ಥೈರಾಯ್ಡ್‌ ಸಮಸ್ಯೆ ಇರುವವರಿಗೆ ಈ ಆಹಾರಗಳು ಒಳ್ಳೆಯದು

 ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್‌ ಒಂದು ಸಾಮಾನ್ಯ ಸಮಸ್ಯೆವೆಂಬಂತೆ ಬಹುತೇಕ ಜನರಲ್ಲಿ ಕಂಡು ಬರುತ್ತಿದೆ. ಈ ಸಮಸ್ಯೆ 20ರ ಹರೆಯದವರಲ್ಲೂ ಕಂಡು ಬರುತ್ತಿದೆ. ಥೈರಾಯ್ಡ್ ಹಾರ್ಮೋನ್ ಸಮಸ್ಯೆ ಪುರುಷ ಹಾಗೂ ಮಹಿಳೆಯರಲ್ಲಿ ಕಂಡು ಬರುವುದಾದರೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

ಥೈರಾಯ್ಡ್‌ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದಾಗ ಥೈರಾಯ್ಡ್‌ ಸಮಸ್ಯೆ ಉಂಟಾಗುವುದು. ಥೈರಾಯ್ಡ್‌ ಹಾರ್ಮೋನ್‌ಗಳು ಅತ್ಯಧಿಕ ಉತ್ಪತ್ತಿಯಾದರೆ ಹೈಪರ್‌ ಥೈರಾಯ್ಡ್‌, ಥೈರಾಯ್ಡ್‌ ಹಾರ್ಮೋನ್‌ಗಳು ಅತಿ ಕಡಿಮೆ ಉಂಟಾದರೆ ಹೈಪೋ ಥೈರಾಯ್ಡ್ ಉಂಟಾಗುವುದು.

ಥೈರಾಯ್ಡ್‌ ಸಮಸ್ಯೆ ಇರುವವರು ಔಷಧ ತೆಗೆದುಕೊಳ್ಳುವುದರ ಜೊತೆಗೆ ಆಹಾರಕ್ರಮದ ಕಡೆ ಗಮನ ನೀಡಿದರೆ ಥೈರಾಯ್ಡ್‌ ಹಾರ್ಮೋನ್‌ಗಳು ಸಮತೋಲನದಲ್ಲಿರುತ್ತದೆ. ಥೈರಾಯ್ಡ್‌ ಸಮಸ್ಯೆ ಇರುವವರಿಗೆ ಈ ಆಹಾರಗಳು ತುಂಬಾ ಒಳ್ಳೆಯದು.


ಕಾಡ್‌ ಫಿಶ್‌

ಮೀನಿನಲ್ಲಿ ಅಯೋಡಿಯನ್ ಅಂಶ ತುಂಬಾ ಚೆನ್ನಾಗಿರುತ್ತದೆ, ನಿಮ್ಮ ದೇಹಕ್ಕೆ ಪ್ರತಿನಿತ್ಯ ಅಗ್ಯತವಿರುವ ಅಯೋಡಿಯನ್ ಕಾಡ್‌ ಫಿಶ್‌ ಆಯಿಲ್‌ ಸಿಗುವುದು. ಮೀನಿನ ಆಹಾರ ಸೇವನೆ ನಿಮಗೆ ಆರೋಗ್ಯಕರವಾಗಿದೆ.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳನ್ನು ಸೇವಿಸುವುದು ತುಂಬಾ ಒಳ್ಳೆಯದು. ಬೆಳಗ್ಗೆ ಎದ್ದ ಬಳಿಕ ನಿಮ್ಮ ದಿನವನ್ನು ಒಂದು ಕಪ್ ಯೋಗರ್ಟ್‌ನೊಂದಿಗೆ ಸ್ಟಾರ್ಟ್‌ ಮಾಡಿದರೆ ತುಂಬಾ ಒಳ್ಳೆಯದು.

ಸೀಗಡಿ

ಸೀಗಡಿ ಮೀನು ಕೂಡ ಥೈರಾಯ್ಡ್‌ ಸಮಸ್ಯೆ ಇರುವವರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ಸೆಲೆನಿಯಮ್, ರಂಜಕ ಮತ್ತು ವಿಟಮಿನ್‌ ಬಿ 12 ಪೋಷಕಾಂಶಗಳಿವೆ.

ಮೊಟ್ಟೆ

ಪ್ರತಿದಿನ ಒಂದು ಮೊಟ್ಟೆ ತಿನ್ನುವುದು ಒಳ್ಳೆಯದು. ಮೊಟ್ಟೆಯ ಬಿಳಿ ಮಾತ್ರ ಸೇವನೆ ಮಾಡಿದರೆ ಪ್ರಯೋಜನವಿಲ್ಲ. ಮೊಟ್ಟೆಯ ಹಳದಿ ಸಹಿತ ತಿನ್ನಿ.

ಅಯೋಡಿಯನ್‌ಯುಕ್ತ ಉಪ್ಪು

ನೀವು ಅಡುಗೆಗೆ ಅಯೋಡಿಯನ್‌ಯುಕ್ತ ಉಪ್ಪು ಬಳಸಿ. ಅಯೋಡಿಯನ್ ಇರುವ ಕಲ್ಲುಪ್ಪು ಅಥವಾ ಪುಡಿ ಉಪ್ಪು ಬಳಸಿ.

ಪ್ರೂನ್ಸ್ (ಒಣ ಪ್ಲಮ್)

ಪ್ರೂನ್ಸ್‌ನಲ್ಲಿ ನಾರಿನಂಶ ತುಂಬಾ ಚೆನ್ನಾಗಿದೆ. ದಿನಾ ಸ್ವಲ್ಪ ಪ್ರೂನ್ಸ್‌ ತಿಂದರೆ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ, ಮಲಬದ್ಧತೆ ಸಮಸ್ಯೆ ಇರಲ್ಲ. ಇದರಲ್ಲಿ ಕಬ್ಬಿಣದಂಶ, ವಿಟಮನ್ ಕೆ, ಪೊಟಾಷ್ಯಿಯಂ ಅಂಶವಿದೆ.

ಲಿವರ್‌
 

ಲಿವರ್‌

ಥೈರಾಯ್ಡ್‌ ಸಮಸ್ಯೆ ಇರುವವರು ಲಿವರ್‌ ಸೇವನೆ ಮಾಡುವುದು ಒಳ್ಳೆಯದು. ಮಾಂಸದಲ್ಲಿ ಇರುವುದಕ್ಕಿಂತ ಅಧಿಕ ಪೋಷಕಾಂಶ ಲಿವರ್‌ನಲ್ಲಿರುತ್ತದೆ. ಲಿವರ್‌ನಲ್ಲಿ ವಿಟಮಿನ್‌ ಬಿ, ಬಿ12, ಫೋಲೆಟ್‌, ಖನಿಜಾಂಶಗಳು, ಕಬ್ಬಿಣದಂಶ,ಸತು ಇವುಗಳು ಅಧಿಕವಿರುತ್ತದೆ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು ಕೂಡ ಥೈರಾಯ್ಡ್‌ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು. ಬಾಳೆಹಣ್ಣು ಕೂಡ ಥೈರಾಯ್ಡ್‌ ಸಮಸ್ಯೆ ಇರುವವರಿಗೆ ಒಳ್ಳೆಯ ಆಹಾರವಾಗಿದೆ.

ಯಾವ ಆಹಾರಗಳು ಒಳ್ಳೆಯದಲ್ಲ

* ಸಂಸ್ಕರಿಸಿದ ಆಹಾರ ಪದಾರ್ಥಗಳು

* ಸೋಯಾ ಗೋಧಿ

* ಸಕ್ಕರೆಯಂಶ ಇರುವ ಆಹಾರ

 

 

 

 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries