ನಿಮ್ಮಲ್ಲಿ ಗೂಗಲ್ ಪೇ ಇದೆಯೇ?: ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೆಸರು ದುರ್ಬಳಕೆ ಮಾಡಿ ಮತ್ತೆ ವಂಚನೆ ಯತ್ನ: ದೂರು ದಾಖಲು


              ತಿರುವನಂತಪುರ: ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೆಸರಿನಲ್ಲಿ ಮತ್ತೊಂದು ವಂಚನೆ ಯತ್ನ ನಡೆದಿದೆ. ಆರೋಗ್ಯ ಇಲಾಖೆಯ ಹಲವಾರು ಉನ್ನತ ಹುದ್ದೆಯಲ್ಲಿರುವ ವೈದ್ಯರಿಗೆ ತಪ್ಪಾಗಿ ಸಚಿವರ ಪೋಟೋ ಇರುವ ವಾಟ್ಸಾಪ್ ಸಂದೇಶ ರವಾನಿಸಲಾಗಿದೆ. ಈ ಬಗ್ಗೆ ಪೋಲೀಸರಿಗೆ ದೂರು ನೀಡಲಾಗಿದೆ.
         ನಮಗೆ ತುರ್ತು ಸಹಾಯ ಬೇಕು, ನಿಮ್ಮಲ್ಲಿ ಗೂಗಲ್ ಪೇ ಇದೆಯೇ? ಎಂದು           ಸಚಿವರ ಹೆಸರಿನಲ್ಲಿ ಬರುತ್ತಿರುವ ಸಂದೇಶ ವಂಚನೆ ಎಂದು ಅರಿವಾದಾಗ ಸ್ಕ್ರೀನ್‍ಶಾಟ್ ಸಮೇತ ಸಚಿವರಿಗೆ ಮಾಹಿತಿ ನೀಡಲಾಗಿದೆ. ನಂತರ ದೂರು ದಾಖಲಿಸಲಾಯಿತು.
            ಈ ಹಿಂದೆಯೂ ಇದೇ ರೀತಿಯ ವಂಚನೆಗೆ ಯತ್ನಿಸಲಾಗಿತ್ತು. ದೂರು ದಾಖಲಾದಾಗ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಈ ರೀತಿಯ ವಾಟ್ಸ್ ಆಫ್ ಸಂದೇಶ  91 95726 72533 ಎಂಬ ಸಂಖ್ಯೆಯಿಂದ ಬಂದಿದೆ. ಈ ರೀತಿಯ ವಂಚನೆಗಳ ವಿರುದ್ಧ ಸಾರ್ವಜನಿಕರು ಜಾಗೃತರಾಗಬೇಕು ಎಂದು ಸಚಿವರು ಮನವಿ ಮಾಡಿರುವರು.
Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries