HEALTH TIPS

ಅಜಾನೂರಿನ ಅಂಗಳಗಳಲ್ಲಿ ಹಾರಲಿರುವುದು ಫ್ಲವರ್ಸ್ ಕುಟುಂಬ ಶ್ರೀ ತಯಾರಿಸಿದ ರಾಷ್ಟ್ರ ಧ್ವಜಗಳು.


              ಕಾಸರಗೋಡು:  "ಹರ್ ಘರ್ ತಿರಂಗಾ"ದ ಭಾಗವಾಗಿ ಅಜನೂರ್ ಪಂಚಾಯತಿನ ಮನೆಯ ಅಂಗಳಗಳಲ್ಲಿ ಹಾರಡಲಿರುವುದು ಫ್ಲವರ್ಸ್ ಸಿ ಡಿ ಎಸ್ ತಯಾರಿಸಿದ ರಾಷ್ಟ್ರ ಧ್ವಜಗಳು. 75ನೇಯ ಸ್ವಾತಂತ್ರ್ಯಾ ದಿನಾಚರಣೆಯ ಭಾಗವಾಗಿ "ಹರ್ ಗರ್ ತಿರಂಗ" ದ ಅನುಸಾರ ಆಗಸ್ಟ್ 13ರಿಂದ 15ರ ವರೆಗೆ ಎಲ್ಲಾ ಮನೆಗಳಲ್ಲೂ ಧ್ವಜವನ್ನು ಹಾರಿಸಲು ಪ್ರಧಾನಿ ಸೂಚಿಸಿದ್ದಾರೆ. . ಅದಕ್ಕಾಗಿ ಧ್ವಜ ಸಂಹಿತೆಯ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿ ರಾಷ್ಟ್ರ ದ್ವಜವನ್ನು ನಿರ್ಮಿಸಲಾಗುವುದು. 30 ಸೆಂಟಿಮೀಟರ್ ಉದ್ದ 20 ಸೆಂಟಿಮೀಟರ್ ಅಗಲ ಇರುವ ಧ್ವಜವನ್ನು ಹತ್ತಿ ಮಿಶ್ರಿತ ಬಟ್ಟೆಯಿಂದ ನಿರ್ಮಿಸಲಾಗುತ್ತಿದೆ.



                ಒಂದು ಪತಾಕೆಯ ಬೆಲೆ 30ರೂಪಾಯಿ. ಪಂಚಾಯತಿನ ಎಲ್ಲಾ ಮನೆಗಳಿಗೂ ಅಗತ್ಯಕ್ಕನುಸಾರವಾಗಿ ಧ್ವಜಗಳನ್ನು ನಿರ್ಮಿಸುವುದು ಫ್ಲವರ್ಸ್ ಕುಟುಂಬಶ್ರೀ ಒಕ್ಕೂಟವಾಗಿದೆ. ಇದುವರೆಗೆ 5500 ಪತಾಕೆಗಳಿಗೆ ಆರ್ಡರ್ ಲಭಿಸಿದೆ. ಎಮ್ ವಿ ಕೋಮಳವಲ್ಲಿ, ಪಿ ವಿ ಲಕ್ಷ್ಮಿ , ಕೆ ವಿ ಅಂಬಿಕಾ, ಪಿ ಶೈನಿ, ವಿ ಶೈಲಜಾ, ಎ ಶೀಭಾ, ಎಂ ಅಶ್ವತಿ, ವಿ ಎ ಶ್ಯಾಮ ಎಂಬಿವರು ಈ ಗುಂಪಿನ ಸದಸ್ಯರು. ಆಗಸ್ಟ್ 10ರ ಮೊದಲು ಪತಾಕೆ ಗಳನ್ನು ಪಂಚಾಯತ್ ಮುಖಾಂತರ ವಿತರಣೆ ನಡೆಸಲಾಗುವುದು. ಅಜಾನೂರು ಪಂಚಾಯತಿನ ವೆಳ್ಳಿಕ್ಕೊತ್ ನಲ್ಲಿ ಫ್ಲವರ್ಸ್ ಯೂನಿಟ್ ಕಾರ್ಯಚರಿಸುತ್ತಿದೆ. ಬಹಳ ಗೌರವಾಧರಗಳಿಂದ ಪತಾಕೆಗಳನ್ನು ನಿರ್ಮಿಸಲಾಗುವುದು ಎಂದು ಸಿ ಡಿ ಎಸ್ ಚೆಯರ್ ಪರ್ಸನ್ ಎಂ ವಿ ರತ್ನ ಕುಮಾರಿ ಹೇಳಿದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries