HEALTH TIPS

ಜನರ ಭಾವನೆಗಳನ್ನು ಗಮನದಲ್ಲಿಟ್ಟು ಶ್ರೀರಾಮ್ ವೆಂಕಟರಾಮನ್ ಅವರನ್ನು ಬದಲಾಯಿಸಲಾಯಿತು; ಅಸಹಿಷ್ಣುತೆ ಅಲ್ಲವೆಂದು ಮುಲಾಮು ಹಚ್ಚಿದ ಕೊಡಿಯೇರಿ ಬಾಲಕೃಷ್ಣನ್


                ತಿರುವನಂತಪುರ: ಶ್ರೀರಾಮ್ ವೆಂಕಟರಾಮನ್ ಅವರನ್ನು ಜಿಲ್ಲಾಧಿಕಾರಿ ಹುದ್ದೆಯಿಂದ ಕೆಳಗಿಳಿಸಿರುವುದನ್ನು ಕೊಡಿಯೇರಿ ಬಾಲಕೃಷ್ಣನ್ ಸಮರ್ಥಿಸಿಕೊಂಡಿದ್ದಾರೆ.
             ನಿರ್ಧಾರದಿಂದ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದನ್ನು ಎಲ್‍ಡಿಎಫ್ ಅಥವಾ ಮುಖ್ಯಮಂತ್ರಿ ಸಹಿಸುವುದಿಲ್ಲ. ಕಾನೂನಿನ ಕಾರಣದಿಂದ ಶ್ರೀರಾಮ್ ವೆಂಕಟರಾಮನ್ ಅವರನ್ನು ಮತ್ತೆ ಸೇವೆಗೆ ಸೇರಿಸಲಾಯಿತು. ನಾಗರಿಕ ಸಮಾಜದ ವಿರೋಧವನ್ನು ಸರ್ಕಾರ ಗಮನಕ್ಕೆ ಜವಾಬ್ದಾರಿಯುತವಾಗಿ ತೆಗೆದುಕೊಂಡಿತು. ರಾಜಕೀಯ ದುರುದ್ದೇಶದ ಮುಂದೆ ಸರಕಾರ ಮಂಡಿಯೂರುವುದಿಲ್ಲ ಎಂದು ಕೊಡಿಯೇರಿ ಹೇಳಿದರು. ಪಕ್ಷದ ಮುಖವಾಣಿಯಲ್ಲಿ ಬರೆದ ಲೇಖನದಲ್ಲಿ ಕೊಡಿಯೇರಿ ಪ್ರತಿಕ್ರಿಯೆ ನೀಡಿದ್ದಾರೆ.
                ಶ್ರೀರಾಮ್ ವೆಂಕಟರಾಮನ್ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಿಸಿದ್ದನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಶ್ರೀರಾಮನ್ ನೇಮಕದ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಸ್ಲಿಂ ಜಮಾತ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಿಪಿಎಂ ಜೊತೆ ನಿಕಟ ಸಂಬಂಧ ಹೊಂದಿದ್ದ ಎಪಿ ಸುನ್ನಿ ಪಂಗಡ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು.  ಮಲಬಾರ್‍ನ ಎಡಪಕ್ಷಗಳೊಂದಿಗಿರುವ  ಪಿ.ವಿ.ಅನ್ವರ್ ಮತ್ತು ಕಾರಟ್ ರಜಾಕ್ ಕೂಡ ನೇಮಕದ ವಿರುದ್ಧ ಹರಿಹಾಯ್ದರು.
            ಇದರೊಂದಿಗೆ, ಶ್ರೀರಾಮ್ ವೆಂಕಟರಾಮನ್ ಅವರನ್ನು ಅಲಪ್ಪುಳ ಕಲೆಕ್ಟರ್ ಸ್ಥಾನದಿಂದ ಹಿಂಪಡೆಯಲು ಸರ್ಕಾರ ನಿರ್ಧರಿಸಿತು.  ನೂತನ ಜಿಲ್ಲಾಧಿಕಾರಿಯಾಗಿ ಶ್ರೀರಾಮ್ ಬದಲಿಗೆ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ನಿರ್ದೇಶಕರಾಗಿದ್ದ ವಿ.ಆರ್.ಕೃಷ್ಣ ತೇಜ ಅವರು ಅಧಿಕಾರ ಸ್ವೀಕರಿಸಿದರು. ಕೃಷ್ಣ ತೇಜ್ ಐಎಎಸ್ ಅವರು ಪ್ರವಾಹದ ಸಂದರ್ಭದಲ್ಲಿ ಅಲಪ್ಪುಳದ ಸಬ್ ಕಲೆಕ್ಟರ್ ಆಗಿ ಕೆಲಸ ಮಾಡಿದ ವ್ಯಕ್ತಿಯಾಗಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries