ಕೂದಲುದುರುವಿಕೆ ತಡೆಯುತ್ತೆ ತೆಂಗಿನೆಣ್ಣೆಯ ಈ ಹೇರ್ ಮಾಸ್ಕ್‌ಗಳು!

 ನಮ್ಮಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಾಮಾನ್ಯ ಕೂದಲ ಸಮಸ್ಯೆಯಂದ್ರೆ "ಕೂದಲು ಉದುರುವಿಕೆ". ಇದಕ್ಕೆ ಮಾಲಿನ್ಯ, ಒತ್ತಡ ಸೇರಿದಂತೆ ನಾನಾ ಕಾರಣಗಳಿರಬಹುದು. ಆದರೆ ಹೆಚ್ಚಿನವರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ನಾವಿಂದು ಹೇಳುತ್ತಿರುವ ತೆಂಗಿನೆಣ್ಣೆಯಿಂದ ತಯಾರಿಸಬಹುದಾಂತಹ ಹೇರ್ ಪ್ಯಾಕ್‌ಗಳು ಸಹಾಯಕ್ಕೆ ಬರುತ್ತವೆ. ಅಂದಹಾಗೇ ತೆಂಗಿನೆಣ್ಣೆಯು ಉತ್ತಮ ಪ್ರಮಾಣದ ಲಾರಿಕ್ ಆಮ್ಲವನ್ನ ಹೊಂದಿದ್ದು, ಇದು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ಯಾಕೆ ತಡ, ಬನ್ನಿ ಕೂದಲುದುರುವಿಕೆಗೆ ಪರಿಹಾರ ನೀಡುವ ಹೇರ್‌ಪ್ಯಾಕ್‌ಗಳ ಬಗ್ಗೆ ಇಲ್ಲಿ ನೋಡೋಣ.

ಕೂದಲುದುರುವಿಕೆ ತಡೆಯಲು ತೆಂಗಿನೆಣ್ಣೆಯ ವಿವಿಧ ಹೇರ್ ಮಾಸ್ಕ್‌ಗಳನ್ನು ಈ ಕೆಳಗೆ ನೀಡಲಾಗಿದೆ:

1) ತೆಂಗಿನೆಣ್ಣೆ ಮತ್ತು ಜೇನುತುಪ್ಪ ಹೇರ್ ಮಾಸ್ಕ್:

ಜೇನುತುಪ್ಪವು ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ನಮ್ಮ ಕೂದಲಿಗೆ ಹೊಳಪನ್ನು ಸೇರಿಸಲು ಸಹಾಯ ಮಾಡುತ್ತದೆ. ಈ ಸುಲಭವಾದ ಹೇರ್ ಮಾಸ್ಕ್ ಕೂದಲಿನ ಆರೋಗ್ಯಕ್ಕೆ ಅದ್ಭುತವಾಗಿದೆ.ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ... ಒಂದು ಬಟ್ಟಲಿನಲ್ಲಿ 1 ಚಮಚ ಬಿಸಿ ತೆಂಗಿನ ಎಣ್ಣೆ ಮತ್ತು 1 ಚಮಚ ನೈಸರ್ಗಿಕ ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಬೆರೆಸಿ. ಮುಂದೆ ಈ ಹೇರ್ ಮಾಸ್ಕ್ ಅನ್ನು ನಿಮ್ಮ ನೆತ್ತಿಯ ಮೇಲೆ ಮತ್ತು ನಿಮ್ಮ ಕೂದಲಿನ ಉದ್ದಕ್ಕೆ ಹಚ್ಚಿ, ಸುಮಾರು 20 ನಿಮಿಷಗಳ ಕಾಲ ಬಿಡಿ. ಉತ್ತಮ ಫಲಿತಾಂಶಕ್ಕಾಗಿ ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ.

2) ತೆಂಗಿನೆಣ್ಣೆ- ನಿಂಬೆ ಹೇರ್ ಮಾಸ್ಕ್:

ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಕಾಲಜನ್ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಜೊತೆಗೆಮ ನಿಂಬೆಯ ಆಂಟಿಫಂಗಲ್ ಗುಣವು ಎಣ್ಣೆಯುಕ್ತ ಕೂದಲಿನ ಜಿಡ್ಡಿನಾಂಶ ಕಡಿಮೆ ಮಾಡುವ ಮಾಡುವ ಮೂಲಕ, ನೆತ್ತಿಯನ್ನು ಸ್ವಚ್ಛವಾಗಿಡಲು ಸಹಕಾರಿ. ಈ ಮಾಸ್ಕ್ ತಯಾರಿಸಲು, ಒಂದು ಬೌಲ್‌ಗೆ ಒಂದು ಚಮಚ ತೆಂಗಿನ ಎಣ್ಣೆ ಮತ್ತು ಒಂದು ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಣ ಮಾಡಿ. ಒಣ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ, 15 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ದಿನನಿತ್ಯದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

3) ತೆಂಗಿನೆಣ್ಣೆ ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್:

ಕೂದಲಿನ ಮಾಸ್ಕ್ ತಯಾರಿಸಲು ಮತ್ತೊಂದು ಸುಲಭವಾದ ವಿಧಾನವೆಂದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣು. ಬಾಳೆಹಣ್ಣುಗಳು ನಮ್ಮ ಕೂದಲನ್ನು ಮೃದುವಾಗಿಸಿ, ನೈಸರ್ಗಿಕ ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಳ್ಳುತ್ತದೆ. ಜೊತೆಗೆ ಸೀಳು ತುದಿಗಳು ಮತ್ತು ಒಡೆಯುವಿಕೆಯನ್ನು ತಡೆಯುತ್ತದೆ. ಅರ್ಧ ಬಾಳೆಹಣ್ಣು ಮತ್ತು 1 ಚಮಚ ತೆಂಗಿನ ಎಣ್ಣೆಯನ್ನು ಬ್ಲೆಂಡರ್ನಲ್ಲಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಯವಾದ ಪೇಸ್ಟ್ ರೂಪುಗೊಂಡ ನಂತರ, ಅದನ್ನು ನೆತ್ತಿಗೆ ಹಚ್ಚಿ ಮಸಾಜ್ ಮಾಡಿ. 20 ನಿಮಿಷಗಳ ಕಾಲ ಬಿಡಿ ಬಿಟ್ಟು ಶಾಂಪೂ ಬಳಸಿ ತೊಳೆಯಿರಿ.

4) ತೆಂಗಿನೆಣ್ಣೆ ಮತ್ತು ಮೊಟ್ಟೆಯ ಹಳದಿಯ ಹೇರ್ ಮಾಸ್ಕ್:

ನಿಮ್ಮ ಕೂದಲು ತೆಳುವಾಗುತ್ತಿದ್ದರೆ, ಇದು ನಿಮಗಾಗಿ..! ಮೊಟ್ಟೆಯ ಹಳದಿ ಲೋಳೆಯು ವಿಟಮಿನ್‌ಗಳಲ್ಲಿ ಸಮೃದ್ಧವಾಗಿದ್ದು, ಇದು ಹಾನಿಗೊಳಗಾದ ಎಳೆಗಳನ್ನು ಸರಿಪಡಿಸುತ್ತದೆ ಜೊತೆಗೆ ಇನ್ನಷ್ಟು ಕೂದಲು ಹಾನಿಯಾಗದಂತೆ ತಡೆಯುತ್ತದೆ. ಈ ಹೇರ್ ಮಾಸ್ಕ್ ತಯಾರಿಸಲು, ಒಂದು ಬಟ್ಟಲಿನಲ್ಲಿ ಒಂದು ಮೊಟ್ಟೆಯ ಹಳದಿ ಲೋಳೆಯನ್ನು ಸೇರಿಸಿ ಮತ್ತು ಅದಕ್ಕೆ 2 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ, ಸರಿಯಾಗಿ ಮಿಶ್ರಣ ಮಾಡಿ, ಒದ್ದೆಯಾದ ಕೂದಲಿಗೆ ಹಚ್ಚಿ. ಈ ಮಾಸ್ಕ್ ತೊಟ್ಟಿಕ್ಕುವುದನ್ನು ತಪ್ಪಿಸಲು ಶವರ್ ಕ್ಯಾಪ್ ಅನ್ನು ಬಳಸುವುದು ಒಳ್ಳೆಯದು. ಇದನ್ನು 20 ನಿಮಿಷಗಳ ಕಾಲ ಬಿಡಿ ಮತ್ತು ತಂಪಾದ ನೀರಿನಿಂದ ತೊಳೆಯಿರಿ.

5) ನೆಲ್ಲಿ, ಶೀಗೆಕಾಯಿ ಮತ್ತು ತೆಂಗಿನೆಣ್ಣೆ ಹೇರ್ ಮಾಸ್ಕ್:

ನೆಲ್ಲಿಕಾಯಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು, ಇದು ಆರೋಗ್ಯಕರ ನೆತ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಶೀಗೆಕಾಯಿ ಪುಡಿ ನಮ್ಮ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಈ ಹೇರ್ ಪ್ಯಾಕ್ ತಯಾರಿಸಲು, ಒಂದು ಚಮಚ ನೆಲ್ಲಿಕಾಯಿ ಜ್ಯೂಸ್ ಮತ್ತು ಪುಡಿಯನ್ನು 2 ಟೇಬಲ್ಸ್ಪೂನ್ ತೆಂಗಿನ ಎಣ್ಣೆಗೆ ಮಿಶ್ರಣ ಮಾಡಿ. ಎಲ್ಲವನ್ನೂ ಮಿಶ್ರಣ ಮಾಡಿ, ಇದನ್ನ ಕುದಿಸಿ. ಜರಡಿ ಹಿಡಿದು, ತಣ್ಣಗಾಗಲು ಬಿಡಿ.ತದನಂತರ ಇದನ್ನು ಕೂದಲಿಗೆ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಡಿ. ಮರುದಿನ ಬೆಳಿಗ್ಗೆ ನಿಮ್ಮ ಸಾಮಾನ್ಯ ಶಾಂಪೂ ಬಳಸಿ ತೊಳೆಯಿರಿ.


 

 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries