HEALTH TIPS

ಪ್ರಧಾನಿ ಕರೆಗೆ ಓಗೊಟ್ಟ ಮಲಯಾಳ ತಾರೆಯರು: ತ್ರಿವರ್ಣ ಧ್ವಜದ ಡಿಪಿ ಹಾಕಿದ ಮಮ್ಮುಟ್ಟಿ, ಮೋಹನ್ ಲಾಲ್, ಸುರೇಶ್ ಗೋಪಿ, ಉಣ್ಣಿಮುಕುಂದನ್ ಮತ್ತಿತರರು


                 ತಿರುವನಂತಪುರ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಸಾಮಾಜಿಕ ಜಾಲತಾಣಗಳ ಖಾತೆಗಳ ಡಿಪಿಗಳನ್ನು ತ್ರಿವರ್ಣ ಧ್ವಜವಾಗಿ ಬದಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಮಲಯಾಳಂ ಚಿತ್ರರಂಗದ ತಾರೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ.
           ಸ್ವತಃ ಪ್ರಧಾನಿಯೇ ತಮ್ಮ ಕೈಗಾರಿಕಾ ಸಾಮಾಜಿಕ ಮಾಧ್ಯಮ ಖಾತೆಗಳ ಮುಖಪುಟ ಚಿತ್ರವನ್ನು ತ್ರಿವರ್ಣ ಧ್ವಜವನ್ನಾಗಿಸಿ ಮಾದರಿಯಾಗಿದ್ದರು. ಬಳಿಕ ದೇಶಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ತ್ರಿವರ್ಣ ಧ್ವಜವನ್ನು ತಮ್ಮ ಮುಖಪುಟವಾಗಿ ಲಕ್ಷಾಂತರ ಜನರು ಬಳಸಿದರು. ಮಲಯಾಳಂ ಚಿತ್ರರಂಗದ ತಾರೆಯರು ಕೂಡ ಪ್ರಧಾನಿ ಕರೆಯನ್ನು ಒಪ್ಪಿಕೊಂಡಿದ್ದಾರೆ.
           ಮಮ್ಮುಟ್ಟಿ, ಮೋಹನ್ ಲಾಲ್, ಸುರೇಶ್ ಗೋಪಿ, ಉಣ್ಣಿಮುಕುಂದನ್, ಗಿನ್ನೆಸ್ ಪಕ್ರು, ವಿವೇಕ್ ಗೋಪನ್, ನಿರ್ದೇಶಕರಾದ ವಿಜಿ ತಂಬಿ, ರಾಮಸಿಂಹನ್ ಅಬೂಬಕರ್, ಗಾಯಕರಾದ ಕೆ ಎಸ್ ಚಿತ್ರಾ, ಅನೂಪ್ ಶಂಕರ್ ಮತ್ತು ವಿಜಯ್ ಮಾಧವ್ ಅವರು ಪ್ರಧಾನಿ ಕರೆಯನ್ನು ಬೆಂಬಲಿಸಿ ಡಿಪಿ ಬದಲಿಸಿದರು. ರಾಷ್ಟ್ರಧ್ವಜದ ಶಿಲ್ಪಿ ಪಿಂಗಳಿ ವೆಂಕಯ್ಯ ಅವರ ಜನ್ಮದಿನವಾದ ಆಗಸ್ಟ್ 2 ರಿಂದ ಆಗಸ್ಟ್ 15 ರವರೆಗೆ ಪೆÇ್ರಫೈಲ್ ಚಿತ್ರ ತ್ರಿವರ್ಣ ಧ್ವಜವಾಗಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು.
             ಹರ್ಘರ್ ತಿರಂಗಾವನ್ನು ದೊಡ್ಡ ಆಂದೋಲನವನ್ನಾಗಿ ಮಾಡುವ ಅಭಿಯಾನದ ಭಾಗವಾಗಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದರು. ಆಗಸ್ಟ್ 13ರಿಂದ 15ರವರೆಗೆ ಅಭಿಯಾನ ನಡೆಯಲಿದೆ. 'ಹರ್ ಘರ್ ತಿರಂಗ' ಎಂಬುದು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಂಸ್ಕøತಿ ಸಚಿವಾಲಯ ಆರಂಭಿಸಿರುವ ಅಭಿಯಾನವಾಗಿದೆ. ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವುದು ಅಭಿಯಾನದ ಉದ್ದೇಶ. ದೇಶಾದ್ಯಂತ 20 ಕೋಟಿಗೂ ಹೆಚ್ಚು ಮನೆಗಳಲ್ಲಿ ಧ್ವಜಾರೋಹಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries