HEALTH TIPS

ಬದಿಯಡ್ಕದಲ್ಲಿ ಆಟಿಡೊಂಜಿ ಕೂಟ: ಪರಂಪರೆಯ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳು ಸಮಕಾಲಿಕ: ಡಾ.ಶ್ರೀನಿಧಿ ಸರಳಾಯ ಅಭಿಮತ


               ಬದಿಯಡ್ಕ: ಆμÁಢ ಮಾಸ ಜನಜೀವನದ ಮೇಲೆ ಅಪಾರವಾದ ಪರಿಣಾಮವನ್ನು ಉಂಟುಮಾಡುತ್ತದೆ.  ದೇಹದ ಆರೋಗ್ಯ ಸಮತೋಲನೆಗಾಗಿ ಪ್ರಕೃತಿದತ್ತವಾದ ಆಹಾರ ಪದ್ಧತಿ, ಔಷಧಗಳ ಸೇವನೆ ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿತ್ತು. ಆದರೆ ಕಾಲದೊಂದಿಗೆ ಜೀವನದ ರೀತಿನೀತಿಗಳೂ ಬದಲಾಗಿ ವೇಗದ ಬದುಕು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರುವಲ್ಲಿ  ಉದಾಸೀನ ಭಾವ ತಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಹಿಂದಿನ ಆಚರಣೆಗಳನ್ನು ಮತ್ತೆ ನೆನಪಿಸಿ ಜನರನ್ನು ಅದರತ್ತ ಆಕರ್ಷಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಪ್ರಸಿದ್ದ ಜನಪರ ವೈದ್ಯ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
          ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಾಸರಗೋಡು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಇದರ ಮಾರ್ಗದರ್ಶನದಲ್ಲಿ ಬದಿಯಡ್ಕ  ವಲಯದ ಬದಿಯಡ್ಕ ಮತ್ತು ವಿದ್ಯಾಗಿರಿ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರಗಿದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
         ಈ ಸಂದರ್ಭದಲ್ಲಿ ಆಟಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಧಾರ್ಮಿಕ ಮುಖಂಡ ಗೋಪಾಲಕೃಷ್ಣ ವಾಂತಿಚ್ಚಾಲು ಅವರು  ಸಂಪ್ರದಾಯ, ಆಚಾರ ವಿಚಾರಗಳು ಒಂದು ಕಾಲಘಟ್ಟಕ್ಕೆ ಸೀಮಿತವಲ್ಲ. ಅದು ಎಲ್ಲಾ ಕಾಲಕ್ಕೂ ಸಲ್ಲುವಂತವುಗಳು.  ಹಿಂದಿನ ಜನರ  ಜೀವನ ಕ್ರಮ ಇಂದು ನಾವು ಅನುಸರಿಸಿ ನಾಳೆ ಮುಂದಿನ ಜನಾಂಗಕ್ಕೆ ಹಸ್ತಾಂತರಿಸಬೇಕು. ಆಟಿಯ ಆಚರಣೆಗಳೂ ಅದಕ್ಕೆ ಹೊರತಲ್ಲ.  ಆರೋಗ್ಯಪೂರ್ಣ ಬದುಕಿಗೆ ಪೂರ್ವಜರ ಜೀವನ ಕ್ರಮ ಅತ್ಯಂತ ಸೂಕ್ತ. ಇಂದಿನ ಕಾಲದಲ್ಲಿಯೂ ಅವೆಲ್ಲವನ್ನೂ ಅಳವಡಿಸಿಕೊಂಡು ಬದುಕನ್ನು ಹಸನಾಗಿಸಬೇಕು ಎಂದರು.
           ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ ಆರ್ ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು.  ಗ್ರಾಮ ಪಂಚಾಯತ್ ಸದಸ್ಯರಾದ ಶುಭಲತಾ, ತಾರನಾಥ ರೈ, ಬಾಲಕೃಷ್ಣ ಶೆಟ್ಟಿ, ಈಶ್ವರ ನಾಯ್ಕ, ಪರ್ಯಾಪ್ತ ಸಿನಿಮಾ ನಿರ್ದೇಶಕ ಮಧುಸೂದನ ಬಲ್ಲಾಳ್ ಅಡ್ವಳ, ಜನಜಾಗೃತಿ ವೇದಿಕೆಯ ಅಖಿಲೇಶ್ ನಗುಮುಗಂ, ವಿದ್ಯಾಗಿರಿ ಒಕ್ಕೂಟದ ಅಧ್ಯಕ್ಷ ತಾರನಾಥ ರೈ, ಬದಿಯಡ್ಕ ವಲಯ ಒಕ್ಕೂಟದ ಅಧ್ಯಕ್ಷ ರೋಹಿತಾಕ್ಷ, ಡಾ ಶಂಕರ ಪಾಟಾಳಿ, ಈಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
          ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆ ಕು.ಪ್ರತೀತಿ ನೆಟ್ಟಣಿಗೆ ಪ್ರದರ್ಶಿಸಿದ  ಯಕ್ಷ ನೃತ್ಯ ಜನಮನ ಸೆಳೆಯಿತು. ವಸಂತ ಬಾರಡ್ಕ, ಮುರಳಿ ನೀರ್ಚಾಲ್, ರಾಜೇಶ್ ರೈ  ಏಳ್ಕಾನ, ಮನೀμï, ಸಮನ್ವಿತಾಗಣೇಶ್ ಮುಂತಾದವರು ಗಾಯನದ ಮೂಲಕ ಪ್ರೇಕ್ಷಕರ ಮನರಂಜಿಸಿದರು.   ಕಾರ್ಯಕ್ರಮದಲ್ಲಿ ಹಲವು ಸಂಘದ ಸಮಿತಿಯ ಸದಸ್ಯರು ಮಾಡಿದ ವಿಶೇಷ ಆಟಿಯ ವೈವಿಧ್ಯಮಯ ಖಾದ್ಯಗಳ ವಿಶೇಷ ಸಿಹಿತಿಂಡಿಗಳ ಪ್ರದರ್ಶನ ನಡೆಸಲಾಯಿತು. ಆಟಿಯ ಆಹಾರ ಪ್ರಧಾನ ಆಕರ್ಷಣೆಯಾಗಿತ್ತು.
            ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಜಲಜಾಕ್ಷಿ ಸ್ವಾಗತಿಸಿ ಕವಿತಾ ರೈ ವಂದಿಸಿದರು. ಬದಿಯಡ್ಕ ವಲಯದ ಮೇಲ್ವಿಚಾರಕ ದಿನೇಶ್ ಕೊಕ್ಕಡ  ನಿರೂಪಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries