HEALTH TIPS

ಎಂಥ ಗಂಡ ಬೇಕು? ಮದುವೆ ಸೈಟ್​ಗಳಲ್ಲಿ ಸರ್ಚ್​ ಮಾಡೋದೇನು? ಐಎಎಸ್​, ಐಪಿಎಸ್ಸೂ ಅಲ್ಲ, ಡಾಕ್ಟರ್​, ಇಂಜಿನಿಯರೂ ಅಲ್ಲ..

 

        ನವದೆಹಲಿ: ನಿನಗೆಂಥ ಗಂಡ ಬೇಕಮ್ಮಾ ಅಂತ ಇಂದಿನ ಯುವತಿಯರನ್ನು ಪ್ರಶ್ನಿಸಿದ್ರೆ, ಗುಣವಂತ, ಶೀಲವಂತ, ರೂಪವಂತ… ಇವುಗಳಿಗಿಂದಲೂ ಮೊದಲು ಬರೋದು ಡಾಕ್ಟರ್​, ಇಂಜಿನಿಯರ್​ ಅಂತನೋ ಇಲ್ಲವೇ ಐಎಎಸ್​, ಐಪಿಸ್​ ಎಂದೋ. ಒಟ್ಟಿನಲ್ಲಿ ಶ್ರೀಮಂತನಾಗಿರಬೇಕು ಎನ್ನುವವರೇ ಹೆಚ್ಚಾಗಿದ್ದರೆ, ಬೆರಳೆಣಿಕೆ ಮಂದಿ ಮಾತ್ರ ಉಳಿದ ಉದ್ಯೋಗದ ವರನ ಕನಸು ಕಾಣುತ್ತಾರೆ ಎಂಬ ಮಾತಿದೆ.

                ಆದರೆ ಈಗ ಟ್ರೆಂಡ್​ ಹಾಗಿಲ್ವಂತೆ. ಇಂದಿನ ಹುಡುಗಿಯರು ಮ್ಯಾಟ್ರಿಮೋನಿ ಸೈಟ್​ಗಳಲ್ಲಿ ಸರ್ಚ್​ ಮಾಡ್ತಿರೋದೇ ಬೇರೆಯಂತೆ.

               ಈ ಮಾಹಿತಿ ನೀಡಿದ್ದು, ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್. ಇವರು ಹೇಳಿರುವ ಪ್ರಕಾರ, ವೈವಾಹಿಕ ಮಾರುಕಟ್ಟೆಯಲ್ಲಿ, ನಾಗರಿಕ ಸೇವಕ ಅಥವಾ ಉನ್ನತ ಸಂಸ್ಥೆಯಿಂದ ಪದವೀಧರರಾಗಿರುವವರಿಗೆ ಹೆಚ್ಚಿನ ಮಾನ್ಯತೆಯಿರುತ್ತದೆ. ಆದರೆ ಅದು ಇನ್ನು ಮುಂದೆ ಹಾಗಲ್ಲ. ಮ್ಯಾಟ್ರಿಮೋನಿ ಸೈಟ್​ ಅದರಲ್ಲಿಯೂ ಹೆಚ್ಚಾಗಿ ಶಾದಿ ಡಾಟ್ ಕಾಮ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕೀವರ್ಡ್ ಸ್ಟಾರ್ಟ್‌ಅಪ್ ಉದ್ಯೋಗಿ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರು ಎಂಬುದಂತೆ!

               ಡಿಜಿಟಲ್ ಇಂಡಿಯಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ವೇಳೆ ಅವರು ಈ ವಿಷಯ ತಿಳಿಸಿದ್ದಾರೆ. ವೈವಾಹಿಕ ಸೈಟ್​ಗಳಲ್ಲಿ ಹೆಚ್ಚು ಹುಡುಕಲಾದ ಕೀವರ್ಡ್‌ಗಳ ಪಟ್ಟಿಯಲ್ಲಿ ಸ್ಟಾರ್ಟ್‌ಅಪ್ ಉದ್ಯೋಗಿ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರು ಪದಗಳು ಹೆಚ್ಚು ಅಗ್ರಸ್ಥಾನದಲ್ಲಿವೆ ಎಂದಿದ್ದಾರೆ ಸಚಿವರು. ಆದ್ದರಿಂದ ಹೆಚ್ಚು ಹೆಚ್ಚು ಸ್ಟಾರ್ಟ್​ ಅಪ್​ಗಳೊಂದಿಗೆ ಯುವಕರು ಮುಂದೆ ಬರಬೇಕಿದೆ. ಡಿಜಿಟಲ್​ ಕ್ರಾಂತಿಯನ್ನು ಹೆಚ್ಚಿಸಬೇಕಿದೆ ಎಂದು ಅವರು ಹೇಳಿದರು.

              ಸಚಿವರು ತಮಾಷೆ ಮಾಡುತ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದರೂ, ತಾವು ವಿಶ್ವಾಸಾರ್ಹ ಮೂಲಗಳಿಂದ ಇದನ್ನು ಹೇಳಿರುವುದಾಗಿ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries