ಹಣ ಅಕ್ರಮ ವರ್ಗಾವಣೆ: ಸಂಜಯ್ ರಾವುತ್ ಪತ್ನಿ ವರ್ಷಾ ಇ.ಡಿ ವಿಚಾರಣೆಗೆ ಹಾಜರು

 

     ಮುಂಬೈ: ಪತ್ರ ಚಾಲ್ ಭೂಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ಪತ್ನಿ, ವರ್ಷಾ ರಾವುತ್ ಅವರು ಶನಿವಾರ ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿಗೆ ವಿಚಾರಣೆಗೆ ಹಾಜರಾದರು.

                 ವರ್ಷಾ ರಾವುತ್ ಬ್ಯಾಂಕ್ ಖಾತೆಗಳಿಂದ ಹಣದ ವಹಿವಾಟು ನಡೆದಿರುವ ಬಗ್ಗೆ ಮಾಹಿತಿ ಪತ್ತೆಯಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್ ನೀಡಿತ್ತು.

             ಪತ್ರಾ ಚಾಲ್‌ ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎಂಬ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ಸಂಜಯ್ ರಾವುತ್‌ ಅವರನ್ನು ಆಗಸ್ಟ್ 8ರ ವರೆಗೆ ಇ.ಡಿ ಕಸ್ಟಡಿಗೆ ಒಪ್ಪಿಸಲಾಗಿದೆ.


                  ಮುಂಬೈನ ಹೌಸಿಂಗ್ ಡೆವಲಪ್‌ಮೆಂಟ್ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದಿಂದ ಸಂಜಯ ರಾವುತ್ ಹಾಗೂ ಅವರ ಕುಟುಂಬಕ್ಕೆ ₹1.06 ಕೋಟಿ ಸಿಕ್ಕಿದೆ ಎಂದು ಇ.ಡಿ ಆರೋಪಿಸಿತ್ತು. ಸಂಜಯ ರಾವುತ್ ಅವರ ಮನೆಯಲ್ಲಿ ಕಳೆದ ಭಾನುವಾರ ಶೋಧ ನಡೆಸಿದ್ದ ಇ.ಡಿ ಅಧಿಕಾರಿಗಳು ದಾಖಲೆ ಇಲ್ಲದ ₹11.5 ಲಕ್ಷ ನಗದು ದೊರೆತಿದೆ ಎಂದು ಹೇಳಿದ್ದರು.

Maharashtra | Shiv Sena MP Sanjay Raut's wife, Varsha Raut arrives at the ED office in Mumbai. She has been summoned by the agency in connection with the Patra Chawl land case.
Image
Image
Image
Image
248
Reply
Copy link

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries