ಮ್ಯಾಗಿ, ಪೆನ್ಸಿಲ್‌ ಬೆಲೆ ಏರಿಕೆ: ಮೋದಿಗೆ ಬಾಲಕಿ ಪತ್ರ; ಕಾಂಗ್ರೆಸ್‌ ಟೀಕೆ

 

           ಲಖನೌ: ಒಂದನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಲೆ ಏರಿಕೆ ಬಗ್ಗೆ ಹೃದಯಸ್ಪರ್ಶಿಯವಾಗಿ ಪತ್ರ ಬರೆದಿದ್ದಾಳೆ.

                 ಬಾಲಕಿಯ ಪತ್ರವನ್ನು ಪ್ರಸ್ತಾಪ ಮಾಡಿರುವ ಕಾಂಗ್ರೆಸ್‌ ಮುಖಂಡರು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

                    ಚಿಕ್ಕ ಮಕ್ಕಳು ಕೂಡ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಬೆಲೆ ಏರಿಕೆ ಎಲ್ಲ ವರ್ಗದ ಜನರನ್ನು ಕಾಡುತ್ತಿದ್ದು ಸರ್ಕಾರ ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಎಡವಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

                     ಉತ್ತರಪ್ರದೇಶ ರಾಜ್ಯದ ಕನೌಜ್‌ ಮೂಲದ 1ನೇ ತರಗತಿ ವಿದ್ಯಾರ್ಥಿನಿ ಕೃತಿ ದುಬೆ ಮ್ಯಾಗಿ ಹಾಗೂ ಸೀಸದ ಕಡ್ಡಿ ಬೆಲೆ ಏರಿಕೆ ಬಗ್ಗೆ ಪತ್ರ ಬರೆದಿದ್ದಾಳೆ. ಈ ಪತ್ರ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದೆ. ಆಯರೊನಿ ಹ್ಯಾರಿ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

                       ನನ್ನ ಹೆಸರು ಕೃತಿ ದುಬೆ. ನಾನು 1ನೇ ತರಗತಿಯಲ್ಲಿ ಓದುತ್ತಿದ್ದೇನೆ. ಕೆಲವು ವಸ್ತುಗಳ ಬೆಲೆಗಳ ಬೆಲೆ ಏರಿಕೆಯಾಗಿದೆ. ಪೆನ್ಸಿಲ್ ಮತ್ತು ಎರೇಸರ್ ಸಹ ದುಬಾರಿಯಾಗಿವೆ. ಇನ್ನು ಮ್ಯಾಗಿಯ ಬೆಲೆಯನ್ನು ಸಹ ಹೆಚ್ಚಿಸಲಾಗಿದೆ. ಮನೆಯಲ್ಲಿ ಪೆನ್ಸಿಲ್ ಕೇಳಿದರೆ ತಾಯಿ ನನ್ನನ್ನು ಹೊಡೆಯುತ್ತಾರೆ. ನಾನೇನು ಮಾಡಲಿ? ಶಾಲೆಯಲ್ಲಿ ಸಹಪಾಠಿಗಳು ಕೂಡ ನನ್ನ ಪೆನ್ಸಿಲ್ ಕದಿಯುತ್ತಾರೆ ಏನು ಮಾಡುವುದು ಎಂದು ಗೊತ್ತಾಗುತ್ತಿಲ್ಲ ಎಂದು ಕೃತಿ ಪತ್ರ ಬರೆದಿದ್ದಾಳೆ.

         ಕೃತಿ ದುಬೆ ಹಿಂದಿಯಲ್ಲಿ ಪತ್ರಬರೆದಿದ್ದಾಳೆ. ಅದನ್ನು ಮಾಧ್ಯಮಗಳು ಇಂಗ್ಲಿಷ್‌ಗೆ ಭಾಷಾಂತರ ಮಾಡಿ ಪ್ರಕಟಿಸಿವೆ. ಈ ನಡುವೆ ಮ್ಯಾಗಿಯ 70 ಗ್ರಾಂ ಪೌಚ್‌ ಬೆಲೆ ₹ 14, 32 ಗ್ರಾಂ ಪಾಕೇಟ್‌ ಬೆಲೆ ₹ 7ಗೆ ಏರಿಕೆಯಾಗಿದೆ. ಇನ್ನು ಸೀಸದ ಕಡ್ಡಿಗಳ ಒಂದು ಪ್ಯಾಕೇಟ್‌ ₹ 50ಕ್ಕೆ ಏರಿಕೆಯಾಗಿದೆ.‌


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries