HEALTH TIPS

ನಿಮಗೆ ರಜೆ ಕೊಟ್ಟಿದ್ದೇನೆ…....ಹಾಗೆಂದು ನೀರಿಗೆ ಜಿಗಿಯಬೇಡಿ….…. ಪಠ್ಯ ಪುಸ್ತಕಗಳ ಪುಟಗಳನ್ನು ತಿರುವಿ…ಸ್ಮಾರ್ಟ್ ಆಗಬೇಡವೇ….ಮಾಸ್ ಎಂಟ್ರಿಯಾದ ಆಲಪ್ಪುಳ ಕಲೆಕ್ಟರ್


               ಆಲಪ್ಪುಳ: ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಕ್ಕಳಿಗೆ ಪ್ರೀತಿಯ ಸೂಚನೆಗಳೊಂದಿಗೆ ವಿ.ಆರ್.ಕೃಷ್ಣ ತೇಜ ಐ.ಎ.ಎಸ್ ಜಾಲತಾಣಗಳಲ್ಲಿ ಬಹುಶ್ರುತರಾಗಿದ್ದಾರೆ.
        ತೀವ್ರ ಪ್ರವಾಹದ ಹಿನ್ನೆಲೆಯಲ್ಲಿ ಅಲಪ್ಪುಳ ಸಬ್ ಕಲೆಕ್ಟರೇಟ್ ಆಗಿದ್ದಾಗ ಆದ ಅನುಭವಗಳನ್ನಿರಿಸಿ ಇದೀಗ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಫೇಸ್‍ಬುಕ್ ಪೋಸ್ಟ್ ಮೂಲಕ ಸಂದೇಶ ನೀಡಿ ಜನಮನಸೂರೆಗೊಂಡಿರುವರು.
      ಭಾರೀ ಮಳೆಯಿಂದಾಗಿ ಆಲಪ್ಪುಳ ಸೇರಿದಂತೆ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಶಾಲೆಗೆ ರಜೆ ಇರುವ ಕಾರಣ ಮಕ್ಕಳು ಜಲಮೂಲಗಳಿಗೆ ನುಗ್ಗಿ ಅಪಾಯ ಉಂಟು ಮಾಡಬಾರದು ಎಂದು ಸೂಚನೆ ನೀಡಿದರು. ಇದು ರಜಾದಿನವೆಂದು ಭಾವಿಸಬೇಡಿ ಮತ್ತು ನೀರಿನಲ್ಲಿ ಜಿಗಿಯಲು ಅಥವಾ ಸ್ಪರ್ಧೆಗಿಳಿದು ಈಜಿಗಿಳಿದು ಜೀವಹಾನಿಗೆ ಕಾರಣವಾಗಬೇಡಿ. ನಮ್ಮ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಎಲ್ಲರೂ ಮನೆಯಲ್ಲೇ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
          ಪಾಲಕರು ಕೆಲಸಕ್ಕೆ ಹೋಗಿರಬಹುದು.  ಅವರಿಲ್ಲ ಎಂದುಕೊಂಡು ಹೊರಗೆ ಹೋಗಬೇಡಿ. ಸಾಂಕ್ರಾಮಿಕ ರೋಗ ಪೂರ್ಣ ಗುಣಮುಖವಾಗದೆ ಪ್ರಸರಣದ ಸಮಯವೂ ಆಗಿದೆ. ಜಾಗರೂಕರಾಗಿರಿ.
            ಸಮಯಕ್ಕೆ ಸರಿಯಾಗಿ ತಿನ್ನಿರಿ. ಇದು ರಜೆ ಎಂದು ಯೋಚಿಸಬೇಡಿ, ಮತ್ತು ಪಠ್ಯ ಪುಸ್ತಕಗಳತ್ತ ಗಮನಿಸಿ.  ಚೆನ್ನಾಗಿ ಓದಿ ಸ್ಮಾರ್ಟ್ ಆಗಬೇಕು ಎಂದು ಫೇಸ್ ಬುಕ್ ಪೇಜ್ ಮೂಲಕ ಜಿಲ್ಲಾಧಿಕಾರಿ ಸಲಹೆ ನೀಡಿರುವರು. ಜಿಲ್ಲಾಧಿಕಾರಿಗಳ ಈ ಪೋಸ್ಟ್ ಅನ್ನು ಹಲವು ಮಂದಿ ಶೇರ್ ಮಾಡಿದ್ದಾರೆ. ಎಂಟ್ರಿ ಸೂಪರ್ ಎಂದು ಹಲವರ ಅಭಿಪ್ರಾಯ.
           ವಿವಾದಗಳಿಂದಾಗಿ ಶ್ರೀರಾಮ್ ವೆಂಕಟರಾಮನ್ ಅವರನ್ನು ನಿನ್ನೆ ಅಲಪ್ಪುಳ ಜಿಲ್ಲಾಧಿಕಾರಿ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ನಿರ್ದೇಶನಾಲಯ ನಿರ್ದೇಶಕರಾಗಿದ್ದ  ವಿಆರ್ ಕೃಷ್ಣ ತೇಜ ಅವರನ್ನು ಅಲಪ್ಪುಳ ಕಲೆಕ್ಟರ್ ಆಗಿ ನೇಮಿಸಲಾಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries