸುಬಾರು ಸ್ಟ್ರಾಟೆಜಿಕ್ ಪ್ರೋಗ್ರಾಂನ ಖಗೋಳ ಶಾಸ್ತ್ರಜ್ಞರು ಭೂಮಿಯಿಂದ 37 ಬೆಳಕಿನ ವರ್ಷಗಳಷ್ಟು ದೂರದಲ್ಲಿ, ಕೆಂಪು ಕುಬ್ಜ ನಕ್ಷತ್ರದ ವಾಸಯೋಗ್ಯ ವಲಯದಲ್ಲಿ ಈ ಸೂಪರ್ ಅರ್ಥ್ ಪತ್ತೆ ಮಾಡಿದ್ದಾರೆ.

ನಮ್ಮ ನಕ್ಷತ್ರಪುಂಜದಲ್ಲಿನ ಮುಕ್ಕಾಲು ಭಾಗದಷ್ಟು ನಕ್ಷತ್ರಗಳನ್ನು ಕೆಂಪು ಕುಬ್ಜ ನಕ್ಷತ್ರಗಳು ಒಳಗೊಂಡಿವೆ.

                ನಾಲ್ಕು ಪಟ್ಟು ಹೆಚ್ಚು: ಈ ಎಕ್ಸೋಪ್ಲಾನೆಟ್ ಭೂಮಿಗಿಂದ ಸುಮಾರು ನಾಲ್ಕು ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಹೊಂದಿದೆ. ಇದರ ಒಂದೇ ಒಂದು ಸಮಸ್ಯೆಯೆಂದರೆ ಈ ಗ್ರಹವು ತನ್ನ ನಕ್ಷತ್ರದ ವಾಸಯೋಗ್ಯ ವಲಯದ ಒಳಗೆ ಮತ್ತು ಹೊರಗೆ ಸುತ್ತುತ್ತಿರುತ್ತದೆ. ಆದರೆ ಅದು ತನ್ನ ಮೇಲ್ಮೈಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಜೇಮ್್ಸ ವೆಬ್ ಬಾಹ್ಯಾಕಾಶ ದೂರದರ್ಶಕವು ತನ್ನ ಕಾರ್ಯಾಚರಣೆಯನ್ನು ಆರಂಭಿಸಿದಾಗ ಇದು ನಿರ್ಣಾ ಯಕ ಶೋಧವಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

           ವಾಸಯೋಗ್ಯ ವಲಯ: ಪರಿಭ್ರಮಿಸುವ ಗ್ರಹಗಳ ಮೇಲ್ಮೈಯಲ್ಲಿ ದ್ರವ ನೀರು ಇರಬಹುದಾದ ನಕ್ಷತ್ರದ ದೂರವನ್ನು ವಾಸಯೋಗ್ಯ ವಲಯ ಎಂದು ಕರೆಯಲಾಗುತ್ತದೆ. ವಾಸಯೋಗ್ಯ ವಲಯಗಳನ್ನು 'ಗೋಲ್ಡಿಲಾಕ್ಸ್ ವಲಯಗಳು' ಎಂದು ಸಹ ಕರೆಯಲಾಗುತ್ತದೆ. ಇವು ಹೆಚ್ಚು ಬಿಸಿಯಾಗಿರುವುದಿಲ್ಲ ಹಾಗೂ ತಂಪಾಗಿರುವುದಿಲ್ಲ. ಹಾಗಾಗಿ ಇಲ್ಲಿ ಜೀವಿಯು ವಾಸಿಸಲು ಸೂಕ್ತ ಪರಿಸರವನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

               ಕಕ್ಷೆ ಅವಧಿ 10.8 ದಿನ: ರಾಸ್ 508ಬಿ ಕೆಂಪು ಕುಬ್ಜ ನಕ್ಷತ್ರದ ಸುತ್ತ ತನ್ನ ಕಕ್ಷೆಯಲ್ಲಿ ವಾಸಯೋಗ್ಯ ವಲಯದ ಮೂಲಕ ಹಾದು ಹೋಗುತ್ತದೆ. ಈ ಗ್ರಹವು ದೀರ್ಘವೃತ್ತದ ಕಕ್ಷೆಯನ್ನು ಹೊಂದಿದ್ದು, ಇದರ ಕಕ್ಷೆಯ ಅವಧಿ ಕೇವಲ 10.8 ದಿನಗಳು ಎಂದು ನಾಸಾದ ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries